ಸೋಮವಾರ, ಏಪ್ರಿಲ್ 28, 2025
HomekarnatakaBangalore Rain: ಬೆಂಗಳೂರಿನಲ್ಲಿ ವರುಣನ ಅಬ್ಬರ.. ರಾಜಧಾನಿ ಮತ್ತೆ ಮುಳುಗುವ ಆತಂಕ

Bangalore Rain: ಬೆಂಗಳೂರಿನಲ್ಲಿ ವರುಣನ ಅಬ್ಬರ.. ರಾಜಧಾನಿ ಮತ್ತೆ ಮುಳುಗುವ ಆತಂಕ

- Advertisement -

ಬೆಂಗಳೂರು:Bangalore Rain ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ರಾತ್ರಿಯಿಂದಲೇ ಎಡೆ ಬಿಡದೇ ಮಳೆ ಸುರಿಯುತ್ತಿದ್ದು. ಮತ್ತೆ ರಾಜಧಾನಿಗೆ ಮುಳುಗುವ ಆತಂಕ ಎದುರಾಗಿದೆ. ಭಾನುವಾರದಿಂದಲೇ ಬೆಂಗಳೂರಿನಲ್ಲಿ ಮೋಡ ಕವಿದ ವಾತವರಣವಿದ್ದು ಸೋಮವಾರ ಸಂಜೆ ಮಳೆ ಶುರುವಾಗಿದೆ.

ರಿಚ್ಮಂಡ್‌, ಕಾರ್ಪೊರೇಷನ್‌, ಕೆಆರ್‌ ಮಾರ್ಕೆಟ್‌, ಮೆಜೆಸ್ಟಿಕ್‌, ವಿಲ್ಸನ್‌ ಗಾರ್ಡನ್‌, ಜಯನಗರ, ಮಲ್ಲೇಶ್ವರಂ, ಯಶವಂತಪುರ, ರಾಜಾಜಿನಗರ, ಬಸವೇಶ್ವರ್ ನಗರ, ಬನಶಂಕರಿ ಸೇರಿದಂತೆ ಬೆಂಗಳೂರಿನಾದ್ಯಂತ ಭಾರೀ ಮಳೆಯಾಗಿದೆ. ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಜನರು ತೊಂದರೆಗೀಡಾಗಿದ್ದಾರೆ. ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ತೊಂದರೆ ಅನುಭವಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಭಾರಿ ಮಳೆಗೆ ಬೆಂಗಳೂರಿನ ಪ್ರತಿಷ್ಟಿತ ಬಡಾವಣೆಗಳೆ ಮುಳುಗಿ ಹೋಗಿದ್ವು.ರೇನ್ ಬೋ ಡ್ರೈವ್ ಲೇಔಟ್, ಬಾಗ್ಮನೆ ಟೆಕ್ ಪಾರ್ಕ್, ಸರ್ಜಾರಪುರದ ಔಟರ್ ರಿಂಗ್ ರೋಡ್ ಸೇರಿದಂತೆ ಐಟಿ, ಬಿಟಿ ಕಂಪನಿಗಳೇ ಹೆಚ್ಚಾಗಿರೋ ಏರಿಯಾಗಳು ರಣ ಮಳೆಗೆ ತತ್ತರಿಸಿದ್ವು. ಬೆಂಗಳೂರು ಮಳೆ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡೋದ್ರ ಜೊತೆಗೆ ರಾಜಧಾನಿಯ ಮಾನ ಹರಾಜಾಗಿತ್ತು. ಮಳೆ ಸಮಸ್ಯೆಗೆ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರೋದೇ ಕಾರಣವಾಗಿತ್ತು. ಸರ್ಕಾರವೂ ಇದನ್ನ ಗಂಭೀರವಾಗಿ ಪರಿಗಣಿಸಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಸಿತ್ತು. ಇದೀಗ ಮತ್ತೆ ಬೆಂಗಳೂರಿನಲ್ಲಿ ಭಾರಿ ಮಳೆಯಾಗ್ತಿರೋದು ಮತ್ತಷ್ಟು ಆತಂಕಕ್ಕೆ ಈಡು ಮಾಡಿದೆ. ಸೋಮವಾರ ರಾತ್ರಿ ಆರಂಭವಾಗಿರೋ ಮಳೆ ಬೆಳಗ್ಗೆಯೂ ಸುರಿಯತ್ತಿದೆ.  

ಹವಾಮಾನ ಇಲಾಖೆ ಬೆಂಗಳೂರು ಮತ್ತು ಕರ್ನಾಟಕದ ವಿವಿಧ ಭಾಗಗಳಲ್ಲಿ ನಾಳೆಯವರೆಗೆ ಯೆಲ್ಲೊ ಅಲರ್ಟ್‌ ನೀಡಿದೆ. ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದ ವಿವಿಧ ಭಾಗಗಳಲ್ಲಿಯೂ ಭಾರಿ ಮಳೆಯಾಗಿದೆ. ಹುಬ್ಬಳ್ಳಿಯಲ್ಲಿ ನಿನ್ನೆ ರಾತ್ರಿ ಭಾರಿ ಮಳೆ ಸುರಿದ್ದು, ರಸ್ತೆಗಳು ಜಲಾವೃತವಾಗಿವೆ.

ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್‌ ನೀಡಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಮಂಡ್ಯ, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿಯೂ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಮತ್ತೆ ಹವಾಮಾನ ಬದಲಾಗುತ್ತಿದ್ದು, ಮಕ್ಕಳಲ್ಲಿ, ಹಿರಿಯರಲ್ಲಿ ಜ್ವರ ನೆಗಡಿ ಕಾಣಿಸಿಕೊಳ್ಳುತ್ತಿದೆ. ವೈರಲ್‌ ಜ್ವರದ ಆತಂಕವೂ ಇದ್ದು, ಎಚ್ಚರಿಕೆಯಿಂದ ಇರುವುದು ಉತ್ತಮ. ಕಳೆದ ಕೆಲವು ದಿನಗಳಿಂದ ಆಸ್ಪತ್ರೆಗೆ ಶೀತ, ಜ್ವರವೆಂದು ದಾಖಲಾಗುವವರ ಸಂಖ್ಯೆಯೂ ಹೆಚ್ಚಾಗಿದ್ದು, ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ.

ಇದನ್ನೂ ಓದಿ : Dr. Shivaram Karanta Huttooru award :ನಟ ರಮೇಶ್​ ಅರವಿಂದ್​ಗೆ ಡಾ.ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರದಾನ

Bangalore Rain It has been raining since Tuesday night in Bangalore There is a fear of drowning in the capital again

RELATED ARTICLES

Most Popular