Honnali Chandrashekar Death : ಹೊನ್ನಾಳಿ : ಚಂದ್ರಶೇಖರ್ ಸಾವು, ಕೊಲೆ ಪ್ರಕರಣ ದಾಖಲು

ದಾವಣಗೆರೆ : ಹೊನ್ನಾಳಿ ( Honnali) ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ (MLA MP Renukacharya) ಅವರ ಸಹೋದರನ ಮಗ ಚಂದ್ರಶೇಖರ್ (Honnali Chandrashekar Death) ಸಾವಿನ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಚಂದ್ರಶೇಖರ್ ಅವರ ತಂದೆ ರಮೇಶ್ ಅವರು ಹೊನ್ನಾಳಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಂದ್ರಶೇಖರ್ ಅವರನ್ನು ಕೊಲೆ ಮಾಡಲಾಗಿದೆ. ಕೈಕಾಲುಗಳನ್ನು ಕಟ್ಟಿಹಾಕಲಾಗಿದ್ದು, ಕಿವಿಗಳಿಗೆ ಹಲ್ಲೆ ನಡೆಸಲಾಗಿದೆ. ತಲೆಗೆ ಆಯುಧದಿಂದ ಹೊಡೆದ ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಭಾನುವಾರ ಚಂದ್ರಶೇಖರ್ ಗೌರಿಗೆದ್ದೆಗೆ ತೆರಳುತ್ತಿರುವುದಾಗಿ ಹೇಳಿ ಮನೆಯಿಂದ ಹೊರಟು ಹೋಗಿದ್ದರು. ಆದರೆ ಹೀಗೆ ಹೋದವರು ಮರಳಿ ಬಾರದ ಹಿನ್ನೆಲೆಯಲ್ಲಿ ಶಾಸಕ ರೇಣುಕಾಚಾರ್ಯ ಅವರಿಗೆ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಶೋಧಕಾರ್ಯವನ್ನು ನಡೆಸಿದಾಗ ಗುರುವಾರ ಚಂದ್ರಶೇಖರ್ ಅವರ ಮೃತದೇಹ ಹಾಗೂ ಕಾರು ತುಂಗಾ ಕಾಲುವೆಯಲ್ಲಿ ಪತ್ತೆಯಾಗಿತ್ತು. ಕಾರಿನ ಹಿಂಭಾಗದ ಸೀಟ್ ನಲ್ಲಿ ಚಂದ್ರಶೇಖರ್ ಅವರ ಶವ ಪತ್ತೆಯಾಗಿದ್ದು, ಕೊಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಹೊನ್ನಾಳಿ ಠಾಣೆಯ ಪೊಲೀಸರು ಐಪಿಸಿ ಸೆಕ್ಷನ್ 302, 201, 427 ರ ಅಡಿಯಲ್ಲಿ ಕೊಲೆ, ಸಾಕ್ಷ್ಯನಾಶ ಹಾಗೂ ವಾಹನ ಜಖಂ ಮಾಡಿರುವ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಕುಟುಂಬಸ್ಥರು ಇದೊಂದು ಕೊಲೆ ಎಂದು ಗಂಭೀರ ಆರೋಪ ಮಾಡುತ್ತಿದ್ದಾರೆ. ಕೊಲೆ ಮಾಡಿ ನಂತರದ ಅದನ್ನು ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದಾರೆ. ಮೃತದೇಹವನ್ನು ಕಾರಿನ ಸಮೇತ ಕಾಲುವೆಗೆ ದೂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಶಾಸಕ ರೇಣುಕಾಚಾರ್ಯ ಅವರು ಕೂಡ ಇದೊಂದು ಕೊಲೆ ಎಂದು ಆರೋಪಿಸಿದ್ದರು.

9 ತಿಂಗಳ ಪರಿಚಿತನಾಗಿದ್ದ ಕಿರಣ್ ಯಾರು ?

ಇನ್ನು ಚಂದ್ರಶೇಖರ್ ಗೌರಿಗದ್ದೆಗೆ ತೆರಳುವ ಸಂದರ್ಶದಲ್ಲಿ ತನ್ನ ಜೊತೆಯಲ್ಲ ಸ್ನೇಹಿತ ಕಿರಣ್ ಎಂಬಾತನನ್ನು ಕರೆದುಕೊಂಡು ಹೋಗಿದ್ದಾನೆ. ಈ ಕಿರಣ್ ಕಳೆದ ಒಂಬತ್ತು ತಿಂಗಳ ಹಿಂದೆಯಷ್ಟೇ ಚಂದ್ರಶೇಖರ್ ಗೆ ಪರಿಚಿತನಾಗಿದ್ದ. ಶಿವಮೊಗ್ಗ ಕೋರ್ಟ್ ನಲ್ಲಿ ಡಿ ದರ್ಜೆಯ ನೌಕರನಾಗಿರುವ ಕಿರಣ್ ನನ್ನು ಗೌರಿಗದ್ದೆಗೆ ಹೋಗುವ ಸಂದರ್ಭದಲ್ಲಿ ಚಂದ್ರಶೇಖರ್ ಕರೆದುಕೊಂಡು ಹೋಗುತ್ತಿದ್ದ. ಅಂತೆಯೇ ಮೊನ್ನೆಯೂ ಕೂಡ ಕಿರಣ್ ನನ್ನು ಕರೆದುಕೊಂಡು ಗೌರಿಗದ್ದೆಗೆ ತೆರಳಿ ಶಿವಮೊಗ್ಗಕ್ಕೆ ವಾಪಾಸಾಗಿದ್ದರು. ಶಿವಮೊಗ್ಗದಲ್ಲಿ ಕಿರಣ್ ನನ್ನು ಡ್ರಾಫ್ ಮಾಡಿ ಚಂದ್ರಶೇಖರ್ ಹೊನ್ನಾಳಿ ಕಡೆಗೆ ಪ್ರಯಾಣ ಬೆಳೆಸಿದ್ದ. ಜೊತೆಗೆ ನ್ಯಾಮತಿ ಸಮೀಪದ ಸುರವನ್ನೇ ಪ್ರದೇಶದಲ್ಲಿ ಕಾರ್ ಪಾಸ್ ಆಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ಅಕ್ಟೋಬರ್ 31 ರಂದು ಬೆಳಗ್ಗೆ 6.15ಕ್ಕೆ ಚಂದ್ರಶೇಖರ್ ಮೊಬೈಲ್ ಸ್ವಿಚ್ ಆಫ್ ಆಗಿತು.

ಕುಟುಂಬಸ್ಥರ ದೂರಿನ ಆಧಾರದಲ್ಲಿ ತನಿಖೆ : ಸಿಎಂ ಬೊಮ್ಮಾಯಿ

ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕುಟುಂಬಸ್ಥರು ನೀಡುವ ದೂರಿನ ಆಧಾರದಲ್ಲಿ ತನಿಖೆಯನ್ನು ನಡೆಸುತ್ತೇವೆ ಎಂದು ಹೇಳಿದ್ದರು. ಜೊತೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೂಡ ಎಲ್ಲಾ ರೀತಿಯಲ್ಲಿ ತನಿಖೆಯನ್ನು ನಡೆಸುತ್ತೇವೆ. ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕೊಲೆ ಪ್ರಕರಣದ ತನಿಖೆ ನಡೆಸುವಂತೆ ಸೂಚನೆಯನ್ನು ನೀಡಿದ್ದೇವೆ ಎಂದು ತಿಳಿಸಿದ್ದರು. ಇದೀಗ ಕುಟುಂಬಸ್ಥರು ಕೊಲೆ ಪ್ರಕರಣ ದಾಖಲು ಮಾಡಿದ್ದಾರೆ. ಆದರೆ ಪೊಲೀಸರು ಎಲ್ಲಾ ಆಯಾಮಗಳಿಂದಲೂ ತನಿಖೆಯನ್ನು ಆರಂಭಿಸಿದ್ದಾರೆ.

ಇದನ್ನೂ ಓದಿ : Chandrashekhar Death Big twist : ಚಂದ್ರಶೇಖರ ಸಾವಿನ ಸುತ್ತ ಹಲವು ಅನುಮಾನ : ಸ್ಥಳಕ್ಕೆ ಎಸ್ಪಿ, ವಿಧಿವಿಜ್ಞಾನ ತಂಡ ಭೇಟಿ

ಇದನ್ನೂ ಓದಿ : Bengaluru Rains : ಕರ್ನಾಟಕದಲ್ಲಿ ಮುಂದುವರಿದ ಮಳೆ : ಕರಾವಳಿ, ಮಲೆನಾಡಲ್ಲಿ ಯೆಲ್ಲೋ ಅಲರ್ಟ್

BJP MLA MP Renukacharya Brother son Chandrashekar Death Case FIR registered in Honnali Police station Kannada news

Comments are closed.