UGC NET 2022 Result : ಯುಜಿಸಿ ನೀಟ್ ಪರೀಕ್ಷೆ ನವೆಂಬರ್ 5ಕ್ಕೆ ಫಲಿತಾಂಶ ಘೋಷಣೆ

ನವದೆಹಲಿ : ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) UGC, NET ರ (UGC NET 2022 Result)ಫಲಿತಾಂಶವನ್ನು ನವೆಂಬರ್‌ 5, 2022 ಶನಿವಾರದಂದು ಪ್ರಕಟವಾಗಲಿದೆ. ಅಭ್ಯರ್ಥಿಗಳಿಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆಗಳನ್ನು ಈಗಾಗಲೇ ನಾಲ್ಕು ಹಂತದಲ್ಲಿ ನಡೆಸಲಾಗಿತ್ತು. ರಾಷ್ಟ್ರೀಯ ಅರ್ಹತಾ ಪರೀಕ್ಷೆಯ ಫಲಿತಾಂಶಗಳು ಬಿಡುಗಡೆ ಆದಾಗ ಅಭ್ಯರ್ಥಿಗಳು NTA ಯ ಅಧಿಕೃತ ಸೈಟ್ ಆದ nta.ac.in ನಲ್ಲಿ ಮತ್ತು ugcnet.nta.nic.in ನಲ್ಲಿ ಮೂಲಕ ಪರಿಶೀಲಿಸಬಹುದಾಗಿದೆ.

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಅಧ್ಯಕ್ಷ ಎಂ ಜಗದೀಶ್ ಕುಮಾರ್ ಶುಕ್ರವಾರ ತಮ್ಮ ಟ್ವಿಟರ್‌ನಲ್ಲಿ ಇದರ ಬಗ್ಗೆ ಮಾಹಿತಿ ನೀಡಿದ್ದಾರೆ. “UGC-NET ಫಲಿತಾಂಶಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನವೆಂಬರ್ 5 ರಂದು (ಶನಿವಾರ) ಪ್ರಕಟಿಸಲಿದೆ. ಫಲಿತಾಂಶಗಳು ಎನ್‌ಟಿಎ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

UGC-NET ಫಲಿತಾಂಶಗಳನ್ನು ಪರಿಶೀಲಿಸುವ ವಿಧಾನ :
ಅಭ್ಯರ್ಥಿಗಳು ತಮ್ಮ NTA ಫಲಿತಾಂಶಗಳನ್ನು ಪರಿಶೀಸಬಹುದಾಗಿದೆ. ಅಭ್ಯರ್ಥಿಗಳು ಮೊದಲು NTA ugcnet.nta.nic.in ನ ಅಧಿಕೃತ ವೆಬ್‌ಸೈಟ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಕೆಳಗೆ ತಿಳಿಸಿರುವ ಕ್ರಮಗಳನ್ನು ಅನುಸರಿಸಬೇಕಾಗಿದೆ.

  • NTA ಯ ಅಧಿಕೃತ ವೆಬ್‌ಸೈಟ್‌ಗೆ ಲಾಗ್‌ ಇನ್ ಆಗಬೇಕು.
  • ಮುಖಪುಟದಲ್ಲಿ, ಫಲಿತಾಂಶ ಮತ್ತು ಅಂತಿಮ ಉತ್ತರ ಕೀ’ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
    ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಪಾಸ್‌ವರ್ಡ್‌ನ್ನು ನಮೂದಿಸುವ ಮೂಲಕ ಲಾಗ್ ಇನ್ ಮಾಡಬೇಕಾಗುತ್ತದೆ. ಅಭ್ಯರ್ಥಿಗಳು ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಲಾಗ್ ಇನ್ ಮಾಡಬಹುದಾಗಿದೆ.
    ಅಭ್ಯರ್ಥಿಗಳು ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿದ ನಂತರ ‘ಎಂಟರ್’ ಕ್ಲಿಕ್ ಮಾಡಬೇಕು. ಅಭ್ಯರ್ಥಿಗಳು ಫಲಿತಾಂಶವನ್ನು ಪರಿಶೀಲಿಸಿದ ನಂತರ ಭವಿಷ್ಯದ ಉಲ್ಲೇಖಕ್ಕಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಡಿಸೆಂಬರ್ 2021 ಮತ್ತು ಜೂನ್ 2022 ರ ನಾಲ್ಕು ಹಂತಗಳಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗದ ರಾಷ್ಟ್ರೀಯ ಮಟ್ಟದ ಅರ್ಹತಾ ಪರೀಕ್ಷೆಯಾದ UGC NET 2022 ಪರೀಕ್ಷೆಗಳನ್ನು NTA ನಡೆಸಲಾಗಿತ್ತು. ಈ ಪರೀಕ್ಷೆಗಳು ಜುಲೈ 2022ರಿಂದ ಅಕ್ಟೋಬರ್ 2022 ಈ ನಡುವಿನ ತಿಂಗಳುಗಳಲ್ಲಿ ನಡೆಯಲ್ಪಟ್ಟಿರುತ್ತದೆ.

ಒಂದನೇ ಹಂತದ ಪರೀಕ್ಷೆಗಳನ್ನು 1 ಜುಲೈ 9 ರಿಂದ 12, 2022 ರವರೆಗೆ ನಡೆಸಲಾಗಿತ್ತು. ಎರಡನೇ ಹಂತದ ಪರೀಕ್ಷೆಗಳನ್ನು ಸೆಪ್ಟೆಂಬರ್ 20 ರಿಂದ 22, 2022 ರವರೆಗೆ ನಡೆಸಲಾಗಿತ್ತು. ಮೂರನೇ ಹಂತದ ಪರೀಕ್ಷೆಗಳನ್ನು ಸೆಪ್ಟೆಂಬರ್ 23, 2022 ರಿಂದ ಅಕ್ಟೋಬರ್ 1, 2022 ರವರೆಗೆ ನಡೆಸಲಾಯಿತು ಮತ್ತು ನಾಲ್ಕನೇ ಹಂತದ ಪರೀಕ್ಷೆಗಳನ್ನು ಅಕ್ಟೋಬರ್ 8, 10, 11, 12, 13 ಮತ್ತು 14 ರವರೆಗೆ ನಡೆಸಲಾಯಿತು.

ಇದನ್ನೂ ಓದಿ : SSLC Exam Revised Demand: ಎಸ್ಎಸ್ಎಲ್‌ ಸಿ ಪರೀಕ್ಷೆ ವೇಳಾಪಟ್ಟಿ ಮರು ಪರಿಷ್ಕರಿಸಿ : ಪ್ರೌಢಶಾಲಾ ಶಿಕ್ಷಕರ ಬೇಡಿಕೆ

ಇದನ್ನೂ ಓದಿ : Meditation: ಪ್ರತಿದಿನ ವಿದ್ಯಾರ್ಥಿಗಳಿಂದ ಕಡ್ಡಾಯವಾಗಿ 10 ನಿಮಿಷ ಧ್ಯಾನ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳಿ: ಸಚಿವ ಬಿ.ಸಿ.ನಾಗೇಶ್

ಇದನ್ನೂ ಓದಿ : Summer Holiday Reduced : ಕರ್ನಾಟಕದಲ್ಲಿ ಶಾಲೆಗಳಿಗೆ ಈ ಬಾರಿಯೂ ಬೇಸಿಗೆ ರಜೆ ಕಡಿತ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಶುಕ್ರವಾರ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು ಬಿಡುಗಡೆ ಮಾಡುತ್ತದೆ. ಹಾಗಾಗಿ ಅಭ್ಯರ್ಥಿಗಳು ಈ ಉತ್ತರ ಕೀಗಳನ್ನು ಪ್ರವೇಶಿಸಬಹುದಾಗಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ಆದ nta.ac.in ನಲ್ಲಿ ಮತ್ತು ugcnet.nta.nic.in ಮುಖಪುಟದಲ್ಲಿ ಲಭ್ಯವಿರುವ ಲಿಂಕ್‌ಗಳಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

UGC NET 2022 Result UGC NEET Result Declaration on 5th November

Comments are closed.