108 Ambulance : ರಾಜ್ಯದಲ್ಲಿ ಮೆಡಿಕಲ್ ಎಮರ್ಜೆನ್ಸಿ : ಮುಷ್ಕರಕ್ಕೆ ಮುಂದಾದ 108 ಚಾಲಕರು

ಬೆಂಗಳೂರು : ಕೆಲನದಿನಗಳ ಹಿಂದೆಯಷ್ಟೇ (Karnataka Medical emergency) 108 ಕಾಲ್ ಸೆಂಟರ್ ಸ್ಥಗಿತಗೊಂಡ ಕಾರಣಕ್ಕೆ ಸುದ್ದಿಯಾಗಿದ್ದ ಆರೋಗ್ಯ ಸೇವೆ ಈಗ ಮತ್ತೊಮ್ಮೆ ಸುದ್ದಿಯಾಗಿದೆ. ಕಳೆದ ಕೆಲ ತಿಂಗಳಿನಿಂದ ಸಂಬಳ ನೀಡದ ಹಿನ್ನೆಲೆಯಲ್ಲಿ ಈಗಾಗಲೇ ಸರ್ಕಾರಕ್ಕೆ ಹಾಗೂ ಸಂಬಂಧಿಸಿದ ಇಲಾಖೆಗೆ ಎಚ್ಚರಿಕೆ ನೀಡಿದ್ದ 108 ಚಾಲಕರು ಈಗ ಮುಷ್ಕರಕ್ಕೆ‌ ಮುಂದಾಗಿದ್ದಾರೆ. ಇದರಿಂದ ರಾಜ್ಯದಲ್ಲಿ ಮೆಡಿಕಲ್ ಎಮರ್ಜೆನ್ಸಿ ಸೃಷ್ಟಿಯಾಗೋ ಸ್ಥಿತಿ ಎದುರಾಗಿದೆ.

ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿರೋ (108 Ambulance)108 ಅಂಬುಲೆನ್ಸ್ ಸೇವೆಯ ಚಾಲಕರಿಗೆ ಕಳೆದ ಎರಡು ತಿಂಗಳಿನಿಂದ ಸಂಬಳವಾಗಿಲ್ಲ. ಈ ಬಗ್ಗೆ ಈಗಾಗಲೇ ಅಂಬುಲೆನ್ಸ್ ಚಾಲಕರು ಸರ್ಕಾರಕ್ಕೆ ಆರೋಗ್ಯ ಇಲಾಖೆಗೆ ಹಾಗೂ ಜಿಕೆವಿಕೆಗೆ ಪತ್ರ ಬರೆದು ಎಚ್ಚರಿಸಿದ್ದರು. ಆದರೆ ಗೌರಿ ಗಣೇಶ್ ಹಾಗೂ ದಸರಾ ಹಬ್ಬ ಕಳೆದರೂ ಅಂಬುಲೆನ್ಸ್ ಚಾಲಕರಿಗೆ ಸಂಬಳ ಕೈ ಸೇರಿಲ್ಲ ಎನ್ನಲಾಗಿದೆ. ಹೀಗಾಗಿ 108 ಅಂಬುಲೆನ್ಸ್ ಚಾಲಕರು ಮುಷ್ಕರಕ್ಕೆ ನಿರ್ಧರಿಸಿದ್ದಾರೆ.ಸದ್ಯ ಆಂಬುಲೆನ್ಸ್ ಡ್ರೈವರ್ ಗಳು ಸರ್ಕಾರಕ್ಕೆ ಒಂದು ದಿನದ ಗಡುವು ನೀಡಿದ್ದಾರೆ. ದಸರಾ ರಜೆ ಹಿನ್ನಲೆ ಹಾಗೂ ಆರೋಗ್ಯ ಇಲಾಖೆ ಸಮಯ ಕೇಳಿದ ಹಿನ್ನಲೆ ಒಂದು ದಿನದ ಗಡುವು ನೀಡಿರೋ ಆಂಬುಲೆನ್ಸ್ ಡ್ರೈವರ್ಸ್ ನಾಳೆ ಸಂಜೆಯೊಳಗೆ ಸಂಬಳದ ವಿಚಾರ ಇತ್ಯರ್ಥವಾಗದಿದ್ದರೇ ರಜೆ ಮೇಲೆ‌ತೆರಳೋದಾಗಿ ಘೋಷಿಸಿದ್ದಾರೆ.

108 ಚಾಲಕರ ಸಂಬಳದ ಸಮಸ್ಯೆ ಬಹಿರಂಗವಾಗುತ್ತಿದ್ದಂತೆ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಶುಕ್ರವಾರ 11 ಗಂಟೆಗೆ ಆರೋಗ್ಯ ಇಲಾಖೆಯಲ್ಲಿ ಈ ಬಗ್ಗೆ ಸಭೆ ಕರೆದಿದೆ. ಈ ಸಭೆಯಲ್ಲಿ ಸಂಬಳ ಸಮಸ್ಯೆ ಇತ್ಯರ್ಥವಾಗೋ ಸಾಧ್ಯತೆ ಇದೆ. ಒಂದೊಮ್ಮೆ ಈ ಸಭೆಯಲ್ಲಿ ಸಮಸ್ಯೆ ಇತ್ಯರ್ಥವಾಗದೇ ಇದ್ದಲ್ಲಿ ರಜೆ ಮೇಲೆ ತೆರಳಲು ರಾಜ್ಯದ ಎಲ್ಲಾ 108 ವಾಹನ ಸವಾರರು ನಿರ್ಧರಿಸಿದ್ದಾರೆ. ಈಗಾಗಲೇ ಜಿವಿಕೆ ತಾಂತ್ರಿಕ ಸಮಸ್ಯೆಯಿಂದ ಆಂಬುಲೆನ್ಸ್ ಸೇವೆ ವ್ಯತ್ಯಯವಾಗಿತ್ತು. ಯಾವುದೇ ಜಿಲ್ಲೆಯಲ್ಲೂ 108 ಸೇವೆಗೆ ಕಾಲ್ ಕನೆಕ್ಟ್ ಆಗದೇ ಜನರು ರೋಗಿಗಳು, ತುರ್ತು ಪರಿಸ್ಥಿತಿಯಲ್ಲಿರೋ ಗಾಯಾಳುಗಳನ್ನು ಸಾಗಿಸಲು ಸಾಧ್ಯವಾಗದೇ ಪರದಾಡಿದ್ದರು.

ಇದನ್ನೂ ಓದಿ : Bharat Jodo Yatre : ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಗೆ ಸೋನಿಯಾ ಎಂಟ್ರಿ

ಇದನ್ನೂ ಓದಿ : Acid Served In Water Bottles : ರೆಸ್ಟಾರೆಂಟ್​ನಲ್ಲಿ ನೀರಿನ ಬಾಟಲಿಯಲ್ಲಿ ಆಸಿಡ್​ ಕೊಟ್ಟ ಸಿಬ್ಬಂದಿ : ಇಬ್ಬರು ಮಕ್ಕಳು ಆಸ್ಪತ್ರೆ ದಾಖಲು

ಇದನ್ನೂ ಓದಿ : 12 year old rapes minor :ಐದು ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ 12 ವರ್ಷದ ಬಾಲಕ ಅರೆಸ್ಟ್​​

ಈಗ ಮತ್ತೆ ಡ್ರೈವರ್ ಗಳಿಗೆ ಸಂಬಳ ನೀಡದಿರೋದ್ರಿಂದ ಸಮಸ್ಯೆ ಎದುರಾಗಿದ್ದು, ಸಂಬಳ ಇಲ್ಲದೇ ಎರಡು ತಿಂಗಳ ಕಾಲ ಸಂಕಷ್ಟ ಎದುರಿಸಿದ ಚಾಲಕರು ಈಗ ಹಿ ಮುಷ್ಕರದ ಹಾದಿ ಹಿಡಿದಿದ್ದಾರೆ.108 ಚಾಲಕರು ಮುಷ್ಕರ ಕೈಗೊಂಡಲ್ಲಿ ರಾಜ್ಯದ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸಮಸ್ಯೆ ಎದುರಾದಲ್ಲಿ ಆಸ್ಪತ್ರೆ ಗೆ ತಲುಪೋದು ಕಷ್ಟವಾಗಲಿದೆ.

Karnataka Medical emergency in the state: 108 ambulance drivers went on strike

Comments are closed.