ಹಾಲು ಖರೀದಿ ಹೊತ್ತಲ್ಲಿ ಯಾರೂ ಮದ್ಯ ಖರೀದಿ ಮಾಡಲ್ಲ : ಸಂಪೂರ್ಣ ಲಾಕ್ ಡೌನ್ ಮಾಡಿ ಅಂತಿದ್ದಾರೆ ಬಾರ್ ಮಾಲೀಕರು

ಕೊಪ್ಪಳ : ಕೊರೊನಾ ಸೋಂಕಿನ ಹಿನ್ನೆಲೆಯಲ್ಲೀಗ ರಾಜ್ಯದಾದ್ಯಂತ ಕೊರೊನಾ ಕರ್ಪ್ಯೂ ಜಾರಿಯಲ್ಲಿದೆ. ಮದ್ಯ ಖರೀದಿಗೆ 6 ಗಂಟೆಯಿಂದ 10 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಹಾಲು ಖರೀದಿ ಸೋ ಹೊತ್ತಲ್ಲಿ, ಯಾರೂ ಮದ್ಯ ಖರೀದಿ ಮಾಡಲ್ಲ. ವ್ಯಾಪಾರಕ್ಕಿಂತ ಆರೋಗ್ಯವೇ ಮುಖ್ಯ ಹೀಗಾಗಿ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಿ ಅಂತಾ ಬಾರ್ ಮಾಲೀಕರು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಬೆಳಗ್ಗಿನ ವೇಳೆಯಲ್ಲಿ ಮದ್ಯದಂಗಡಿಗಳನ್ನು ತೆರೆಯುವುದರಿಂದ ಗ್ರಾಹಕರು ಬರುತ್ತಿಲ್ಲ. ಇದರಿಂದಾಗಿ ಸಾಕಷ್ಟು ನಷ್ಟವಾಗುತ್ತಿದೆ. ಒಂದೊಮ್ಮೆ ಸಂಪೂರ್ಣ ಲಾಕ್ ಡೌನ್ ಮಾಡಿ, ಬಾರ್ ಗಳನ್ನು ಮುಚ್ಚಬೇಕು. ಕೊರೊನಾ ಸೋಂಕು ಸಂಪೂರ್ಣವಾಗಿ ಮುಕ್ತವಾದ ನಂತರದಲ್ಲಿ ಬಾರ್ ಗಳನ್ನು ಆರಂಭಿಸಬಹುದು. ವ್ಯಾಪಾರಕ್ಕಿಂತ ಆರೋಗ್ಯವೇ ಮುಖ್ಯ ಅನ್ನುತ್ತಿದ್ದಾರೆ ಕೊಪ್ಪಳದ ಬಾರ್ ಮಾಲೀಕರು.

ಕೊರೊನಾ ಕರ್ಪ್ಯೂ ನಡುವಲ್ಲೇ ಬಾರ್ ಗಳನ್ನು ತೆರೆಯಲು ಅವಕಾಶ ಕಲ್ಪಿಸಿರುವ ರಾಜ್ಯ ಸರಕಾರದ ಕ್ರಮದ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಬಾರ್ ಮಾಲೀಕರೇ ಖುದ್ದು ಬಾರ್ ಬಂದ್ ಮಾಡಿ ಅಂತಿದ್ದಾರೆ. ಆದರೆ ರಾಜ್ಯ ಸರಕಾರ ಮಾತ್ರ ಬಾರ್ ಗಳನ್ನು ಬಂದ್ ಮಾಡಲು ಸುತಾರಾಂ ಸಿದ್ದವಿಲ್ಲ.

ಅಗತ್ಯವಸ್ತುಗಳ ಖರೀದಿಯ ನೆಪದಲ್ಲಿ ಜನರನ್ನು ಸರಕಾರವೇ ಬಲವಂತವಾಗಿಯೇ ಹೊರಗೆ ಬರುವಂತೆ ಮಾಡುತ್ತಿದೆ. ಮಧ್ಯಾಹ್ನ 12 ಗಂಟೆಯವರೆಗೆ ಜನರು ಒಂದಿಲ್ಲೊಂದು ನೆಪದಲ್ಲಿ ಮನೆಯಿಂದ ಹೊರಗೆ ಬರುತ್ತಿರೋದ್ರಿಂದಲೇ ಸೋಂಕು ವ್ಯಾಪಕವಾಗಿ ಹರಡುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

Comments are closed.