Colors Kannada Serial Kannadathi : ಕನ್ನಡತಿ : ಸಂಸ್ಥೆಯ ಜವಾಬ್ದಾರಿ ಭುವಿಯ ಹೆಗಲೇರಿಸಿದ ರತ್ನಮ್ಮಾ

ಕನ್ನಡ ವಾಹಿನಿಯಲ್ಲಿ(Colors Kannada Serial Kannadathi) ಬರುವ ಪ್ರತಿಯೊಬ್ಬ ಪಾತ್ರಧಾರಿಯು ತಮ್ಮ ಅದ್ಭುತ ನಟನೆಯಿಂದ ಜನರ ಮನಸ್ಸನ್ನು ಗೆದಿದ್ದಾರೆ. ಈ ಸೀರಿಯಲ್‌ನಲ್ಲಿ ವಿದ್ಯಾಸಂಸ್ಥೆ ಹಾಗೂ ಕೆಫೆ ಡೇ ವ್ಯವಹಾರವನ್ನು ಒಳಗೊಂಡ ತುಂಬು ಕುಟುಂಬದಲ್ಲಿ ನಡೆಯುವ ಕಥಾಹಂದರವನ್ನು ಒಳಗೊಂಡಿದೆ.

(Colors Kannada Serial Kannadathi)ಧಾರಾವಾಹಿಯಲ್ಲಿ ಬರುವ ರತ್ನಮಾಲಾ ಹಸಿರುಪೇಟೆ ಹಳ್ಳಿಯಿಂದ ಬಂದು ಕೇವಲ ಮೂವತ್ತು ಸಾವಿರ ಬಂಡವಾಳದಲ್ಲಿ ಕೆಫೆ ಡೇಯನ್ನು ತೆರೆದು ದೊಡ್ಡ ಮಟ್ಟದ ಉದ್ಯಮವನ್ನಾಗಿ ಬೆಳೆಸುತ್ತಾರೆ. ನಂತರದ ದಿನಗಳಲ್ಲಿ ತಮ್ಮದೇ ಒಂದು ವಿದ್ಯಾಸಂಸ್ಥೆಯನ್ನು ತೆರೆಯುತ್ತಾರೆ. ಆಮೇಲೆ ತಮ್ಮ ಮಗ ಹರ್ಷ ದೊಡ್ಡವನಾದ ಮೇಲೆ ಕೆಫೆಯ ಸಿಯುಓ ಆಗುತ್ತಾನೆ. ನಂತರದ ದಿನಗಳಲ್ಲಿ ರತ್ನಮ್ಮ ತನ್ನ ಆರೋಗ್ಯದಲ್ಲಿ ಏರುಪೇರು ಆಗಿ ಕ್ಯಾನ್ಸರ್‌ ರೋಗಕ್ಕೆ ತುತ್ತಾಗುತ್ತಾಳೆ. ಕ್ಯಾನ್ಸರ್‌ನಿಂದ ಬಳಲುತ್ತಿರುವಾಗ ರತ್ನಮ್ಮ ಮಗನಿಗೆ ಮದುವೆ ಮಾಡಿಸುತ್ತಾಳೆ. ಇನ್ನೂ ರತ್ನಮ್ಮ ಮೊದಲೇ ತೀರ್ಮಾನ ಮಾಡಿ ತನ್ನ ಮಗ ಹೆಂಡತಿ ಭುವಿ ಹೆಸರಲ್ಲಿ ಎಲ್ಲಾ ಆಸ್ತಿಯನ್ನು ಬರೆದಿರುತ್ತಾಳೆ. ಇದರ ಬಗ್ಗೆ ಅವಳು ಯಾರಿಗೂ ತಿಳಿಸಿರುವುದಿಲ್ಲ. ಈ ವಿಷಯದ ಬಗ್ಗೆ ಮಗ ಹರ್ಷ ಹಾಗೂ ಭುವನೇಶ್ವರಿಗೂ ತಿಳಿಸಿರುವುದಿಲ್ಲ.

ರತ್ನಮ್ಮನಿಗೆ ತಾನು ಹೆಚ್ಚಿನ ದಿನ ಬದುಕುವುದು ಇಲ್ಲ ಎಂದು ತಿಳಿದಿರುವುದರಿಂದ ತನ್ನ ಜವಾಬ್ದಾರಿಯನ್ನು ಒಂದೊಂದಾಗಿ ಸೊಸೆ ಭುವನೇಶ್ವರಿಗೆ ಒಪ್ಪಿಸುತ್ತಾ ಬರುತ್ತಾಳೆ. ಹಾಗೆ ತಮ್ಮ ವಿದ್ಯಾಸಂಸ್ಥೆಯ ವಾರ್ಷಿಕ ಸಭೆಯ ಜವಾಬ್ದಾರಿಯನ್ನು ಕೂಡ ಭುವಿಯ ಹೆಗಲಿಗೇರಿಸುತ್ತಾಳೆ. ಹಾಗೆ ವಾರ್ಷಿಕ ಸಭೆಯ ಮಹತ್ವವನ್ನು ಕೂಡ ಹೇಳುತ್ತಾಳೆ. ಸಂಸ್ಥೆಯ ವಾರ್ಷಿಕ ಹಣಕಾಸು ಲೆಕ್ಕಚಾರ, ಹೊಸ ಪ್ರಾಜೆಕ್ಟ್‌, ವೇತನ, ಹೊಸ ಜಾಗ ಖರೀದಿ, ಶಾಲಾ ಮಕ್ಕಳ ಪಠ್ಯೇತರ ವಿಚಾರ, ಬಡ ಮಕ್ಕಳ ಶಿಕ್ಷಣ ಹಾಗೂ ಇನ್ನಿತ್ತರ ವಿಚಾರಗಳ ಬಗ್ಗೆ ತಿರ್ಮಾನ ತೆಗೆದುಕೊಳ್ಳುವುದು ಇರುತ್ತದೆ. ಹಾಗೆ ಅದಕ್ಕೆ ಸಂಬಂಧಪಟ್ಟ ಫೈಲ್‌ನಲ್ಲಿ ಏನು ಇರುತ್ತದೆ ಎಂದು ತಿಳಿದುಕೊಳ್ಳುವಂತೆ ಹೇಳುತ್ತಾಳೆ.

ಇದನ್ನೂ ಓದಿ : Kannadathi Serial : ಗಟ್ಟಿ ತರ್ಕ, ನ್ಯೂಸ್‌ ರಿಪೋಟರ್‌ ಹುನ್ನಾರಕ್ಕೆ ತಣ್ಣೀರೆರಚಿದ ಭುವಿ

ಇದನ್ನೂ ಓದಿ : Olavina Nildana:ತಾರಿಣಿಯ ಕಡೆ ವಾಲುತ್ತಿದ್ದಾನೆ ಸಿದ್ದಾಂತ್, ಕುತೂಹಲ ಹುಟ್ಟಿಸಿದ ಒಲವಿನ ನಿಲ್ದಾಣ

ಇಷ್ಟು ಹೇಳಿ ಈ ಬಾರಿ ವಾರ್ಷಿಕ ಸಭೆಯನ್ನು ನೀನು ನಡೆಸು ಎಂದು ಹೇಳಿದ್ದಾಳೆ. ಇನ್ನೂ ಭುವಿ ಸಭೆಯನ್ನು ಪ್ರವೇಶಿಸಿದ್ದಾಗ ಎಲ್ಲರೂ ಹಿಂಜರಿಕೆಯನ್ನು ವ್ಯಕ್ತಪಡಿಸುತ್ತಾರೆ. ಅದಕ್ಕೆ ಭುವಿ ನಿಮಗೆ ನನ್ನ ಬಗ್ಗೆ ಸಂಶಯವಿದ್ದರೆ ಸಣ್ಣ ಪರೀಕ್ಷೆಯನ್ನು ನಡೆಸಿ ಎನ್ನುತ್ತಾಳೆ. ಆದರೆ ಅದರಲ್ಲಿ ಕೆಲವರು ಬೇಡ ಎನ್ನುತ್ತಾರೆ ಇನ್ನೂ ಕೆಲವರು ಕೆಲವೊಂದು ಮಹತ್ವದ ನಿರ್ಧಾರಗಳಿಗೆ ರತ್ನಮಾಲಾ ಅವರು ಬೇಕಾಗುತ್ತದೆ ಎನ್ನುತ್ತಾರೆ. ಅದಕ್ಕೆ ಅವಳು ಅದನ್ನು ನನ್ನ ಬಳಿ ಹೇಳಬಹುದು ಅದನ್ನು ನಾನು ಬಗೆಹರಿಸುತ್ತೇನೆ. ನನ್ನಿಂದ ಸಾಧ್ಯವಾಗದಿದ್ದರೆ ಹೊರಗಡೆ ರತ್ನಮಾಲಾ ಅವರು ಇದ್ದಾರೆ ಎಂದು ಹೇಳಿ ಸಭೆಯನ್ನು ಆರಂಭಿಸುತ್ತಾಳೆ. ಮುಂದೆ ಏನಾಗುತ್ತದೆ ಎಂದು ತಿಳಿಯಬೇಕಾದರೆ ತಪ್ಪದೇ ಕನ್ನಡತಿ ಧಾರಾವಾಹಿಯನ್ನು ತಪ್ಪದೇ ವೀಕ್ಷಿಸಿ.

Colors Kannada Serial Kannadathi Ratnamma shouldered the responsibility of the organization

Comments are closed.