3 people died : ಗಣೇಶ ಮೂರ್ತಿ ವಿಸರ್ಜನೆ ವೇಳೆ ದುರಂತ : ವಿದ್ಯುತ್​ ತಂತಿ ತಗುಲಿ ಮೂವರು ದುರ್ಮರಣ

ಚಿಕ್ಕಮಗಳೂರು : 3 people died : ಗಣೇಶ ಚತುರ್ಥಿಯ ಸಂದರ್ಭದಲ್ಲಿ ಸಾರ್ವಜನಿಕವಾಗಿ ಗಣಪತಿಯನ್ನು ಕೂರಿಸುವುದೇ ಒಂದು ಸಂಭ್ರಮ. ಗಣೇಶನ ಪ್ರತಿಷ್ಠಾಪನೆಯಿಂದ ಆತನ ವಿಸರ್ಜನೆಯವರೆಗೂ ಸಂಭ್ರಮ ಮನೆ ಮಾಡಿರುತ್ತದೆ. ಆದರೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜೆ. ಹೊಸಳ್ಳಿ ಗ್ರಾಮದಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮವು ಸೂತಕದ ಮನೆಯಾಗಿ ಬದಲಾಗಿದೆ. ಗಣಪತಿ ವಿಸರ್ಜನೆ ಕಾರ್ಯಕ್ರಮವನ್ನು ನೆರವೇರಿಸಿ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಟ್ರ್ಯಾಕ್ಟರ್​​ನಲ್ಲಿದ್ದ ಮಂಟಪದ ಕಮಾನಿಗೆ ವಿದ್ಯುತ್​ ತಂತಿ ತಗುಲಿದ ಪರಿಣಾಮ ಮೂವರು ಮೃತಪಟ್ಟ ದಾರುಣ ಘಟನೆಯು ವರದಿಯಾಗಿದೆ.

ಮಂಗಳವಾರ ತಡರಾತ್ರಿ ಈ ದುರ್ಘಟನೆ ಸಂಭವಿಸಿದ್ದು ಇದರಲ್ಲಿ ಆರು ಮಂದಿ ಸ್ಥಿತಿ ಗಂಭೀರವಾಗಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಮೃತರನ್ನು ಜಿ.ಹೊಸಳ್ಳಿ ಗ್ರಾಮದ ರಾಜು (50), ಪಾರ್ವತಿ (28) ಹಾಗೂ ರಚನಾ (22) ಎಂದು ಗುರುತಿಸಲಾಗಿದೆ.ಗಾಯಗೊಂಡವರ ಪೈಕಿ ಪಲ್ಲವಿ (13) ಹಾಗೂ ಸಂಗೀತಾ (18) ಪರಿಸ್ಥಿತಿ ಚಿಂತಾಜನಕವಾಗಿದ್ದು ಹಾಸನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಗೌರಿ ಎಂಬವರನ್ನು ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಣೇಶ ಚತುರ್ಥಿ ಪ್ರಯುಕ್ತ ಜಿ.ಹೊಸಳ್ಳಿ ಗ್ರಾಮದಲ್ಲಿ ಸಾರ್ವಜನಿಕವಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಗಣೇಶ ಮೂರ್ತಿಯನ್ನು ಟ್ರ್ಯಾಕ್ಟರ್​ನಲ್ಲಿಟ್ಟು ನದಿಗೆ ಕೊಂಡೊಯ್ಯಲಾಗಿತ್ತು. ಹಾಗೂ ನದಿಯಲ್ಲಿ ಸಾರ್ವಜನಿಕರೆಲ್ಲ ಸೇರಿ ಗಣೇಶನನ್ನು ಮುಳುಗಿಸಿದ್ದರು. ಗಣೇಶನ ಮೂರ್ತಿಯನ್ನು ಕೊಂಡೊಯ್ಯುವ ವಾಹನವನ್ನು ಕಮಾನುಗಳನ್ನು ಅಳವಡಿಸಿ ಸಿಂಗರಿಸಲಾಗಿತ್ತು. ರಸ್ತೆ ಬದಿಯಲ್ಲಿದ್ದ ವಿದ್ಯುತ್​ ತಂತಿಗೆ ಈ ಕಮಾನು ತಾಗಿದ ಪರಿಣಾಮ ಟ್ರ್ಯಾಕ್ಟರ್​ನಲ್ಲಿ ಕುಳಿತಿದ್ದವರೆಲ್ಲರಿಗೂ ವಿದ್ಯುತ್​ ಶಾಕ್​ ಹೊಡೆದಿದೆ. ಅದೃಷ್ಟವಶಾತ್​ ಚಾಲಕ ಈ ದುರ್ಘಟನೆಯಿಂದ ಸುರಕ್ಷಿತವಾಗಿ ಪಾರಾಗಿದ್ದಾನೆ.

ಇದನ್ನು ಓದಿ : Umesh Katthi :ಎಂಟು ಬಾರಿ ಶಾಸಕನಾಗಿ ಆಯ್ಕೆ, ನೇರ ನುಡಿ, ಮುತ್ಸದ್ಧಿ ನಾಯಕ : ಹೀಗಿತ್ತು ಕತ್ತಿ ನಡೆದುಬಂದ ರಾಜಕೀಯ ಹಾದಿ

ಇದನ್ನೂ ಓದಿ : bjp janostava postpone : ಉಮೇಶ್​ ಕತ್ತಿ ನಿಧನ : ಬಿಜೆಪಿ ಜನೋತ್ಸವ ಕಾರ್ಯಕ್ರಮ ಸೆ.11ಕ್ಕೆ ಮುಂದೂಡಿಕೆ

ಇದನ್ನೂ ಓದಿ : BS Yeddyurappa corruption case : ಚುನಾವಣೆ ಹೊತ್ತಲ್ಲೇ ಬಿ.ಎಸ್.ಯಡಿಯೂರಪ್ಪ ಕುಟುಂಬಕ್ಕೆ ಸಂಕಟ: ಭ್ರಷ್ಟಾಚಾರ ಪ್ರಕರಣ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

ಇದನ್ನೂ ಓದಿ : Bengaluru flood : ಅನ್ನ ಕೊಟ್ಟ ಮಣ್ಣಿಗೆ ಅವಮಾನ ಮಾಡಬೇಡಿ: ಜನರಿಗೆ ಕವಿರಾಜ್ ಮನವಿ

3 people died during ganesha festival by electrocuted shock

Comments are closed.