ಮಂಡ್ಯ :Bharat Jodo Yatra : ರಾಜ್ಯ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿರುಸಿನ ಭಾರತ್ ಜೋಡೋ ಯಾತ್ರೆಯಲ್ಲಿಂದು ರಾಹುಲ್ ಗಾಂಧಿ ಜೊತೆಯಲ್ಲಿ ತಾಯಿ ಸೋನಿಯಾ ಗಾಂಧಿ ಕೂಡ ಹೆಜ್ಜೆ ಹಾಕಿದ್ದಾರೆ. ಎರಡು ದಿನಗಳ ವಿರಾಮ ತೆಗೆದುಕೊಂಡಿದ್ದ ಕಾಂಗ್ರೆಸ್ ನಾಯಕರು ಇಂದು ಮಂಡ್ಯದಲ್ಲಿ ಮತ್ತೆ ತಮ್ಮ ಪಾದಯಾತ್ರೆಯನ್ನು ಮುಂದುವರಿಸಿದ್ದಾರೆ. ರಾಹುಲ್ಗಾಂಧಿ ಜೊತೆ ಪಾದಯಾತ್ರೆಯಲ್ಲಿ ಸೋನಿಯಾ ಗಾಂಧಿ ಭಾಗಿಯಾಗಿದ್ದಾರೆ. ಪಾಂಡವಪುರ ತಾಲೂಕಿನ ರಾಮನಹಳ್ಳಿಯ ಬಳಿಯಲ್ಲಿ ಸೋನಿಯಾ ಗಾಂಧಿ ಭಾರತ್ ಜೋಡೋ ಯಾತ್ರೆಯನ್ನು ಸೇರಿಕೊಂಡಿದ್ದಾರೆ.
ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದ ದೃಶ್ಯ ಕಂಡು ಬಂತು. ನಾಗಮಂಗಲ ತಾಲೂಕಿನ ಕರಾಡ್ಯ ರಸ್ತೆ ಬದಿಯಲ್ಲಿ ನಿಂತ ಮಹಿಳೆಯರು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಪೂರ್ಣಕುಂಭ ಸ್ವಾಗತ ಕೋರಿದ್ದಾರೆ.
ಭಾರತ್ ಜೋಡೋ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಒಟ್ಟೂ 12 ನಿಮಿಷ ಹೆಜ್ಜೆ ಹಾಕಿದರು. ಸುಮಾರು ಮುಕ್ಕಾಲು ಕಿಲೋಮೀಟರ್ವರೆಗೆ ರಾಹುಲ್ ಗಾಂಧಿಯ ಜೊತೆಗೆ ಸೋನಿಯಾ ಗಾಂಧಿ ಪಾದಯಾತ್ರೆಯಲ್ಲಿ ಭಾಗಿಯಾದರು. ಇಂದೇ ಸೋನಿಯಾ ಗಾಂಧಿ ದೆಹಲಿಗೆ ಮರಳಲಿದ್ದಾರೆ.
ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಗುಲಾಬಿ ಹೂ ನೀಡಲು ಕಾಯುತ್ತಿದ್ದ ವಿಶೇಷ ಚೇತನರನ್ನು ರಾಹುಲ್ ಗಾಂಧಿ ರಸ್ತೆ ಮಧ್ಯೆ ಕರೆಸಿದರು. ಅಮೃತಿ ಗ್ರಾಮದ ಬಳಿ ವ್ಹೀಲ್ ಚೇರ್ನಲ್ಲಿ ರಾಹುಲ್ ಗಾಂಧಿ ಆಗಮನಕ್ಕಾಗಿ ವಿಶೇಷ ಚೇತನರು ಕಾಯುತ್ತಿದ್ದರು. ವಿಶೇಷ ಚೇತನರನ್ನು ನೋಡಿ ರಸ್ತೆ ಮಧ್ಯೆ ವ್ಹೀಲ್ ಚೇರ್ ತಳ್ಳಿಕೊಂಡು ಬರುವಂತೆ ಟ್ರಸ್ಟ್ವೊಂದರ ಸದಸ್ಯರಿಗೆ ರಾಹುಲ್ ಸೂಚನೆ ನೀಡಿದರು. ಪಾದಯಾತ್ರೆ ಮಾಡುತ್ತಲೇ ವಿಶೇಷ ಚೇತನರನ್ನು ಸುಮಾರು 2 ನಿಮಿಷಗಳ ಕಾಲ ರಾಹುಲ್ ಗಾಂಧಿ ಮಾತನಾಡಿಸಿದರು.
ಇಂದಿನ ಪಾದಯಾತ್ರೆ ಕಾರ್ಯಕ್ರಮದಲ್ಲಿ 15 ಸಾವಿರಕ್ಕೂ ಅಧಿಕ ಮಂದಿ ಭಾಗಿಯಾದರು. ಬೆಳಗ್ಗೆಯಿಂದಲೇ ಭಾರತ್ ಜೋಡೋ ಯಾತ್ರೆಯಲ್ಲಿ ಜನರು ಜಮಾಯಿಸಲು ಆರಂಭಿಸಿದರು. ದಾರಿಯುದ್ದಕ್ಕೂ ಜನರು ಪಾದಯಾತ್ರೆಯನ್ನು ಸೇರುತ್ತಲೇ ಹೋಗಿದ್ದಾರೆ.ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಭಾರತ್ ಜೋಡೋ ಯಾತ್ರೆಯಲ್ಲಿ ಇಂದು ಭಾಗಿಯಾಗಿದ್ದಾರೆ.
ಇದನ್ನು ಓದಿ : 12 year old rapes minor :ಐದು ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ 12 ವರ್ಷದ ಬಾಲಕ ಅರೆಸ್ಟ್
ಇದನ್ನೂ ಓದಿ : Bharat Jodo Yatra : ಮರಿ ಆನೆಗಾಗಿ ಮಿಡಿದ ರಾಹುಲ್ ಗಾಂಧಿ: ಚಿಕಿತ್ಸೆ ಕೊಡಿಸುವಂತೆ ಸಿಎಂ ಗೆ ಪತ್ರ
Bharat Jodo Yatra restarted after a two-day break: Sonia Saath for Rahul Gandhi