ಹಾಸನ : Bhavani Revanna:ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಾಸನದಲ್ಲಿ ಈಗಲೇ ಚುನಾವಣೆ ಕಾವು ಹೆಚ್ಚಾಗುತ್ತಿದೆ. ಭವಾನಿ ರೇವಣ್ಣ ಅವರು ನನ್ನ ವಿರುದ್ಧ ಸ್ಪರ್ಧೆ ಮಾಡಲಿ ಎಂಬ ಶಾಸಕ ಪ್ರೀತಂಗೌಡ ಆಹ್ವಾನ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಬಗ್ಗೆ ಸ್ವತಃ ಪ್ರತಿಕ್ರಿಯೆ ನೀಡಿರುವ ಭವಾನಿ ರೇವಣ್ಣ ಜೆಡಿಎಸ್‌ನಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎಂಬ ತೀರ್ಮಾನ ಪಕ್ಷಕ್ಕೆ, ವರಿಷ್ಠರಿಗೆ ಸೇರಿದ್ದು. ಪ್ರೀತಂ ಗೌಡ ಅವರ ಪಕ್ಷದ ಏನು ಕೆಲಸ ಕಾರ್ಯ ಇದೆ ಅದನ್ನು ಅವರು ಮಾಡಿಕೊಂಡು ಇರಲಿ ಎಂದು ಪ್ರೀತಂಗೌಡ ಹೇಳಿಕೆಗೆ ಭವಾನಿರೇವಣ್ಣ ತಿರುಗೇಟು ನೀಡಿದ್ದಾರೆ.
ಹಾಸನ ರಿಂಗ್ ರಸ್ತೆಯಲ್ಲಿರುವ ಚಾಮುಂಡೇಶ್ವರಿ, ಉದ್ಭವ ಗಣಪತಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಭವಾನಿ ರೇವಣ್ಣ ಮಾಧ್ಯಮಗಳ ಜೊತೆ ಮಾತನಾಡಿದ್ದು ನನಗೆ ರಾಜಕೀಯವಾಗಿ ಏನೇ ಕೇಳಿದ್ರು ಇಷ್ಟೇ ಹೇಳದೋ ಎಂದರು. ಅವರು ನಮಗೇನು ಆಹ್ವಾನ ಮಾಡೋದು ಬೇಡ ಎಂದ ಭವಾನಿ ರೇವಣ್ಣ ನಮ್ಮ ಪಕ್ಷದಿಂದ ಯಾರಿಗೆ ಟಿಕೆಟ್ ಅನ್ನೋ ಚರ್ಚೆ ಯಾಕೆ, ಯಾರೇ ಬಂದರು ಅವರು ಫೈಟ್ ಮಾಡಲೇಬೇಕು ಎಂದರು. ಯಾರೇ ನಿಂತರು ಅವರ ಕೆಲಸ ಅವರು ಮಾಡಬೇಕು, ನಮ್ಮ ಕೆಲಸ ನಾವು ಮಾಡಬೇಕು. ಏತಕ್ಕೆ ಅವರಿಗೆ ಸಿಟ್ಟು ಬರ್ತಿದೆ, ಇವರಿಗೆ, ಅವರಿಗೆ ಟಿಕೆಟ್ ಕೊಡ್ತಾರೆ ಅನ್ನೋ ಚರ್ಚೆ ಯಾಕೆ ಎಂದು ಪ್ರಶ್ನಿಸಿದರು.
ಅವರಿಗೆ ಬೇಡವಾದ ವಿಷಯ ಇದು, ಯಾರೇ ನಿಂತರು ಎಲೆಕ್ಷನ್ ನಡಿಲೇಬೇಕು ಎಂದ ಭವಾನಿ ರೇವಣ್ಣ ನಮಗೆ ಆಹ್ವಾನ ನೀಡುತ್ತಿರುವ ಬಗ್ಗೆ ಪ್ರೀತಂಗೌಡ ಅವರನ್ನು ಕೇಳಿ ಉತ್ತರ ಪಡೆಯಬೇಕು. ನಾವು ಉತ್ತರಿಸಲಾರೆ, ಅವರ‌್ಯಾಕೆ ನಮ್ಮ ಕುಟುಂಬದ ಬಗ್ಗೆ ಮಾತಾಡ್ತರೆ ಅನ್ನೋದು ನನಗೆ ಗೊತ್ತಿಲ್ದಲೆ ಇರೋ ವಿಷಯ. ಅವರು ಬಿಜೆಪಿಯಿಂದ ನಿಲ್ತಾರೆ, ನಮ್ಮ ಜೆಡಿಎಸ್‌ನಿಂದ ಯಾರಿಗೆ ಟಿಕೆಟ್ ಕೊಡ್ತಾರೆ ಅವರು ಎಲೆಕ್ಷನ್‌ಗೆ ನಿಲ್ತಾರೆ. ಅಲ್ಲಿ ಫೈಟ್ ಮಾಡಬೇಕೇ ಹೊರತು ಅವರು ನಿಲ್ಲಲ್ಲಿ, ಇವರು ನಿಲ್ಲಲ್ಲಿ ಅಂತ ಆಹ್ವಾನ ಕೊಡೋದು ಯಾಕೆ. ಜೆಡಿಎಸ್‌ನಿಂದ ಯಾರಿಗೆ ಕೊಟ್ರು ನಾವ್ ಫೈಟ್ ಮಾಡ್ತಿವಿ ಎಂದು ಭವಾನಿ ರೇವಣ್ಣ ಹೇಳಿದರು.
ಈಗ ಬರಿ ಗಣಪತಿ ದೇವಾಲಯಗಳಿಗೆ ಭೇಟಿ ನೀಡ್ತಿದ್ದಾರೆ, ಹಳ್ಳಿಗಳ ಕಡೆಗು ಹೋಗಲಿ ಎಂಬ ಪ್ರೀತಂಗೌಡ ಹೇಳಿಕೆ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ ಭವಾನಿ ರೇವಣ್ಣ ಅದನ್ನು ಯಾರಿಂದಲೂ ಹೇಳಿಸಿಕೊಂಡು ಮಾಡಬೇಕಾದ ವಿಷಯವಲ್ಲ. ಹಾಸನ ನನಗಾಗಲಿ, ಸಂಸದರಿಗಾಗಲಿ, ರೇವಣ್ಣ ಅವರಿಗಾಗಲಿ ಹೊಸದಲ್ಲ. ನಿನ್ನೆ, ಮೊನ್ನೆ ನಾವು ಹಾಸನ ನೋಡಿದವರಲ್ಲ. ಏನ್ ಕೆಲಸ ಮಾಡಬೇಕು, ಏನು ಮಾಡಬೇಕು ಅನ್ನೋದು ನನಗೆ ಗೊತ್ತಿದೆ, ನಾವ್ ಮಾಡ್ತಿವಿ ಎಂದು ಹೇಳಿದರು.
ಇದನ್ನು ಓದಿ : Maha Navami 2022 : ನವರಾತ್ರಿಯ ಒಂಭತ್ತನೆಯ ದಿನ : ಮಹಾನವಮಿ, ಆಯುಧಪೂಜೆಯ ವಿಶೇಷತೆಗಳೇನು ?
Bhavani Revanna said that whoever contests the election in Hassan will have our support