Acid Served In Water Bottles : ರೆಸ್ಟಾರೆಂಟ್​ನಲ್ಲಿ ನೀರಿನ ಬಾಟಲಿಯಲ್ಲಿ ಆಸಿಡ್​ ಕೊಟ್ಟ ಸಿಬ್ಬಂದಿ : ಇಬ್ಬರು ಮಕ್ಕಳು ಆಸ್ಪತ್ರೆ ದಾಖಲು

ಪಾಕಿಸ್ತಾನ : Acid Served In Water Bottles : ಖಾನಾವಳಿಯೊಂದರಲ್ಲಿ ಬರ್ತಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ಇಬ್ಬರು ಅಪ್ರಾಪ್ತರಿಗೆ ನೀರಿನ ಬಾಟಲಿಯಲ್ಲಿ ಆಸಿಡ್​ನ್ನು ನೀಡಿದ ಪಾಕಿಸ್ತಾನದ ರೆಸ್ಟೋರೆಂಟ್​ ವ್ಯವಸ್ಥಾಪಕನೊಬ್ಬನನ್ನು ಲಾಹೋರ್​ ಪೊಲೀಸರು ಬಂಧಿಸಿದ ಘಟನೆಯೊಂದು ವರಿಯಾಗಿದೆ. ಸೆಪ್ಟೆಂಬರ್​ 27ರಂದು ಐತಿಹಾಸಿಕ ಗ್ರೇಟರ್​ ಇಕ್ಬಾಲ್​ ಪಾರ್ಕ್​ನ ಪೂಯೆಟ್​​ ರೆಸ್ಟೋರೆಂಟ್​ನಲ್ಲಿ ಈ ಘಟನೆ ಸಂಭವಿಸಿದೆ. ಅಪ್ತಾಪ್ತರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಎಫ್​ಐಆರ್​ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಮುಹಮ್ಮದ್​ ಆದಿಲ್​​ ಎಂಬವರ ಕುಟುಂಬದ ಬರ್ತಡೇ ಪಾರ್ಟಿಯೊಂದನ್ನು ರೆಸ್ಟಾರೆಂಟ್​ನಲ್ಲಿ ಆಯೋಜಿಸಲಾಗಿತ್ತು. ಮುಹಮ್ಮದ್​ ಆದಿಲ್​​ ಸೋದರಳಿಯ ಆಹಾರವನ್ನು ಸೇವಿಸಿದ ಬಳಿಕ ಕೈ ತೊಳೆದುಕೊಳ್ಳಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಹೋಟೆಲ್​ನ ಸಿಬ್ಬಂದಿ ಕೈ ತೊಳೆದುಕೊಳ್ಳಲು ನೀರಿನ ಬಾಟಲಿಯನ್ನು ನೀಡಿದ್ದಾರೆ. ಇದರಲ್ಲಿ ಕೈ ತೊಳೆದುಕೊಳ್ಳುತ್ತಿದ್ದಂತೆಯೇ ಪುಟ್ಟ ಬಾಲಕ ಅಳಲು ಆರಂಭಿಸಿದ್ದಾನೆ. ಮಾತ್ರವಲ್ಲದೇ ಆತನ ಕೈಗಳಲ್ಲಿ ಸುಟ್ಟ ಗಾಯಗಳು ಕಾಣಿಸಿಕೊಂಡ ಬಳಿಕ ಅದು ನೀರಿನ ಬಾಟಲಿಯಲ್ಲ ಬದಲಾಗಿ ಆಸಿಡ್​ ಬಾಟಲಿ ಎಂದು ತಿಳಿದು ಬಂದಿದೆ . ಇದಾದ ಬಳಿಕ ಮುಹಮ್ಮದ್​ ಆದಿಲ್​ ರೆಸ್ಟಾರೆಂಟ್​ ವ್ಯವಸ್ಥಾಪಕನ ವಿರುದ್ಧ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಇದು ಮಾತ್ರವಲ್ಲದೇ ಇದೇ ಬರ್ತಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ಎರಡೂವರೆ ವರ್ಷದ ಮತ್ತೋರ್ವ ಬಾಲಕಿ ವಾಜಿಹಾ ಕೂಡ ಇದು ಆಸಿಡ್​ ಬಾಟಲಿಯೆಂದು ತಿಳಿಯದೇ ನೀರಿನ ಬಾಟಲಿ ಎಂದುಕೊಂಡು ಅದನ್ನೇ ಕುಡಿದಿದ್ದಾಳೆ. ಕೂಡಲೇ ಇಬ್ಬರೂ ಮಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಬ್ಬರು ಮಕ್ಕಳ ಪೈಕಿ ಆಸಿಡ್​ ಕುಡಿದ ವಾಜಿಹಾ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ : Cough Syrup : ಕೆಮ್ಮಿನ ಔಷಧ ಕುಡಿದು 66 ಮಕ್ಕಳ ಸಾವು.. ತನಿಖೆಗೆ ಮುಂದಾದ WHO

ಇದನ್ನು ಓದಿ : Jasprit bumrah Mohamed Shami: ಟಿ20 ವಿಶ್ವಕಪ್: ಶಮಿ, ಚಹರ್, ಸಿರಾಜ್, ಬುಮ್ರಾ ಬದಲು ಯಾರು ? ಬಿಗ್ ಅಪ್‌ಡೇಟ್ ಕೊಟ್ಟ ಕೋಚ್ ದ್ರಾವಿಡ್

ಇದನ್ನೂ ಓದಿ : 12 year old rapes minor :ಐದು ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ 12 ವರ್ಷದ ಬಾಲಕ ಅರೆಸ್ಟ್​​

Acid Served In Water Bottles In Pak Restaurant, Manager Arrested

Comments are closed.