Why Gujarat election not announced : ಹಿಮಾಚಲ ಪ್ರದೇಶ ಓಕೆ ; ಗುಜರಾತ್ ಎಲೆಕ್ಷನ್ ದಿನಾಂಕ ಘೋಷಣೆ ಆಗಲಿಲ್ಲ ಏಕೆ..?

ನವದೆಹಲಿ : Gujarat election : ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿರೋ ಕೇಂದ್ರ ಚುನಾವಣಾ ಆಯೋಗ ಗುಜರಾತ್ ವಿಧಾನಸಭೆ ಚುನಾವಣೆಗೆ ಘೋಷಣೆ ಮಾಡದೇ ಅಚ್ಚರಿ ಮೂಡಿಸಿದೆ. ಅಂದುಕೊಂಡಂತೆ ಆಗಿದ್ರೆ ಎರಡು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಶುಕ್ರವಾರವೇ ಅಧಿಸೂಚನೆ ಹೊರಬೀಳಬೇಕಿತ್ತು. ಆದ್ರೆ, ಆಯೋಗ ಚುನಾವಣಾ ಘೋಷಣಾ ಪಟ್ಟಿಯಿಂದ ಗುಜರಾತ್​ ಅನ್ನ ಕೈ ಬಿಟ್ಟಿದೆ.

ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಅಧಿಸೂಚನೆ ಹೊರಡಿಸಿದ್ರು. 68 ವಿಧಾನಸಭಾ ಬಲಾಬಲ ಹೊಂದಿರುವ ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 8ಕ್ಕೆ ಫಲಿತಾಂಶ ಹೊರಬೀಳಲಿದೆ ಎಂಬುದಾಗಿ ಘೋಷಿಸಿದ್ರು. ಆದ್ರೆ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ಜೊತೆಗೆ ಗುಜರಾತ್ ವಿಧಾನಸಭೆ ಚುನಾವಣೆ ಹೊರ ಬೀಳುತ್ತೆ ಅನ್ನೋ ನಿರೀಕ್ಷೆ ಹುಸಿಯಾಗಿದೆ.

ಅಂದಹಾಗೆ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭೆಗಳ ಅವಧಿ ಆರು ತಿಂಗಳ ವ್ಯಾಪ್ತಿಯಲ್ಲೇ ಕೊನೆಗೊಳ್ಳುತ್ತೆ. ಹೀಗಾಗಿ ಸಾಂಪ್ರದಾಯಿಕವಾಗಿ ಎರಡು ರಾಜ್ಯಗಳ ಚುನಾವಣಾ ವೇಳಾಪಟ್ಟಿಯನ್ನ ಒಂದೇ ಸಮಯದಲ್ಲಿ ಘೋಷಣೆ ಮಾಡಲಾಗುತ್ತೆ ಅಂತಾನೇ ಎಲ್ಲರೂ ಅಂದುಕೊಂಡಿದ್ರು. ಎಲ್ಲ ಮಾಧ್ಯಮಗಳೂ ಇದನ್ನೇ ವರದಿ ಮಾಡಿದ್ವು. ಆದ್ರೆ, ತೀವ್ರ ನಿರೀಕ್ಷೆ ಇಟ್ಟುಕೊಳ್ಳಲಾಗಿದ್ದ ಗುಜರಾತ್ ಚುನಾವಣೆಯ ದಿನಾಂಕ ಘೋಷಿಸದಿರುವುದು ಆಶ್ಚರ್ಯಕರವಾಗಿದೆ. ಅಲ್ಲದೇ ಉಭಯ ರಾಜ್ಯಗಳ ವಿಧಾನಸಭೆಗಳ ಅವಧಿಯ ಅಂತ್ಯದ ನಡುವೆ 40 ದಿನಗಳ ಅಂತರವಿದೆ. ನಿಯಮಗಳ ಪ್ರಕಾರ, ಒಂದು ಫಲಿತಾಂಶವು ಇನ್ನೊಂದರ ಮೇಲೆ ಪರಿಣಾಮ ಬೀರದಂತೆ ಕನಿಷ್ಠ 30 ದಿನಗಳು ಇರಬೇಕು ಎಂದು ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದರು. ಅಂದ್ರೆ ಗುಜರಾತ್ ವಿಧಾನಸಭೆಯ ಅವಧಿ ಫೆಬ್ರವರಿ 18 ರಂದು ಅಂತ್ಯವಾದ್ರೆ. ಹಿಮಾಚಲ ಪ್ರದೇಶದ ಅವಧಿಯು ಜನವರಿ 8 ರಂದು ಕೊನೆಗೊಳ್ಳುತ್ತದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಇನ್ನು ಹಿಮಾಚಲ ಪ್ರದೇಶದ ಹವಾಮಾನದ ಅಂಶವನ್ನೂ ಪರಿಗಣಿಸಲಾಗಿದ್ದು, ಹಿಮ ಬೀಳೋಕೆ ಪ್ರಾರಂಭವಾಗುವ ಮೊದಲು ಚುನಾವಣೆಗಳನ್ನು ನಡೆಸಲು ಬಯಸುತ್ತೇವೆ ಎಂದು ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.

ವೋಟಿಂಗ್ ದಿನಾಂಕ ಮತ್ತು ಫಲಿತಾಂಶದ ದಿನಾಂಕದ ನಡುವಿನ ಸುದೀರ್ಘ ಅಂತರವನ್ನ ವಿಶ್ಲೇಷಣೆ ಮಾಡಿರೋ ಕೆಲ ರಾಷ್ಟ್ರೀಯ ಮಾಧ್ಯಮಗಳು . ಈ ದೀರ್ಘಾವಧಿ ಅಂತರವನ್ನ ಶೀಘ್ರದಲ್ಲೇ ಗುಜರಾತ್ ವಿಧಾನಸಭೆ ಚುನಾವಣೆ ಘೋಷಿಸಲು ಒಂದು ಆಯ್ಕೆಯನ್ನ ಆಯೋಗ ಇಟ್ಟುಕೊಂಡಿದಂತಿದೆ ಅಂತಾ ಹೇಳಿವೆ. ಅಲ್ದೆ ಘೋಷಣೆ ಮಾತ್ರ ಬಾಕಿ ಉಳಿದಿದ್ದು, ಬಹುಶ ಡಿಸೆಂಬರ್ 8 ರಂದೇ ಗುಜರಾತ್ ಚುನಾವಣೆಯ ಫಲಿತಾಂಶದ ದಿನವನ್ನ ಇಟ್ಟುಕೊಳ್ಳಲು ಉದ್ದೇಶಿಸಿರಬಹುದೆಂದು ಊಹಿಸಿವೆ. ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯಕ್ತ ರಾಜೀವ್ ಕುಮಾರ್ ಅವರು, ಗುಜರಾತ್ ವಿಚಾರ ಬಂದಾಗ ಅದನ್ನ ತಿಳಿಸೋದಾಗಿ ಹೇಳಿದ್ದಾರೆ.

ವಿಪಕ್ಷಗಳ ಆರೋಪ : ಇನ್ನು ಗುಜರಾತ್ ಚುನಾವಣೆಗೆ ದಿನಾಂಕ ಘೋಷಣೆ ಆಗದಿರುವುದಕ್ಕೆ ಕಾಂಗ್ರೆಸ್ ಸೇರಿದಂತೆ ವಿವಿಧ ವಿಪಕ್ಷಗಳು ಬಿಜೆಪಿ ವಿರುದ್ಧ ಆರೋಪಿಸಿವೆ. ನೀತಿ ಸಂಹಿತೆ ಜಾರಿ ಆಗೋ ಮೊದಲು ಪ್ರಧಾನಿ ಮೋದಿ ಗುಜರಾತ್​ಗೆ ಅನೇಕ ಘೋಷಣೆ ಮತ್ತು ಯೋಜನೆಗಳನ್ನ ನೀಡೋದಕ್ಕಾಗಿ ಅವಕಾಶ ಮಾಡಿಕೊಂಡಿದೆ ಎಂದಿವೆ. 

ಹೈವೋಲ್ಟೇಜ್ ಅಖಾಡ : ಗುಜರಾತ್ ಚುನಾವಣೆ ಈ ಸಲ ಭಾರಿ ಕುತೂಹಲ ಕೆರಳಿಸಿದೆ. ಪ್ರಧಾನಿ ಮೋದಿ ತವರಲ್ಲಿ ನಡೆಯೋ ಚುನಾವಣಾ ಅಖಾಡಕ್ಕೆ ಈ ಬಾರಿ ಆಮ್ ಆದ್ಮಿ ಪಕ್ಷವೂ ಎಂಟ್ರಿಯಾಗಿ ಹಲ್​ಚಲ್ ಎಬ್ಬಿಸಿದೆ. ಪಂಜಾಬ್​ನಲ್ಲಿ ಮೆಗಾ ವಿಜಯದ ನಂತರ ಆಪ್​ ತನ್ನ ಅಸ್ತಿತ್ವವನ್ನ ರಾಷ್ಟ್ರದಾದ್ಯಂತ ವಿಸ್ತರಿಸಲು ಮುಂದಾಗಿದ್ದು, ಈಗಾಗಲೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯವಾದ ಗುಜರಾತ್‌ನಲ್ಲಿ,  ಆಕ್ರಮಣಕಾರಿಯಾಗಿ ಪ್ರಚಾರ ಮಾಡ್ತಿದ್ದಾರೆ. ಅಸಲಿಗೆ ಗುಜರಾತ್​ ಆಢಳಿತಾ ಬಿಜೆಪಿಗೆ ಈ ಬಾರಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಈ ಬಾರಿ ಪಕ್ಷ ಸವಾಲಾಗಿದೆ. ಇನ್ನು ಈಗಾಗಲೇ ಗುಜರಾತ್​ನಲ್ಲಿ ಬಿಜೆಪಿ ಕ್ಯಾಂಪೇನ್ ಆರಂಭಿಸಿದ್ದು, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಈಗಾಗಲೇ ಒಂದು ಬಾರಿ ಪ್ರಚಾರ ನಡೆಸಿದ್ದಾರೆ.

ಇದನ್ನೂ ಓದಿ : Kantara: ಕೆಜಿಎಫ್​ 2, ಆರ್​ಆರ್​ಆರ್​ ಸಿನಿಮಾಗಳ ರೇಟಿಂಗ್​ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದ ‘ಕಾಂತಾರ’

ಇದನ್ನೂ ಓದಿ : Puttur Bus Stand:ಪುತ್ತೂರು ಬಸ್​ ನಿಲ್ದಾಣ ಇನ್ಮುಂದೆ ‘ಕೋಟಿ -ಚೆನ್ನಯ್ಯ ಬಸ್​ ನಿಲ್ದಾಣ’ : ಸರ್ಕಾರದಿಂದ ಮಹತ್ವದ ಆದೇಶ

Why Gujarat election not announced The Central Election Commission has surprised by not announcing the date for the Gujarat assembly elections

Comments are closed.