Yellow Alert : ಮತ್ತೆ ಶುರುವಾಯ್ತಾ ವರುಣನ ನರ್ತನ : ಹಳದಿ ಅಲರ್ಟ್‌ ಘೋಷಣೆ

ಬೆಂಗಳೂರು : (Yellow Alert Karnataka ) ಕಳೆದ ಎರಡು ದಿನದಿಂದ ರಾಜ್ಯದಲ್ಲಿ ಮಳೆಯ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗಿದೆ. ಶನಿವಾರ ಮತ್ತು ಭಾನುವಾರ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ಭಾರಿ ಅವಾಂತರವನ್ನು ಸೃಷ್ಠಿಸಿತ್ತು. ಆದರೆ ಮುಂದಿನ ನಾಲ್ಕೈದು ದಿನ ಮಳೆಯ ಪ್ರಮಾಣ ತಗ್ಗಲಿದ್ದು, ಮುಂದಿನ ವಾರ ಮತ್ತೆ ಮಳೆ ಆರ್ಭಟಿಸಿದೆ ಎಂದು ಹವಾಮಾನ ಇಲಾಖೆ ( IMD) ಮುನ್ಸೂಚನೆಯನ್ನು ನೀಡಿದೆ. ಇನ್ನೊಂದೆಡೆಯಲ್ಲಿ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹಳದಿ ಅಲರ್ಟ್‌( Yellow Alert ) ಘೋಷಣೆ ಮಾಡಲಾಗಿದೆ.

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದ ಕರ್ನಾಟಕದ ಹಲವೆಡೆ ಮೋಡ ಕವಿದ ವಾತಾವರಣವಿದ್ದು, (Yellow Alert ) ಇಂದು ಕೂಡ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉತ್ತರ ಒಳನಾಡಿನಲ್ಲಿ ಮಳೆಯ ಆರ್ಭಟ ಕಡಿಮೆಯಾಗಿದ್ದು, ಮುಂದಿನ ಇನ್ನೆರಡು ದಿನ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ಇದನ್ನೂ ಓದಿ : Maha Navami 2022 : ನವರಾತ್ರಿಯ ಒಂಭತ್ತನೆಯ ದಿನ : ಮಹಾನವಮಿ, ಆಯುಧಪೂಜೆಯ ವಿಶೇಷತೆಗಳೇನು ?

ಇದನ್ನೂ ಓದಿ : Kannada Bigg Boss Season 9:ಟಿವಿಯಲ್ಲಿ ಪ್ರಸಾರವಾಗಲಿದೆ ಕನ್ನಡದ ಬಿಗ್‌ ಬಾಸ್‌ ಸೀಸನ್‌ 9

ಇದನ್ನೂ ಓದಿ : Mumbai Indians: ಮುಂಬೈ ಇಂಡಿಯನ್ಸ್ ಫ್ಯಾಮಿಲಿಗೆ ಮತ್ತಿಬ್ಬರ ಎಂಟ್ರಿ, ಎಂಐ ಎಮಿರೇಟ್ಸ್, ಎಂಐ ಕೇಪ್ ಟೌನ್ ತಂಡಗಳ ಅನಾವರಣ

ಬೆಂಗಳೂರಿನಲ್ಲಿ ಕೂಡ 2 ದಿನದಿಂದ ಕೊಂಚ ಮಳೆಯಾಗುತ್ತಿದ್ದು, ಇಂದು ಮೋಡ ಕವಿದ ವಾತಾವರಣವಿದ್ದು , ಮಳೆಯಾಗುವ ಸೂಚನೆಯಿದೆ. ಇಂದು ದಕ್ಷಿಣ ಒಳನಾಡಿನಲ್ಲಿ ಹೆಚ್ಚು ಮಳೆಯಾಗುವ ಸಾಧ್ಯೆತೆಯಿದೆ . ಕೋಲಾರ, ಚಿಕ್ಕಬಳ್ಳಾಪುರ , ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕಡಿಮೆ ಮಳೆಯಾಗುವ ಸಾಧ್ಯತೆ ಕಂಡುಬಂದಿದೆ. ಶಿವಮೊಗ್ಗ, ಹಾಸನ , ಕೊಡಗು , ಚಿಕ್ಕಮಗಳೂರು, ಚಾಮರಾಜನಗರ ಹಾಗೂ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಹೆಚ್ಚಿದ್ದು, ಈ ಪ್ರದೇಶಗಳಲ್ಲಿ ʼಹಳದಿ ಅಲರ್ಟ್‌ ಘೋಷಣೆ ಮಾಡಲಾಗಿದೆ. ಉಳಿದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.

ಅಸ್ಸಾಂ , ಮೇಘಾಲಯ, ಮಣಿಪುರ, ತೆಲಂಗಾಣ, ಕೇರಳ ಹಾಗೂ ಇನ್ನು ಕೆಲವು ರಾಜ್ಯಗಳಲ್ಲಿ ಗಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ತಿಳಿಸಿದೆ. ಅಕ್ಟೋಬರ್‌ 5 ರಂದು ಮಧ್ಯಪ್ರದೇಶದ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ . ಪಶ್ಚಿಮ ಉತ್ತರ ಪ್ರದೇಶದಲ್ಲಿ ಅಕ್ಟೋಬರ್‌ 6 ಮತ್ತು 7 ರಂದು ಗುಡುಗು ಸಹಿತ ಮಳೆಯಾಗಲಿದ್ದು, ರಾಜ್ಯದ ಜನತೆ ಜಾಗರೂಕರಾಗಿರಬೇಕು . ಭಾರತ ಸೇರಿದಂತೆ ಕರ್ನಾಟಕದಲ್ಲಿ ಅಕ್ಟೋಬರ್‌ 2 ನೇ ವಾರದಲ್ಲಿ ಹಿಂಗಾರು ಸಹಿತ ಮಳೆ ಪ್ರವೇಶಿಸುವ ಸಾಧ್ಯತೆಯಿದೆ.

Yellow Alert Karnataka : There has been a slight decrease in rainfall in the state since the last two days

Comments are closed.