BBMP Target teachers : ಶಿಕ್ಷಕರಿಗೆ ಬಿಬಿಎಂಪಿ ಶಾಕ್ : ರಿಸಲ್ಟ್ ಹೆಚ್ಚಿಸದಿದ್ದರೇ ಕೆಲಸಕ್ಕೆ ಬೀಳಲಿದೆ ಕತ್ತರಿ

ಬೆಂಗಳೂರು : ಇದುವರೆಗೂ ರಾಜ್ಯ ರಾಜಧಾನಿ ಬೆಂಗಳೂರಿನ ಬೃಹತ್ ಮಹಾ‌ನಗರ ಪಾಲಿಕೆಯ ಶಾಲಾ ಕಾಲೇಜುಗಳು ಸೌಲಭ್ಯ ಕೊರತೆಯಿಂದ ಸದ್ದು ಮಾಡುತ್ತಿದ್ದವು. ಆದರೆ ಈಗ ಮಾತ್ರ ಶಾಲಾ ಕಾಲೇಜುಗಳ ಶಿಕ್ಷಕರ ಕಾರಣಕ್ಕೆ ಸದ್ದು ಮಾಡ್ತಿದೆ. ಶಾಲಾ ಕಾಲೇಜುಗಳಿಗೆ ಹೈಟೆಕ್ ಸ್ಪರ್ಶ ನೀಡಿರೋ ಪಾಲಿಕೆ ಈಗ ಶಿಕ್ಷಕರಿಗೆ ಟಾರ್ಗೆಟ್ (BBMP Target teachers) ನೀಡಿದ್ದು, ಮಕ್ಕಳ ಪರ್ಫಾಮೆನ್ಸ್, ರಿಸಲ್ಟ್ ಉತ್ತಮಗೊಳಿಸದಿದ್ದರೇ, ಸೇವೆಯಿಂದ ಗೇಟ್ ಪಾಸ್ ನೀಡಲು ನಿರ್ಧರಿಸಿದೆ.

ಬಿಬಿಎಂಪಿ ವ್ಯಾಪ್ತಿಯ ಒಟ್ಟು 198 ವಾರ್ಡ್ ಗಳಲ್ಲಿ 33 ಹೈಸ್ಕೂಲ್ ಮತ್ತು 18 ಪಿಯು ಕಾಲೇಜುಗಳಿವೆ. ಮೊದಲು ಸೌಲಭ್ಯ ಕೊರತೆ ಎದುರಿಸುತ್ತಿದ್ದ ಈ ಶಿಕ್ಷಣ ಸಂಸ್ಥೆಗಳಿಗೆ ಈಗ ಬಿಬಿಎಂಪಿ ಖಾಸಗಿ ಸಂಘ ಸಂಸ್ಥೆಗಳು ಹಾಗೂ ಐಟಿ ಕಂಪನಿಗಳ ನೆರವಿನಿಂದ ಹೈಟೆಕ್ ಸ್ಪರ್ಶ ನೀಡಿದೆ. ಲ್ಯಾಬ್, ಕಂಪ್ಯೂಟರ್ ಟ್ರೇನಿಂಗ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಿದೆ. ಅಷ್ಟೇ ಅಲ್ಲ ಮಕ್ಕಳ ಬೋದನೆಗಾಗಿ ಗುತ್ತಿಗೆ ಆಧಾರದ ಮೇಲೆ ಶಿಕ್ಷಕರನ್ನು ನೇಮಿಸಿಕೊಂಡಿದೆ.

ಬಿಬಿಎಂಪಿ ಅಂಕಿ ಅಂಶದ ಪ್ರಕಾರ ನಗರದಲ್ಲಿ 180 ಖಾಯಂ ಶಿಕ್ಷಕರಿದ್ದರೇ, 728 ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿರೋ ಶಿಕ್ಷಕರಿದ್ದಾರೆ. ಈ ಶಿಕ್ಷಕರು ನೀರಿಕ್ಷಿತ ಪ್ರಮಾಣದಲ್ಲಿ ತಮ್ಮ ಶ್ರಮ ಹಾಕಿ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ವಿಫಲರಾಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಬಿಬಿಎಂಪಿ ಶಿಕ್ಷಕರಿಗೆ ಖಡಕ್ ಎಚ್ಚರಿಕೆ ನೀಡಿದೆ. ಕಳೆದ ವರ್ಷ ಎಸ್ ಎಸ್ ಎಲ್ ಸಿ ಫಲಿತಾಂಶ ಶೇಕಡಾ 72% ಹಾಗೂ ದ್ವಿತೀಯ ಪಿಯುಸಿ ಫಲಿತಾಂಶ 66 % ಬಂದಿತ್ತು. ಹೀಗಾಗಿ ಈ ವರ್ಷ ಫಲಿತಾಂಶ ಶೇಕಡಾ 75% ದಾಟಬೇಕೆಂದು ಬಿಬಿಎಂಪಿ ಆದೇಶಿಸಿದೆ.

ಈ ಬಗ್ಗೆ ಬಿಬಿಎಂಪಿ ಸಹಾಯಕ ಆಯುಕ್ತ ಉಮೇಶ್ ಮಾಹಿತಿ ನೀಡಿದ್ದು, ಕೇವಲ ಫಲಿತಾಂಶ ಮಾತ್ರವಲ್ಲ ಮಕ್ಕಳ ಹಾಜರಾತಿ ಬಗ್ಗೆಯೂ ಗಮನ ಹರಿಸಲು ಸೂಚಿಸಲಾಗಿದೆ. ಪ್ರತಿ ವರ್ಷ ಮಕ್ಕಳ ಹಾಜರಾತಿಯನ್ನು ಶೇಕಡಾ ಹತ್ತರಷ್ಟು ಏರಿಕೆ ಮಾಡಲು ಸೂಚಿಸಲಾಗಿದೆ. ಈ ನಿಯಮಗಳನ್ನು ಪಾಲಿಸದ ಶಿಕ್ಷಕರ ವಿರುದ್ದ ಕ್ರಮಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದಿದ್ದಾರೆ. ಬಿಬಿಎಂಪಿ ಈ ಆದೇಶ ಶಿಕ್ಷಕರ ಎದೆಯಲ್ಲಿ ನಡುಕ ಮೂಡಿಸಿದೆ. ಬಿಬಿಎಂಪಿ ಪರ್ಫಾರ್ಮೆನ್ಸ್ ಆಧಾರದಲ್ಲಿ ಶಿಕ್ಷಕರ ಮೇಲೆ ಕ್ರಮಕ್ಕೆ ಸಿದ್ಧವಾಗಿರೋದು ಈಗ ಚರ್ಚೆಗೂ ಗ್ರಾಸವಾಗಿದೆ.

ಇದನ್ನೂ ಓದಿ : Karnataka School Admissions 2023-24 : ಶಾಲಾ ಪ್ರವೇಶಾತಿ ಆರಂಭ : ಖಾಸಗಿ ಶಿಕ್ಷಣ ಸಂಸ್ಥೆಗಳ ಅಟ್ಟಹಾಸ ಕೇಳೋರಿಲ್ಲ

ಇದನ್ನೂ ಓದಿ : BJP MLA controversy: ಲಕ್ಷ್ಮೀಯನ್ನು ಆರಾಧಿಸದ ಮುಸಲ್ಮಾನರು ಶ್ರೀಮಂತರಲ್ಲವೇ ? ವಿವಾದದ ಕಿಡಿ ಹೊತ್ತಿಸಿದ ಬಿಜೆಪಿ ಶಾಸಕ

BBMP Target for teachers If the result is not increased, the work will fall

Comments are closed.