Avial Onam Special : ಓಣಂಗೆ ಕೇರಳದ ಸ್ಪೆಷಲ್‌ ಡಿಶ್‌ ಆವಿಯಲ್‌ ಹೀಗೆ ಮಾಡಿ

Avail Onam Special : ಆವಿಯಲ್‌ (Avial) ಕೇರಳದ ಸ್ಪೆಷಲ್‌ ಡಿಶ್‌. ವಿವಿಧ ತರಕಾರಿಗಳನ್ನು ಸೇರಿಸಿ ತಯಾರಿಸುವ ರುಚಿಯಾದ ಅಡುಗೆ. ಆವಿಯಲ್‌ (Avial Onam Special) ಹಿಂದೆ ಒಂದು ಜನಪ್ರಿಯ ಕಥೆಯೇ ಇದೆ. ಒಮ್ಮೆ ತ್ರಾವಣ್‌ಕೋರ್‌ನ ರಾಜ ತನ್ನ ಆಪ್ತರಿಗೆ ಔತಣ ಕೂಟವನ್ನು ಏರ್ಪಿಡಿಸಿದ. ಬಗೆ ಬಗೆಯ ಅಡುಗೆಗಳನ್ನು ಮಾಡಿಸಲು ಮುಂದಾದ. ಅಡುಗೆಯ ತಯಾರಿ ಹೇಗೆ ನಡೆಯುತ್ತಿದೆ ಎಂದು ನೋಡಲು ರಾಜ ಅಡುಗೆ ತಯಾರು ಮಾಡುತ್ತಿದ್ದ ಜಾಗಕ್ಕೆ ಹೋದ. ಅಲ್ಲಿ ಬಾಣಸಿಗರು ಅಡುಗೆ ಮಾಡುತ್ತಿದ್ದನ್ನು ನೋಡಿದ. ಹಾಗೆ ಅವಲೋಕಿಸುವಾಗ, ಒಂದು ಕಡೆ ಅಡುಗೆಗೆ ಬಳಸಿ ಉಳಿದ ತರಕಾರಿಗಳನ್ನು ಇರಿಸಲಾಗಿತ್ತು. ರಾಜ ಬಾಣಸಿಗರ ಹತ್ತಿರ ಕೇಳಿದ, ಅವುಗಳನ್ನು ಏನು ಮಾಡುತ್ತೀರಿ ಎಂದು. ಅದಕ್ಕೆ ಅವರು ಅದನ್ನು ಬಿಸಾಡುತ್ತೇವೆ ಎಂದರು. ಸಿಟ್ಟಾದ ರಾಜ ಅವುಗಳನ್ನು ಬಿಸಾಡುವುದು ಬೇಡ, ಅದರಿಂದ ಏನಾದರೂ ಮಾಡಿ ಎಂದ. ಅವರ ಮುಖಂಡ ಏನು ಮಾಡುವುದು ಎಂದು ಯೋಚಿಸಿದ. ಎಲ್ಲಾ ತರಕಾರಿಗಳನ್ನು ತಂದು ಬೇಯಿಸಿ, ಅದಕ್ಕೆ ತೆಂಗಿನ ತುರಿ ಮಸಾಲೆ ಸೇರಿಸಿ ಕೊನೆಯಲ್ಲಿ ಮೊಸರು ಹಾಕಿದ. ಅದನ್ನೇ ಆ ದಿನದ ಔತಣಕೂಟದಲ್ಲಿ ಬಡಿಸಿದ. ಅದನ್ನು ತಿಂದ ಅತಿಥಿಗಳು, ಈ ಹೊಸ ರುಚಿಯ ಹೆಸರೇನೆಂದು ಕೇಳಿದರು. ಅದಕ್ಕೆ ಅವನು ಇದರ ಹೆಸರು ಆವಿಯಲ್‌ ಎಂದ. ಆಗ ಹುಟ್ಟಿದ್ದೆ ಆವಿಯಲ್‌ ಎಂಬ ಹೊಸ ರುಚಿ. ಎಲ್ಲಾ ತರಕಾರಿಗಳನ್ನು ಸೇರಿಸಿ ತಯಾರಿಸುವ ವಿಶೇಷ ಅಡುಗೆ. ಅಂದಿನಿಂದ ಕೇರಳದವರು ಆವಿಯಲ್‌ ಅನ್ನು ವಿಶೇಷದ ದಿನಗಳಲ್ಲಿ (Happy Onam 2022) ತಯಾರಿಸುತ್ತಾ ಬಂದರು ಎಂದು ಕಥೆ ಹೇಳುತ್ತದೆ.

ಕೇರಳದವರು ಹೆಚ್ಚಾಗಿ ವಿಶೇಷದ ದಿನಗಳಲ್ಲಿ ಆವಿಯಲ್‌ ಅನ್ನು ತಯಾರಿಸುತ್ತಾರೆ. ಎಲ್ಲಾ ಬಗೆಯ ತರಕಾರಿಯ ಪರಿಮಳದಿಂದ ಇದು ವಿಶೇಷ ಎನಿಸುತ್ತದೆ. ನೀವೂ ಈ ಓಣಂಗೆ ಆವಿಯಲ್‌ ಅನ್ನು ಹೀಗೆ ಮಾಡಿ.

ಆವಿಯಲ್‌ ತಯಾರಿಸುವ ವಿಧಾನ :

ಮೊದಲಿಗೆ ಒಂದು ಬಾಣಲೆಗೆ ಆಲೂಗಡ್ಡೆ, ಬಾಳೆಕಾಯಿ, ಮೂಲಂಗಿ, ತೊಂಡೆಕಾಯಿ, ಸೋರೆಕಾಯಿ, ಕ್ಯಾರೆಟ್‌, ಬೀನ್ಸ್‌, ಕುಂಬಳಕಾಯಿ, ನುಗ್ಗೆಕಾಯಿ ಮತ್ತು ಹಸಿರು ಮೆಣಸಿನಕಾಯಿ (ಎಲ್ಲಾ ತರಕಾರಿ ಸೇರಿ ಒಂದು ಬೌಲ್‌ ಆದರೆ ಸಾಕು) ಇವುಗಳನ್ನು ಉದ್ದಕ್ಕೆ ಹೆಚ್ಚಿ ಹಾಕಿ. ಅದಕ್ಕೆ 8–10 ಕರಿಬೇವಿನ ಎಲೆ ಮತ್ತು ತೆಂಗಿನ ಎಣ್ಣೆ ಮತ್ತು ಸ್ವಲ್ಪ ನೀರು ಸೇರಿಸಿ ಕುದಿಯಲು ಬಿಡಿ. ನಂತರ ಅದಕ್ಕೆ ಒಂದು ಚಮಚ ಅರಿಶಿನ ಸೇರಿಸಿ 15 ನಿಮಿಷಗಳವರೆಗೆ ಕುದಿಸಿ. ಮಿಕ್ಸರ್‌ ಜಾರ್‌ಗೆ ಅರ್ಧ ಚಮಚ ಜೀರಿಗೆ, ಒಂದು ಕಪ್‌ ತೆಂಗಿನ ತುರಿ, ಒಂದು ಕಪ್‌ ಈರುಳ್ಳಿ, 8–10 ಕರಿಬೇವಿನ ಎಲೆ, 1–2 ಹಸಿ ಮೆಣಸಿನಕಾಯಿ ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ. ಇದನ್ನು ಕುದಿಯುತ್ತಿರುವ ತರಕಾರಿಗೆ ಸೇರಿಸಿ. ಅದರ ಜೊತೆಗೆ ಒಂದು ಕಪ್‌ ಮೊಸರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ. ಕೊನೆಯಲ್ಲಿ ಮೇಲಿನಿಂದ ಒಂದು ಚಮಚ ತೆಂಗಿನ ಎಣ್ಣೆ ಸೇರಿಸಿ. ಈಗ ರುಚಿಯಾದ ಆವಿಯಲ್‌ ಸವಿಯಲು ಸಿದ್ಧ.

ಇದನ್ನೂ ಓದಿ : Monsoon Trip : ಮಳೆಗಾಲದ ಸೌಂದರ್ಯ ವರ್ಣಿಸುವ 4 ಆಫ್‌ಬೀಟ್‌ ಸ್ಥಳಗಳು

ಇದನ್ನೂ ಓದಿ :Momo Soup : ಮೆಂಚೋ ಮೋಮೋ ಸೂಪ್‌ ಮಾಡುವುದು ಹೇಗೆ ಗೊತ್ತೇ? ತಯಾರಿಸಲು ಸಾಕು ಬರೀ 15 ನಿಮಿಷಗಳು!

(Avial Onam Special Dish try this tasty dish on this particular occasion)

Comments are closed.