ವಿಜಯಪುರ : Basanagowda Patil Yatnal : ರಾಜ್ಯದಲ್ಲಿ ಪಿಎಫ್ಐ ಹಾಗೂ ಎಸ್ಡಿಪಿಐ ಮುಖಂಡರು ಹಾಗೂ ಕಾರ್ಯಕರ್ತರ ಬಂಧನದ ವಿಚಾರವಾಗಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಎಸ್ಡಿಪಿಐ ಹಾಗೂ ಪಿಎಫ್ಐನಂತಹ ಸಂಘಟನೆಗಳನ್ನು ಆದಷ್ಟು ಬೇಗ ಬ್ಯಾನ್ ಮಾಡಬೇಕು. ಈ ಎರಡೂ ಸಂಘಟನೆಗಳು ರಾಜ್ಯದಲ್ಲಿ ದೇಶ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿವೆ ಎಂದು ಯತ್ನಾಳ್ ಆರೋಪಿಸಿದ್ದಾರೆ.
ವಿಜಯಪುರದಲ್ಲಿ ಈ ವಿಚಾರವಾಗಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿಮಿಯ ಮತ್ತೊಂದು ಪ್ರತಿರೂಪವೇ ಪಿಎಫ್ಐ. ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸಾರ್ವಜನಿಕ ಪ್ರದೇಶದಲ್ಲಿ ಬಾಂಬ್ ಹಾಕುವಂತಹ ಪ್ರಯತ್ನವನ್ನು ಪಿಎಫ್ಐ ಮಾಡಿದೆ. ಅನೇಕ ಗಂಭೀರ ಪ್ರಕರಣಗಳಲ್ಲಿ ಪಿಎಫ್ಐ ಸಂಘಟನೆಗಳ ಕೈವಾಡ ಬಯಲಾಗಿದೆ. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಅತ್ಯಂತ ದೃಢ ನಿಲುವು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇಡೀ ದೇಶದ ಇತಿಹಾಸದಲ್ಲಿ ಒಂದೇ ರಾತ್ರಿ 200 ಕಡೆಗಳಲ್ಲಿ ದಾಳಿ ಮಾಡಿದಾಗ ವಿದೇಶಿ ಹಣದ ದಾಖಲೆ ಸಿಕ್ಕಿದೆ. ದೇಶಭಕ್ತರು ಎರಡೂ ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಪ್ರಧಾನಿ ಹಾಗೂ ಗೃಹ ಮಂತ್ರಿಗಳು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ನಿಶ್ಚಿತವಾಗಿ ಶೀಘ್ರದಲ್ಲಿಯೇ ಪಿಎಫ್ಐ ಹಾಗೂ ಎಸ್ಡಿಪಿಐ ಸಂಘಟನೆಗಳು ಬ್ಯಾನ್ ಆಗುತ್ತವೆ ಎಂಬ ವಿಶ್ವಾಸವಿದೆ. ಸಿಮಿ ದೇಶ ವಿರೋಧಿ ಚಟುವಟಿಕೆ ಮೊದಲು ಆರಂಭವಾಗಿದ್ದೇ ವಿಜಯಪುರದಲ್ಲಿ. ಬಳಿಕ ಇದು ಇಡೀ ದೇಶದಲ್ಲಿ ಬೆಳೆದು ಸಿಮಿ ಆಗಿತ್ತು. ಬಳಿಕ ಪಿಎಫ್ಐ ಆಗಿ ಪರಿವರ್ತನೆ ಆಗಿದೆ. ಯಾರೇ ಇದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನು ಓದಿ : Siddaramaiah :‘ಕಟೀಲ್ ಒಬ್ಬ ವಿದೂಷಕ, ಮೆಚ್ಯೂರಿಟಿ ಇಲ್ಲದ ವ್ಯಕ್ತಿ’ : ನಳೀನ್ ಕುಮಾರ್ ಕಟೀಲ್ ಆರೋಪಕ್ಕೆ ಸಿದ್ದು ತಿರುಗೇಟು
Basanagowda Patil Yatnal demands to ban PFI and SDPI organizations.