ಬೆಂಗಳೂರು : ಮಹಾನಗರ ಬೆಂಗಳೂರಿನಲ್ಲಿ ಸುರಿಯುತ್ತಿರೋ ಮಳೆ (Bengaluru flood) ನರಕ ಸೃದಶ ವಾತಾವರಣ ಸೃಷ್ಟಿಸಿದೆ. ರಸ್ತೆಗಳಲ್ಲಿ ತುಂಬಿರೋ ನೀರು, ಅಪಾರ್ಟ್ಮೆಂಟ್ ಗಳಿಗೆ ನುಗ್ಗಿದ ನೀರು, ಮುಳುಗಿದ ಪಾರ್ಕಿಂಗ್ , ತೇಲುತ್ತಿರುವ ವಾಹನಗಳು ಸಿಲಿಕಾನ್ ಸಿಟಿಯ ಜನರ ನಿದ್ದೆಗೆಡಿಸಿವೆ. ರಸ್ತೆಯಲ್ಲಿ ಟ್ರಾಫಿಕ್ ಸೃಷ್ಟಿಯಾಗಿ ಜನರು ಕೆಲಸಕ್ಕೆ ತೆರಳೋದೇ ದುಸ್ತರವಾಗಿದೆ. ಹೀಗಾಗಿ ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ಬೆಂಗಳೂರನ್ನು ಅವಮಾನಿಸೋ ಕೆಲಸವಾಗ್ತಿದೆ. ಇದು ಅಪ್ಪಟ ಬೆಂಗಳೂರಿಗರು ಹಾಗೂ ಸೆಲೆಬ್ರೆಟಿಗಳ ಮನಸ್ಸಿಗೆ ನೋವು ತಂದಿದ್ದು ಈ ಬಗ್ಗೆ ಚಿತ್ರಸಾಹಿತಿ (Kaviraj Appeals) ಬರೆದ ಸಾಲುಗಳು ಈಗ ವೈರಲ್ ಆಗಿದೆ.
ಕೋಟ್ಯಾಂತರ ಜನರಿಗೆ ಆಶ್ರಯ ನೀಡಿ ಅನ್ನ ಹಾಕಿದ ಊರು ಬೆಂಗಳೂರು. ಮನೆ ಬಿಟ್ಟು ಬಂದೋರು, ಓಡಿ ಬಂದೋರು ಹೀಗೆ ಹೇಗೇಗೋ ಬಂದವರನ್ನು ಇಟ್ಟುಕೊಂಡು ಸಾಕುತ್ತ ಬಂದಿದೆ. ಆದರೆ ರಿಯಲ್ ಎಸ್ಟೇಟ್ ಮಾಫಿಯಾ ಹಾಗೂ ಅವೈಜ್ಞಾನಿಕ ಕಾಮಗಾರಿಗಳಿಂದ ಬೆಂಗಳೂರು ನೀರುಮಯವಾಗುತ್ತಿದ್ದು, ಒಂದು ಸಣ್ಣ ಮಳೆಯನ್ನು ಸಹಿಸಿಕೊಳ್ಳದ ಸ್ಥಿತಿಯಲ್ಲಿದೆ. ಹೀಗಾಗಿ ಒಂದೊಂದು ಮಳೆ ಬಂದಾಗಲೂ ನಗರದಾದ್ಯಂತ ನೀರು ತುಂಬಿ ಅವಾಂತರ ಸೃಷ್ಟಿಯಾಗುತ್ತಿದೆ. ಹೀಗಾಗಿ ಜನ ಜೀವನ ಅಸ್ತವ್ಯಸ್ಥವಾಗುತ್ತಿದ್ದು, ಜನರು ಹಿಡಿಶಾಪ ಹಾಕಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಜನರು ಸಹಜವಾಗಿಯೇ ಬೆಂಗಳೂರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಇದು ಹಲವರಿಗೆ ಬೇಸರ ತಂದಿದೆ. ಅದರಲ್ಲೂ ಸೆಲೆಬ್ರೆಟಿಗಳು ಹಾಗೂ ಕೆಲವು ಬೆಂಗಳೂರಿನ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರಿನ ಬಗ್ಗೆ ಕೆಟ್ಟದಾಗಿ ಮಾತನಾಡುವವರ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಚಿತ್ರಸಾಹಿತಿ ಕವಿರಾಜ್ ಅತ್ಯಂತ ಮಾರ್ಮಿಕವಾಗಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಭಾವನೆ ಹಂಚಿಕೊಂಡಿದ್ದಾರೆ. ಎಲ್ಲರಿಗೂ ನೆನಪಿಸುತ್ತೇನೆ, ಊರು ಬಿಟ್ಟು ಬಂದವರಿಗೆ ಅನ್ನ ಕೊಟ್ಟಿದ್ದು ಬೆಂಗಳೂರು, ಫ್ಲ್ಯಾಟ್, ಮನೆ ಖರೀದಿಸಿ ಎಂಜಾಯ್ ಮಾಡಲು ಅವಕಾಶ ಕೊಟ್ಟಿದ್ದು ಇದೇ ಬೆಂಗಳೂರು.
ಮನೆ ಕಟ್ಟಲು, ತಂಗಿ ಮದುವೆ ಮಾಡಲು, ಸಾಲ ತೀರಿಸಲು ಹೀಗೆ ಎಲ್ಲದಕ್ಕೂ ಅವಕಾಶ ಕೊಟ್ಟಿದ್ದು ಬೆಂಗಳೂರು. ಮಳೆಗೆ ಯುರೋಪನಂತಹ ರಾಷ್ಟ್ರಗಳೇ ನಲುಗಿ ಹೋಗಿವೆ. ಹೀಗಿರುವಾಗ ನಾಲ್ಕು ದಿನಗಳಮನೆಗೆ ನೀರು ನುಗ್ಗಿದ್ದಕ್ಕೆ ಬೇಸರ ಮಾಡಿಕೊಳ್ಳುವುದು ಸರಿಯಲ್ಲ. ಆಡಳಿತ ಯಂತ್ರವನ್ನು ಟೀಕಿಸಬಹುದು. ಆದರೇ ಏನೆ ಆದರೂ ಮಾತೃಹೃದಯದ ಬೆಂಗಳೂರನ್ನು ಟೀಕಿಸುವುದು ಸರಿಯಲ್ಲ ಎಂದು ಕವಿರಾಜ್ ತುಂಬ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಕವಿರಾಜ್ ಈ ಪೋಸ್ಟ್ ಈಗ ಸಖತ್ ವೈರಲ್ ಆಗಿದ್ದು ಬೆಂಗಳೂರಿಗೆ ಯಾರೂ ಬೈಯಬಾರದು ಅಂತ ಸಿಲಿಕಾನ್ ಸಿಟಿ ಪ್ರಿಯರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ : 3 people died : ಗಣೇಶ ಮೂರ್ತಿ ವಿಸರ್ಜನೆ ವೇಳೆ ದುರಂತ : ವಿದ್ಯುತ್ ತಂತಿ ತಗುಲಿ ಮೂವರು ದುರ್ಮರಣ
Bengaluru flood Kaviraj Appeals to People