ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್ ನ್ನು ಕಬಳಿಸಿದ ಕಬ್ಜ ಸಿನಿಮಾ

ಸ್ಯಾಂಡಲ್‌ವುಡ್‌ ರಿಯಲ್‌ ಸ್ಟಾರ್‌ ಉಪೇಂದ್ರ ಹಾಗೂ ಶ್ರಿಯಾ ಶರಣ್‌ (Upendra – Shriya Sharan) ಅಭಿನಯದ “ಕಬ್ಜ” ಹೆಚ್ಚಿನ ಸಿನಿಮಂದಿರಗಳಲ್ಲಿ ಪುಲ್‌ಹೌಸ್‌ ಪ್ರದರ್ಶನ ಕಾಣುತ್ತಿದೆ. ಹೌದು, ಕಳೆದ ಶುಕ್ರವಾರ ( ಮಾರ್ಚ್ 17 ) ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾದ ಕಬ್ಜ ಸಿನಿಮಾ 4000ಕ್ಕೂ ಹೆಚ್ಚಿನ ಥಿಯೇಟರ್‌ಗಳಲ್ಲಿ ತೆರೆಕಂಡು ಬೃಹತ್ ಓಪನಿಂಗ್ ಪಡೆದುಕೊಂಡಿದೆ. ಈ ಮೂಲಕ ಕಬ್ಜ ಮೊದಲ ದಿನ ಕರ್ನಾಟಕದಲ್ಲಿಯೇ 26 ಕೋಟಿ ಗಳಿಕೆ ಮಾಡುವ ಮೂಲಕ ಬಿಡುಗಡೆ ದಿನ ಕರ್ನಾಟಕದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಎರಡನೇ ಕನ್ನಡದ ಸಿನಿಮಾ ಎನ್ನುವ ದಾಖಲೆ ಸೃಷ್ಟಿಸಿದೆ.

ಕಳೆದ ವರ್ಷದಿಂದ ಕನ್ನಡ ಸಿನಿರಂಗಕ್ಕೆ ಸುವರ್ಣಯುಗ ಎಂದರೆ ತಪ್ಪಾಗುವುದಿಲ್ಲ. ಯಾಕೆಂದರೆ ಕಳೆದ ವರ್ಷ ತೆರೆಕಂಡ ಕೆಜಿಎಫ್‌ 2, ಜೇಮ್ಸ್‌, ಚಾರ್ಲಿ 777, ವಿಕ್ರಾಂತ್‌ ರೋಣ ಹಾಗೂ ಕಾಂತಾರ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಅತಿ ಹೆಚ್ಚು ಕಲೆಕ್ಷನ್‌ ಕಂಡ ಸಿನಿಮಾಗಳಾಗಿವೆ. ಇದೀಗ ಅವುಗಳ ಸಾಲಿಗೆ ಆರ್‌ ಚಂದ್ರು ನಿರ್ದೇಶನದ ಕಬ್ಜ ಸಿನಿಮಾ ಸೇರಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ. ರಾಜ್ಯದಲ್ಲಿ ಬಿಡುಗಡೆ ದಿನ 26 ಕೋಟಿ ಗಳಿಕೆ ಮಾಡಿರುವ ಕಬ್ಜ ವಿಶ್ವದಾದ್ಯಂತ ಎಲ್ಲಾ ಭಾಷೆಗಳ ಕಲೆಕ್ಷನ್ ಸೇರಿದಂತೆ ಒಟ್ಟಾರೆ 54 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ಸಿನಿತಂಡ ಅಧಿಕೃತವಾಗಿ ಹೇಳಿದೆ.

ಹೀಗೆ ಕಬ್ಜ ರಿಲೀಸ್ ದಿನ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ ಬಳಿಕ ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಕನ್ನಡ ಸಿನಿಮಾಗಳ ಪಟ್ಟಿಯಲ್ಲಿ ತುಸು ಬದಲಾವಣೆಯಾಗಿದೆ. ಈ ಹಿಂದೆ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ರಿಲೀಸ್ ದಿನ ಅತಿ ಹೆಚ್ಚು ಗಳಿಸಿದ ಸಿನಿಮಾಗಳ ಪಟ್ಟಿಯಲ್ಲಿ ಕೆಜಿಎಫ್‌ 2 ಪ್ರಥಮ ಸ್ಥಾನ ಪಡೆದುಕೊಂಡಿತ್ತು. ಈಗಲೂ ಸಹ ತನ್ನ ಸ್ಥಾನವನ್ನು ಗಟ್ಟಿಯಾಗಿಸಿಕೊಂಡಿದೆ. ಆದರೆ ಎರಡನೇ ಸ್ಥಾನದಲ್ಲಿ ವಿಕ್ರಾಂತ್‌ ರೋಣ ಸ್ಥಾನದ ಬದಲು “ಕಬ್ಜ” ಕಬಳಿಸಿಕೊಂಡಿರುತ್ತದೆ.

ಇದನ್ನೂ ಓದಿ : ಮಾರ್ಚ್ 22 ರಂದು “ಕಾಟೇರ” ಸಿನಿಮಾದ ನಾಯಕಿ ಪಾತ್ರದ ಪೋಸ್ಟರ್‌ ರಿವೀಲ್‌

ಇದನ್ನೂ ಓದಿ : ಆಸ್ಕರ್ 2023 ರಲ್ಲಿ ಭಾಗವಹಿಸಲು ತಲಾ 25,000 ಡಾಲರ್‌ ಪಾವತಿಸಿದ ಆರ್‌ಆರ್‌ಆರ್‌ ಸಿನಿತಂಡ

“ಕಬ್ಜ” ಸಿನಿಮಂದಿರಗಳಲ್ಲಿ ಮೂರನೇ ದಿನ ಮುಗಿಸಿ ನಾಲ್ಕನೇ ದಿನ ಉತ್ತಮ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮೂಲಕ ಮುನ್ನುಗ್ಗುತ್ತಿದೆ. ಸಿನಿಮಾ ನಿರ್ದೇಶಕ ಹಾಗೂ ನಿರ್ಮಾಪಕ ಆರ್‌ ಚಂದ್ರು ಹೇಳಿರುವಂತೆ ಕಬ್ಜ ನೂರು ಕೋಟಿ ಕ್ಲಬ್‌ ಸೇರಿರುತ್ತದೆ. ಆರ್ ಚಂದ್ರು ಬರೆದು ನಿರ್ದೇಶಿಸಿರುವ ಆಕ್ಷನ್ ಸಿನಿಮಾವು ಉಪೇಂದ್ರ, ಕಿಚ್ಚ ಸುದೀಪ್ ಮತ್ತು ಶ್ರಿಯಾ ಶರಣ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಶಿವ ರಾಜ್‌ಕುಮಾರ್ ಸ್ಫೋಟಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವು ದರೋಡೆಕೋರ ಸಿನಿಮಾವಾಗಿದ್ದು, ಅನಿರೀಕ್ಷಿತ ಸಂದರ್ಭಗಳಿಂದ ಭೂಗತ ಜಗತ್ತಿಗೆ ಪ್ರವೇಶಿಸುವ ಅರ್ಕೇಶ್ವರನ್ ಎಂಬ ವಾಯುಪಡೆಯ ಅಧಿಕಾರಿಯ ಜೀವನದ ಸುತ್ತ ಸುತ್ತುತ್ತದೆ. ಸಿನಿಮಾವನ್ನು ಆನಂದ್ ಪಂಡಿತ್, ಆರ್ ಚಂದ್ರು ಮತ್ತು ಅಲಂಕಾರ್ ಪಾಂಡಿಯನ್ ನಿರ್ಮಿಸಿದ್ದಾರೆ. ಮುರಳಿ ಶರ್ಮಾ, ಸುಧಾ, ನವಾಬ್ ಶಾ ಮತ್ತು ಜಾನ್ ಕೊಕ್ಕೆನ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Upendra – Shriya Sharan: Sandalwood’s Kabzaa Movie Takes the Box Office

Comments are closed.