ಬೆಂಗಳೂರು : bjp mla uday garudachar : ಚುನಾವಣಾ ಪ್ರಮಾಣ ಪತ್ರದಲ್ಲಿ ತಪ್ಪು ಮಾಹಿತಿಯನ್ನು ನಮೂದಿಸಿದ್ದಾರೆ ಎಂಬ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಾಸಕ ಉದಯ್ ಗರುಡಾಚಾರ್ಗೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯವು 2 ತಿಂಗಳುಗಳ ಕಾಲ ಶಿಕ್ಷೆಗೆ ಒಳಪಡಿಸಿದೆ. ಇದರ ಜೊತೆಯಲ್ಲಿ ಹತ್ತು ಸಾವಿರ ರೂಪಾಯಿ ದಂಡವನ್ನೂ ವಿಧಿಸಿದೆ. ಬಿಜೆಪಿಯ ಉದಯ್ ಗರುಡಾಚಾರ್ ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದ ಶಾಸಕರಾಗಿದ್ದಾರೆ .
2018ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಶಾಸಕ ಉದಯ್ ಗರುಡಾಚಾರ್ ತಮ್ಮ ವಿರುದ್ಧ ಇರುವ ಕ್ರಿಮಿನಲ್ ಕೇಸುಗಳನ್ನು ಮುಚ್ಚಿಟ್ಟಿದ್ದರು. ಆರ್ಒಸಿಯಿಂದ ಉದಯ್ ಗರುಡಾಚಾರ್ ಹಾಗೂ ಅವರ ಪತ್ನಿ ಅನರ್ಹಗೊಂಡಿದ್ದ ವಿಚಾರವನ್ನು ಉದಯ್ ಗರುಡಾಚಾರ್ ಪ್ರಮಾಣ ಪತ್ರದಲ್ಲಿ ಮುಚ್ಚಿಟ್ಟಿದ್ದರು. ಈ ಸಂಬಂಧ ಬೆಂಗಳೂರಿನ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕಾಶ್ ಎಂ. ಶೆಟ್ಟಿ ಎಂಬವರು ದೂರನ್ನು ದಾಖಲಿಸಿದ್ದರು .
ಕೇವಲ ಆರ್ಒಸಿಯಿಂದ ಅನರ್ಹಗೊಂಡಿದ್ದ ವಿಚಾರ ಮಾತ್ರವಲ್ಲದೇ ಪತ್ನಿಯ ಬ್ಯಾಂಕಿಂಗ್ ವಿವರಗಳನ್ನು ಉದಯ್ ಗರುಡಾಚಾರ್ ಮುಚ್ಚಿಟ್ಟಿದ್ದರು. ಮೆವರಿಕ್ ಹೋಲ್ಡಿಂಗ್ಸ್ನಲ್ಲಿ ಎಂಡಿಯಾಗಿದ್ದರೂ ಸಹ ಹೂಡಿಕೆದಾರ ಎಂದು ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದ್ದರು. ಈ ಎಲ್ಲಾ ವಿಚಾರಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪ್ರಕಾಶ್ ಎಂ ಶೆಟ್ಟಿ ಎಂಬವರು ದೂರನ್ನು ದಾಖಲಿಸಿದ್ದರು. ಈ ಸಂಬಂಧ ವಿಚಾರಣೆ ಕೈಗೆತ್ತಿಕೊಂಡಿದ್ದ 42ನೇ ಎಸಿಎಂಎಂ ನ್ಯಾಯಾಲಯವು ಬಿಜೆಪಿ ನಾಯಕ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಗರುಡಾಚಾರ್ಗೆ ಎರಡು ತಿಂಗಳುಗಳ ಕಾಲ ಜೈಲು ಶಿಕ್ಷೆ ಹಾಗೂ ಹತ್ತು ಸಾವಿರ ರೂಪಾಯಿ ದಂಡವನ್ನು ವಿಧಿಸಿ ಆದೇಶವನ್ನು ಹೊರಡಿಸಿದೆ.
ಇದನ್ನು ಓದಿ : Olavina Nildana:ತಾರಿಣಿಯ ಕಡೆ ವಾಲುತ್ತಿದ್ದಾನೆ ಸಿದ್ದಾಂತ್, ಕುತೂಹಲ ಹುಟ್ಟಿಸಿದ ಒಲವಿನ ನಿಲ್ದಾಣ
ಇದನ್ನೂ ಓದಿ : Ramesh Aravind : ಯಕ್ಷಗಾನ ವೇಷತೊಟ್ಟ ನಟ ರಮೇಶ್ ಅರವಿಂದ್ : ಕಲಾವಿದರಿಗೆ ದೊಡ್ಡ ನಮಸ್ಕಾರ ಎಂದಿದ್ಯಾಕೆ ?
bengaluru 42 ac mm court orders 2 month jail for bjp mla uday garudachar