Ramesh Aravind : ಯಕ್ಷಗಾನ ವೇಷತೊಟ್ಟ ನಟ ರಮೇಶ್ ಅರವಿಂದ್ : ಕಲಾವಿದರಿಗೆ ದೊಡ್ಡ ನಮಸ್ಕಾರ ಎಂದಿದ್ಯಾಕೆ ?

ಯಕ್ಷಗಾನ ಕರಾವಳಿಯ ಗಂಡುಕಲೆ. ಹಿರಿಯರಿಂದ ಹಿಡಿದು ಕಿರಿಯರ ವರೆಗೂ ಯಕ್ಷಗಾನವನ್ನು ಇಷ್ಟಪಡ್ತಾರೆ. ಕರಾವಳಿಗರ ಪಾಲಿಗೆ ಯಕ್ಷಗಾನ ಅನ್ನೋದು ಒಂದು ಕಲೆಯಷ್ಟೇ ಅಲ್ಲಾ, ಅದು ಭಕ್ತಿಯ ಸಮರ್ಪಣೆ. ನಟ, ನಟಿಯರು, ವಿದೇಶಿಗರು ಯಕ್ಷಗಾನಕ್ಕೆ ಮನಸೋಲುತ್ತಿದ್ದಾರೆ. ಆದ್ರೀಗ ಕನ್ನಡದ ಖ್ಯಾತ ನಟ ರಮೇಶ್ ಅರವಿಂದ (Ramesh Aravind) ಅವರು ಯಕ್ಷಗಾನದ ವೇಷತೊಟ್ಟು, ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೇ ಯಕ್ಷಗಾನ ಕಲಾವಿದರ ಸಾಧನೆಗಳನ್ನು ಕೊಂಡಾಡಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ ಹುಟ್ಟೂರು ಕೋಟದಲ್ಲಿ ಮೊನ್ನೆ ಕಾರಂತ ಹುಟ್ಟೂರ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿತ್ತು. ನಟ ರಮೇಶ್ ಅರವಿಂದ್ (Ramesh Aravind)ಅವರು ಶಿವರಾಮ ಕಾರಂತ ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಶಿವರಾಮ ಕಾರಂತರು ಯಕ್ಷಗಾನದ ಮೇಲೆ ಇಟ್ಟಿದ ಪ್ರೀತಿ, ಕಲೆಯನ್ನು ಉಳಿಸಲು ಅವರು ಮಾಡಿದ ಸಾಧನೆಯನ್ನು ಅರಿತ ನಟ ರಮೇಶ್ ಅರವಿಂದ್ ಅವರಿಗೂ ಯಕ್ಷಗಾನ ಮೇಲೆ ತುಡಿತ ಹೆಚ್ಚಿತ್ತು. ಜೀವನದಲ್ಲಿ ಒಮ್ಮೆಯಾದರೂ ಯಕ್ಷಗಾನ ವೇಷವನ್ನು ತೊಡಬೇಕು ಅಂತಾ ಕನಸು ಕಂಡಿದ್ದರು.

ಕುದ್ರುನೆಸ್ಟ್ ಹೋಮ್ ಸ್ಟೇನಲ್ಲಿ ತಂಗಿದ್ದ ವೇಳೆಯಲ್ಲಿ ತಮ್ಮ ಆಸೆಯನ್ನು ಡಾ.ವಿರೂಪಾಕ್ಷ ದೇವರಮನೆ ಅವರಿಗೆ ತಿಳಿಸಿದ್ದರು. ನಂತರದಲ್ಲಿ ಹೋಮ್ ಸ್ಟೇ ಮಾಲೀಕ ಪೋಕಸ್ ರಾಘ ವ್ಯವಸ್ಥೆಯನ್ನು ಕಲ್ಪಿಸಿದ್ದರು. ರಮೇಶ್‌ ಅರವಿಂದ ಯಕ್ಷಗಾನದ ವೇಷವನ್ನು ಸಂಪೂರ್ಣವಾಗಿ ತೊಟ್ಟು ಹೆಜ್ಜೆ ಕಲಿತು ಅದ್ಬುತವಾಗಿ ಯಕ್ಷಗಾನದ ಹೆಜ್ಜೆಯನ್ನು ಹಾಕಿದ್ದಾರೆ. ಯಕ್ಷಗಾನ ವೇಷ ಧರಿಸುವಾಗ ಇರುವ ಸೂಕ್ಷ್ಮತೆಗಳನ್ನು ಅರಿತುಕೊಂಡಿದ್ದಾರೆ. ಯಕ್ಷಗಾನದಲ್ಲಿ ಪಾತ್ರಧಾರಿಗಳೇ ತಮ್ಮ ವೇಷವನ್ನು ಮಾಡಿಕೊಳ್ಳಬೇಕು ಅನ್ನೋ ವಿಚಾರವನ್ನು ಅರಿತುಕೊಂಡು ಅಚ್ಚರಿಗೆ ಒಳಗಾಗಿದ್ದಾರೆ. ವೇಷಧಾರಣೆಯ ವೇಳೆಯಲ್ಲಿ ಬಟ್ಟೆಯಲ್ಲಿ ಒಟ್ಟು 42 ಕಟ್ಟುಗಳನ್ನು ಹಾಕಿದ್ದಾರೆ. ಇಂತಹ ಅಪರೂಪದ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಯಕ್ಷಗಾನ ಕಲಾವಿದರಿಗೆ ದೊಡ್ಡ ನಮಸ್ಕಾರ ಎಂದಿದ್ದಾರೆ.

ಇನ್ನು “ಯಕ್ಷಗಾನದ ವೇಷ ತೊಟ್ಟ ನನ್ನಲ್ಲಿ ಈಗ ದಿವ್ಯತೆಯ ಭಾವ ಬೆಳೆದಿದೆ.ಎಂಟಡಿ, ನೂರೈವತ್ತು ಕೆ.ಜಿ ಬೆಳೆದವನಂತೆ ಅನಿಸುತ್ತಿದೆ. ನಾನಿವತ್ತು ಬಹಳ ಶಕ್ತಿ ಶಾಲಿ, ಎದುರಿಗೇನಾದರೂ ರಾಕ್ಷಸರು ಬಂದರೆ ಹೊಡೆದುರುಳಿಸಿ ಬಿಡುತ್ತೇನೆ” ಎಂದು ಹೇಳಿದ್ದಾರೆ. ಹಾಗೆ ಯಕ್ಷಗಾನದ ವೇಷಭೂಷಣ ಹಾಗೂ ಹೆಜ್ಜೆ ಕಲಿಸಿದ ಶೈಲೇಶ್‌ ತೀರ್ಥಹಳ್ಳಿ ಅವರಿಗೆ ವಿಶೇಷ ಕೃತಜ್ಞತೆಯನ್ನು ಹೇಳಿದ್ದಾರೆ.

ಇದನ್ನೂ ಓದಿ : Kannadathi Serial : ಗಟ್ಟಿ ತರ್ಕ, ನ್ಯೂಸ್‌ ರಿಪೋಟರ್‌ ಹುನ್ನಾರಕ್ಕೆ ತಣ್ಣೀರೆರಚಿದ ಭುವಿ

ಇದನ್ನೂ ಓದಿ : Puneeth RajKumar Movie Gandhadagudi : “ಪುನೀತ್‌ ಪರ್ವ” ಕಾರ್ಯಕ್ರಮಕ್ಕೆ ಆಹ್ವಾನ : ಸಿಎಂ ಬೊಮ್ಮಾಯಿ ಆಹ್ವಾನಿಸಿದ ರಾಜ್ ಕುಟುಂಬ

ಇದನ್ನೂ ಓದಿ : Anil Kumble watched Kantara : ಕಾಂತಾರ ಸಿನಿಮಾ ವೀಕ್ಷಿಸಿ ಶಹಬ್ಬಾಸ್ ಅಂದ್ರು ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ

ನಟ ರಮೇಶ್‌ ಅರವಿಂದ್‌ ಯಕ್ಷಗಾನ ವೇಷದಲ್ಲಿರುವ ಕ್ರೀಯಾಶೀಲ ವಿನ್ಯಾಸಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೇಷತೊಟ್ಟು ಅದ್ಬುತವಾಗಿ ಪೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸದ್ಯ ರಮೇಶ್ ಅವರ ಯಕ್ಷಗಾನ ವೇಷ ತೊಟ್ಟ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗಿದ್ದು, ಕರಾವಳಿಗರು ರಮೇಶ್ ಅವರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

https://www.youtube.com/watch?v=vtfXt15KlEU

Actor Ramesh Aravind dressed as Yakshagana: Why is it a big salute to artists?

Comments are closed.