Bharat Jodo in Raichuru : ಆಂಧ್ರಪ್ರದೇಶದಿಂದ ರಾಯಚೂರಿಗೆ ಎಂಟ್ರಿ ಕೊಟ್ಟ ಭಾರತ್ ಜೋಡೋ

ರಾಯಚೂರು :  Bharat Jodo in Raichuru ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಆಂಧ್ರಪ್ರದೇಶದಿಂದ ಮತ್ತೆ ಕರುನಾಡಿಗೆ ಎಂಟ್ರಿ ಕೊಟ್ಟಿದೆ. ನಿನ್ನೆ ಮಂತ್ರಾಲಯಕ್ಕೆ ಬಂದ ರಾಹುಲ್ ಗಾಂಧಿ ಇಂದು ಬೆಳಗ್ಗೆ 6.30ಕ್ಕೆ ಮಂತ್ರಾಲಯ ದೇವಾಲಯ ವೃತ್ತದಿಂದ  ಮತ್ತೆ ಪಾದಯಾತ್ರೆ ನಡೆಸ್ತಿದ್ದಾರೆ.

ಕರ್ನಾಟಕದಲ್ಲಿ 22ನೇ ದಿನ ಯಾತ್ರೆ : ಸೆಪ್ಟೆಂಬರ್ 30 ರಂದು ಚಾಮರಾಜನಗರದಿಂದ ಶುರುವಾದ ರಾಹುಲ್ ಗಾಂಧಿ ಯಾತ್ರೆ ಕರ್ನಾಟಕದಲ್ಲಿ ಇಂದಿಗೆ 22 ನೇ ದಿನಕ್ಕೆ ಕಾಲಿಟ್ಟಿದೆ. ಮೊದಲು ಯೋಜಿಸಿದ ಪ್ರಕಾರ ರಾಹುಲ್ ಗಾಂಧಿ ಸುಮಾರು 21 ದಿನಗಳ ಕಾಲ ರಾಜ್ಯದಲ್ಲಿ ಯಾತ್ರೆ ನಡೆಸುವದಾಗಿ ಕೆಪಿಸಿಸಿ ಘಟಕ ಮಾಹಿತಿ ನೀಡಿತ್ತು. ಆದ್ರೆ ಯೋಜಿಸಿದ್ದಕ್ಕಿಂತ ಎರಡು ದಿನ ಹೆಚ್ಚಾಗಿಯೇ ಯಾತ್ರೆ ನಡೆದಿದೆ. ಮೈಸೂರಿನಲ್ಲಿ ದಸರಾ ಉತ್ಸವ ಹಿನ್ನೆಲೆಯಲ್ಲಿ, ಹಾಗೂ ಸೋನಿಯಾ ಗಾಂಧಿ ರಾಜ್ಯಕ್ಕೆ ಆಗಮಿಸಿದ್ದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಪಾದಯಾತ್ರೆಗೆ ಎರಡು ದಿನ ಬ್ರೇಕ್ ತೆಗೆದುಕೊಂಡಿದ್ರು.

ಅ.23ಕ್ಕೆ ರಾಜ್ಯದಲ್ಲಿ ಯಾತ್ರೆ ಅಂತ್ಯ : ಸದ್ಯ ಮಂತ್ರಾಲಯ ಸರ್ಕಲ್ ನಿಂದ ಆರಂಭವಾಗಿರುವ ಇಂದಿನ ಯಾತ್ರೆ ಇಂದು ಬೆಳಗ್ಗೆ 11 ಗಂಟೆಗೆ ರಾಯಚೂರಿನ ಗಿಲ್ಲೆಸಗೂರಿಗೆ ಬರಲಿದೆ. ಗಿಲ್ಲೆಸಗೂರಿನ ಭಾರತ್ ಪೆಟ್ರೋಲ್ ಪಂಪ್ ಬಳಿ ಬೆಳಗಿನ ವಿರಾಮ ಇರಲಿದೆ. ಸಂಜೆ 4 ಗಂಟೆಗೆ ಕೆರೆಬೂದೂರು ಗ್ರಾಮದಿಂದ ಪಾದಯಾತ್ರೆ ಪುನಾರಂಭವಾಗಲಿದ್ದು, ಸಂಜೆ ಯರಗೇರಾ ಗ್ರಾಮದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಇವತ್ತಿನ ಯಾತ್ರೆ ಕೊನೆಗೊಳ್ಳಲಲಿದೆ. ನಾಳೆ ಒಂದು ದಿನ ರಾಯಚೂರು ಜಿಲ್ಲೆಯ ಹಲವು ಕಡೆ ಪಾದಯಾತ್ರೆ ನಡೆಯಲಿದ್ದು ಭಾನುವಾರ ರಾಯಚೂರು ಜಿಲ್ಲೆಯ ಮೂಲಕ ಭಾರತ್ ಜೋಡೋ ಯಾತ್ರೆ ತೆಲಂಗಾಣ ಪ್ರವೇಶಿಸಲಿದೆ.

ಮಂತ್ರಾಲಯದಲ್ಲಿವಿಶೇಷಪೂಜೆ : ನಿನ್ನೆ ಮಂತ್ರಾಲಯಕ್ಕೆ ಆಗಮಿಸಿದ ರಾಹುಲ್ ಗಾಂಧಿ ಗುರುರಾಘವೇಂದ್ರ ಸ್ವಾಮೀಜಿಗಳ ಸನ್ನಿಧಿಯಲ್ಲಿ ವಿಶೇಷ  ಪೂಜೆ ನೆರವೇರಿಸಿದ್ರು. ರಾಹುಲ್ ಗಾಂಧಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ರಾಜ್ಯ ಕಾಂಗ್ರೆಸ್ ನ ನಾಯಕರು ಸಾಥ್ ನೀಡಿದ್ರು.

ಇದನ್ನೂ ಓದಿ: Rozgar Mela:10 ಲಕ್ಷ ಮಂದಿಗೆ ಉದ್ಯೋಗ: ಅ.22ರಂದು ಬೃಹತ್ ರೋಜ್‍ಗಾರ್ ಮೇಳಕ್ಕೆ ಪ್ರಧಾನಿ ಚಾಲನೆ

ಇದನ್ನೂ ಓದಿ: Rishi Sunak PM : ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಲಿಜ್ ಟ್ರುಸ್ ರಾಜೀನಾಮೆ: ರಿಷಿ ಸುನಕ್‍ಗೆ ಒಲಿಯುತ್ತಾ ಪಟ್ಟ..?

ಇದನ್ನೂ ಓದಿ: Shivrajkumar Movie: ಶಿವಣ್ಣನ 125ನೇ ಸಿನಿಮಾ ರಿಲೀಸ್‍ಗೆ ಮುಹೂರ್ತ ಫಿಕ್ಸ್..!

Bharat Jodo in Raichuru Rahul Gandhi has again entered Karnataka from Andhra Pradesh

Comments are closed.