Bengaluru auto strike : ಬೆಂಗಳೂರಿನಲ್ಲಿ ಆಟೋ ಬಂದ್‌ ಹಿನ್ನಲೆ ಬಿಎಂಟಿಸಿ ಅಲರ್ಟ್

ಬೆಂಗಳೂರು : (Bengaluru auto strike) ವಿವಿಧ ಬೇಡಿಕೆಗಳ ಆಗ್ರಹಿಸಿ ಇಂದು ಆಟೋ ಚಾಲಕರ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ್ದು, ರಾಜಧಾನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರ್ಯಾಪಿಡೋ ಬೈಕ್‌ ಟ್ಯಾಕ್ಸಿಯನ್ನು ನಿಷೇಧಿಸುವಂತೆ ಸಂಘಟನೆಗಳು ರಾಜ್ಯ ಸರಕಾರಕ್ಕೆ ಒತ್ತಾಯಿಸಿವೆ. ಈ ಹಿನ್ನಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಆಟೋ ಸೇವೆ ಇಲ್ಲದಿರುವ ಕಾರಣ ಇದರ ಪ್ರಯೋಜನವನ್ನು ಬಿಎಂಟಿಸಿ ಪಡೆದುಕೊಂಡಿದೆ. ಬೆಂಗಳೂರಿನಲ್ಲಿ ಆಟೋ ಬಂದ್‌ ಹಿನ್ನಲೆಯಲ್ಲಿ ಬಿಎಂಟಿಸಿ ಅಲರ್ಟ್‌ ಆಗಿದ್ದು, ಹೆಚ್ಚುವರಿ ಬಸ್‌ ವ್ಯವಸ್ಥೆಯನ್ನು ನೀಡಲಾಗಿದೆ.

ರಾಜ್ಯದಲ್ಲಿ ಅನಧೀಕೃತ ಬೈಕ್‌ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹಿಸಿ ರಾಜ್ಯ ಸರಕಾರಕ್ಕೆ ಮೂರು ದಿನಗಳ ಗಡುವು ನೀಡಲಾಗಿತ್ತು. ಆದರೆ ರಾಜ್ಯ ಸರಕಾರ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳದ ಕಾರಣ ಇಂದು ಬೆಂಗಳೂರಿನ ೨೧ ಆಟೋ ಚಾಲಕರ ಸಂಘಟನೆಗಳು ಮುಷ್ಕರಕ್ಕೆ ಮುಂದಾಗಿವೆ. ಒಟ್ಟು 2 ಲಕ್ಷದ 10 ಸಾವಿರ ಆಟೋಗಳ ಸಂಚಾರ ಇಂದು ಬಂದ್ ಆಗಲಿದ್ದು, ಇದರ ಪ್ರಯೋಜನವನ್ನು ಬಿಎಂಟಿಸಿ ಸಾರಿಗೆ ಇಲಾಖೆ ಪಡೆದುಕೊಂಡಿದೆ. ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಹೆಚ್ಚುವರಿ ಬಸ್‌ ವ್ಯವಸ್ಥೆಯನ್ನು ಮಾಡಲಾಗಿದ್ದು, ಇಂದು ಆಟೋ ಚಾಲಕರ ಬಂದ್‌ ಹಿನ್ನಲೆಯಲ್ಲಿ ಬಿಎಂಟಿಸಿಯಿಂದ ಹೆಚ್ಚುವರಿ ಬಸ್‌ ಸೇವೆಗಳ ಲಭ್ಯವಿದೆ.

ಮೆಜೆಸ್ಟಿಕ್‌, ಶಾಂತಿನಗರ, ಯಶವಂತಪುರದ ಪ್ರಮುಖ‍ ಬಸ್‌ ನಿಲ್ದಾಣಗಳಲ್ಲಿ ಹೆಚ್ಚುವರಿ ಬಸ್‌ ಸೇವೆಗಳು ಲಭ್ಯವಿರಲಿದೆ. ಹೀಗಾಗಿ ಪ್ರಯಾಣಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಲು ಕೇಳಲಾಗಿದೆ. ಸದ್ಯ ಪ್ರಯಾಣಿಕರ ಹಿತಾಸಕ್ತಿಯನ್ನು ಬಯಸುವ ಬಿಎಂಟಿಸಿ, ಇದೀಗ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಇದನ್ನೂ ಓದಿ : ಅಮಿತ್ ಶಾ ಅವರೊಂದಿಗೆ ಮಹಾ ವಿಮಾ ಯೋಜನೆಯ ಬಗ್ಗೆ ಪ್ರಸ್ತಾಪಿಸಲಿರುವ ಬೊಮ್ಮಾಯಿ

ಇದನ್ನೂ ಓದಿ : Conspiracy to murder Umapati case : ನಿರ್ಮಾಪಕ ಉಮಾಪತಿ ಕೊಲೆಗೆ ಸಂಚು : ಆರೋಪಿ ಕರಿಯ ರಾಜೇಶ್‌ ಅರೆಸ್ಟ್

ಇದನ್ನೂ ಓದಿ : ಮಂಗಳೂರು : ಪತ್ನಿ ಸಂಬಂಧಿಕರ ಮನೆಯಲ್ಲಿ ಪೆಟ್ರೋಲ್‌ ಸುರಿದು ವ್ಯಕ್ತಿ ಆತ್ಮಹತ್ಯೆ

Bengaluru auto strike: BMTC alert due to auto ban in Bengaluru

Comments are closed.