Maha Navami 2022 : ನವರಾತ್ರಿಯ ಒಂಭತ್ತನೆಯ ದಿನ : ಮಹಾನವಮಿ, ಆಯುಧಪೂಜೆಯ ವಿಶೇಷತೆಗಳೇನು ?

ಮೈಸೂರು : (Maha Navami 2022) ನಾಡಿನಾದ್ಯಂತ ದಸರಾ ಪ್ರಾರಂಭವಾಗಿ ಒಂಭತ್ತು ದಿನಗಳು ಕಳೆದಿದೆ. ಎರಡು ವರ್ಷ ಕೋವಿಡ್‌ನಿಂದಾಗಿ ಸರಳವಾಗಿ ಆಚರಿಸಿದ ದಸರಾವನ್ನು ಈ ಬಾರಿ ಬಹಳ ವಿಜೃಂಭಣೆಯಿಂದ ಆಚರಿಸಲಾಗಿದೆ. ನಮ್ಮ ಮೈಸೂರಿನಲ್ಲಿ ದಸರಾವನ್ನು ಬಹಳ ಅದ್ದೂರಿಯಾಗಿ ಆಚರಿಸುತ್ತಿದ್ದು, ಚಾಮುಂಡಿದೇವಿಯ ದರ್ಶನಕ್ಕಾಗಿ ಭಕ್ತರು, ಪ್ರವಾಸಿಗರ ದಂಡೇ ಹರಿದು ಬಂದಿದೆ. ನವರಾತ್ರಿಯ ಒಂಭತ್ತನೆಯ ದಿನ ಮಹಾನವಮಿಯಂದು ಆಯುಧಪೂಜೆ ಅಥವಾ ಅಸ್ತ್ರಪೂಜೆ ಮಾಡಲಾಗುತ್ತದೆ. ಹಾಗೆ ನಾಡಿನಾದ್ಯಂತ ಇಂದು ಆಯುಧಪೂಜೆಯನ್ನು ಶ್ರದ್ದಾಭಕ್ತಿಯಿಂದ ಆಚರಿಸಲಾಗುತ್ತಿದೆ.

ಆಯುಧಪೂಜೆಯು ನವರಾತ್ರಿಯ ಒಂದು ಭಾಗವಾಗಿದೆ. ನವರಾತ್ರಿಯ ಒಂಭತ್ತನೆ ದಿನವಾದ (Maha Navami 2022) ಮಹಾನವಮಿಯಂದು ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಮುಖ್ಯವಾಗಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಹೆಚ್ಚಾಗಿ ಆಯುಧ ಪೂಜೆಯನ್ನು ಆಚರಿಸಲಾಗುತ್ತದೆ. ಆಯುಧ ಪೂಜೆಯ ಸಮಯದಲ್ಲಿ ಅಧಿದೇವತೆಯರಾದ ಸರಸ್ವತಿ, ಲಕ್ಷ್ಮಿ, ಹಾಗೂ ಪಾರ್ವತಿಯನ್ನು ಪೂಜಿಸುತ್ತಾರೆ. ಆಯುಧ ಪೂಜೆಯನ್ನು ಶಸ್ತ್ರ ಪೂಜೆ ಎಂದೂ ಕರೆಯುತ್ತಾರೆ. ನಮ್ಮ ಜೀವನಕ್ಕೆ ಆಧಾರವಾಗಿರುವ ಸಾಧನಗಳೆಂದು ಪರಿಗಣಿಸುವ ಎಲ್ಲಾ ಉಪಕರಣಗಳು ಹಾಗೂ ಸಲಕರಣೆಗಳಿಗೆ ಆಯುಧ ಪೂಜೆಯ ಸಂದರ್ಭದಲ್ಲಿ ಪೂಜೆಯನ್ನು ಸಲ್ಲಿಸಲಾಗುತ್ತದೆ. ದೇಶ ಕಾಯುವ ಯೋಧರು ಸೈನಿಕರು ಶಸ್ತ್ರಾಸ್ತ್ರಗಳನ್ನು ಪೂಜಿಸುತ್ತಾರೆ.

ಇದನ್ನೂ ಓದಿ : Mysore Dasara 2022: ಈ ಬಾರಿ ಅದ್ದೂರಿ ನಾಡಹಬ್ಬ, ದಸರಾ ಉದ್ಘಾಟಿಸಲಿದ್ದಾರೆ ರಾಷ್ಟ್ರಪತಿ ದ್ರೌಪದಿ ಮುರ್ಮು

ಇದನ್ನೂ ಓದಿ : Mysore dasara 2022 :ನಾಡಹಬ್ಬ ದಸರಾಕ್ಕೆ 46 ಸ್ತಬ್ದಚಿತ್ರಗಳು ಸಜ್ಜು : ಅರಮನೆ ನಗರಿಯಲ್ಲಿ ರಾರಾಜಿಸಲಿದೆ ಅಪ್ಪು ಸ್ತಬ್ದಚಿತ್ರ

ಇದನ್ನೂ ಓದಿ : Mysore Dussehra : ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ

ಆಯುಧ ಪೂಜೆಗೆ ಸಂಬಂಧಿಸಿದಂತೆ ಎರಡು ದಂತಕಥೆಗಳಿಗೆ. ಅನಾಧಿ ಕಾಲದಿಂದಲೂ ಮೈಸೂರಿನ ಮಹಾರಾಜರು ನವರಾತ್ರಿಯ ಸಂದರ್ಭದಲ್ಲಿ ಮಹಾನವಮಿಯ ದಿನದಂದು ಆಯುಧ ಪೂಜೆಯನ್ನು ಆಚರಿಸುತ್ತಿದ್ದರು. ಇದರಿಂದಲೇ ಆಯುಧ ಪೂಜೆ ಪ್ರಸಿದ್ದಗೆ ಬಂದಿದೆ ಎನ್ನಲಾಗುತ್ತಿದೆ. ಇನ್ನೊಂದೆಡೆಯಲ್ಲಿ ಮಹಾಭಾರತದಲ್ಲಿ ಅಜ್ಞಾತವಾಸವನ್ನು ಮುಗಿಸಿದ ನಂತರ ಪಾಂಡವರು ವಿಜಯ ದಶಮಿಯ ದಿನದಂದು ಹಿಂದಿರುಗಿ ಬಂದಿದ್ದರು. ನಂತರ ಕುರುಕ್ಷೇತ್ರ ಯುದ್ದವನ್ನು ಜಯಿಸಿದ್ದರು. ಹೀಗಾಗಿ ಇದು ಶುಭದಿನವಾಗಿದ್ದು, ಯಾವುದೇ ಹೊಸ ಉದ್ಯಮವನ್ನು ಪ್ರಾರಂಭಿಸಲು ಶುಭ ಎಂದು ನಂಬಲಾಗಿದೆ.

ಆಯುಧ ಪೂಜೆಯ ವಿಧಾನ:
ನಮ್ಮ ಹಿಂದೂ ಸಂಪ್ರದಾಯದಲ್ಲಿ ಬಹಳ ಹಿಂದಿನಿಂದಲೂ ಆಯುಧ ಪೂಜೆಯಂದು ಆಯುಧಗಳನ್ನು ಪೂಜಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಆದರೆ ಇತ್ತೀಚಿನ ಆಧುನಿಕ ಕಾಲದಲ್ಲಿ ಜನರು ಆಯುಧ ಪೂಜೆಯಂದು ಜನರು ಸ್ಕೂಟರ್‌, ಬೈಕ್‌, ಕಾರು ಹಾಗೂ ತಮ್ಮ ವೃತ್ತಿಯ ಎಲ್ಲಾ ಉಪಕರಣಗಳನ್ನು ಸ್ವಚ್ಚಗೊಳಿಸುತ್ತಾರೆ. ನಂತರ ಯಂತ್ರಗಳು, ವಾಹನಗಳು ಮತ್ತು ಇತರ ಸಾಧನಗಳನ್ನು ಚೆನ್ನಾಗಿ ಹೊಳಪುಗೊಳಿಸುತ್ತಾರೆ. ನಂತರ ಅವುಗಳನ್ನು ಹೂಹಾರಗಳಿಂದ, ಮಾವಿನಎಲೆ ಹಾಗೂ ಬಾಳೆಗಿಡಗಳಿಂದ ಅಲಂಕರಿಸುತ್ತಾರೆ. ಹಾಗೆ ಅದಕ್ಕೆ ಕುಂಕುಮ ಹಾಗೂ ಅರಶಿನವನ್ನು ಇಟ್ಟು ಪೂಜಿಸಲಾಗುತ್ತದೆ. ಹಾಗೆ ಬೂದು ಕುಂಬಳಕಾಯಿಯನ್ನುಎಲ್ಲಾ ಅನಿಷ್ಟಗಳನ್ನು ತೊಡೆದು ಹಾಕುವ ಸಲುವಾಗಿ ವಾಹನದ ಎದುರು ಒಡೆಯುವುದರ ಮೂಲಕ ಪೂಜೆ ಸಲ್ಲಿಸುತ್ತಾರೆ.

The ninth day of Navratri: Mahanavami, what are the special features of Ayudhapuja?

Comments are closed.