Hindu Harsha : ಹರ್ಷ ತಾಯಿಗೆ ಬಿಜೆಪಿ ಕೊಟ್ಟರೇ ಕಾಂಗ್ರೆಸ್ ಅಭ್ಯರ್ಥಿಯನ್ನೇ ಕಣಕ್ಕಿಳಿಸಲ್ಲ: ಬಿ.ಕೆ.ಹರಿಪ್ರಸಾದ್ ಸ್ಪೋಟಕ ಹೇಳಿಕೆ

ಶಿವಮೊಗ್ಗದಲ್ಲಿ ನಡೆದ ಹಿಂದೂಪರ ಕಾರ್ಯಕರ್ತ ಹರ್ಷ (Hindu Harsha) ಕೊಲೆ ಪ್ರಕರಣ ಈಗ ಬಿಜೆಪಿಯ ಹಿರಿಯ ಸಚಿವ ಈಶ್ವರಪ್ಪ ಅಸ್ತಿತ್ವವನ್ನೇ ಅಲುಗಾಡಿಸುವ ಮುನ್ಸೂಚನೆ ನೀಡುತ್ತಿದೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಈಶ್ವರಪ್ಪನವರು ಪ್ರತಿನಿಧಿಸುವ ಕ್ಷೇತ್ರವನ್ನು ಹರ್ಷ ಕುಟುಂಬಕ್ಕೆ ಬಿಟ್ಟು ಕೊಡಲಿ ಎಂಬ ಆಗ್ರಹ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಈ ಉರಿಯುವ ಬೆಂಕಿಗೆ ಕಾಂಗ್ರೆಸ್ ಪರಿಷತ್ ನಾಯಕ ಬಿ.ಕೆ.ಹರಿಪ್ರಸಾದ್ ತುಪ್ಪ ಸುರಿದಿದ್ದಾರೆ.

ಹಿಂದೂತ್ವಕ್ಕೆ ಮಾತ್ರ ಜನಸಾಮಾನ್ಯರು ಬೇಕಾ ? ಅಧಿಕಾರ ಅನುಭವಿಸಲು ಮಾತ್ರ ರಾಜಕಾರಣಿಗಳ ಮಕ್ಕಳು ಬೇಕಾ? ಹರ್ಷ (Hindu Harsha) ಸಾವಿಗೆ ನಿಜವಾದ ಗೌರವ ಸಲ್ಲಿಕೆಯಾಗಬೇಕೆಂದರೇ ಈ ಭಾರಿಯ ವಿಧಾನಸಭಾ ಚುನಾವಣೆಯಲ್ಲಿ ಈಶ್ವರಪ್ಪ, ಬಿಎಸ್ವೈ ಮಗನಿಗೆ ಟಿಕೇಟ್ ನೀಡೋದು ಬೇಡ. ಬದಲಾಗಿ ಹರ್ಷ ತಾಯಿಗೆ ಅಥವಾ ಅವರ ಕುಟುಂಬಸ್ಥರಿಗೆ ಸಿಗಲಿ ಎಂಬ ಅಭಿಯಾನವೊಂದು ಸೋಷಿಯಲ್ ಮೀಡಿಯಾದಲ್ಲಿ ಧ್ವನಿ ಪಡೆದುಕೊಂಡಿತ್ತು.

ಹರ್ಷ ಪೋಟೋ ಜೊತೆ ಸಿದ್ಧವಾದ ಈ ಪೋಸ್ಟ್ ನಲ್ಲಿ ಈಶ್ವರಪ್ಪನವರು, ಬಿಎಸ್ವೈ ಮಕ್ಕಳೇ ಅಧಿಕಾರ ಅನುಭವಿಸಿದ್ದು ಸಾಕು. ಇನ್ನಾದರೂ ನಿಷ್ಟಾವಂತ ಜನರಿಗೂ ಸಿಗಲಿ ಅಧಿಕಾರ. ಹೀಗಾಗಿ ಹರ್ಷ (Hindu Harsha) ತಾಯಿಗೆ ಬಿಜೆಪಿ ಟಿಕೇಟ್ ಸಿಗಬೇಕೆಂಬ ಆಗ್ರಹ ವ್ಯಕ್ತವಾಗಿತ್ತು. ಇದರಿಂದ ತಮ್ಮ ಸ್ಥಾನಕ್ಕೆ ಪುತ್ರನನ್ನು ಅಧಿಕಾರಕ್ಕೆ ತರಲು ಅದಾಗಲೇ ಸಿದ್ಧತೆ ನಡೆಸಿದ್ದ ಸಚಿವ ಈಶ್ವರಪ್ಪನವರಿಗೆ ಶಾಕ್ ಎದುರಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಿಯಮಾವಳಿಯಂತೆ ಈಶ್ವರಪ್ಪ ಸ್ಪರ್ಧಿಸುವಂತಿಲ್ಲ. ಹೀಗಾಗಿ ಪುತ್ರ ಕಾಂತೇಶ್ ನನ್ನು ಅಧಿಕಾರಕ್ಕೆ ತರಲು ಈಶ್ವರಪ್ಪ ಸಿದ್ಧವಾಗಿದ್ದರು.

ಆದರೆ ಈಗ ಈಶ್ವರಪ್ಪ ಸ್ಪರ್ಧಿಸುವ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ಹರ್ಷನ ತಾಯಿಗೆ ಬಿಟ್ಟುಕೊಡಲಿ ಎಂಬ ಆಗ್ರಹ ವ್ಯಕ್ತವಾಗುತ್ತಿದೆ. ಈ ಆಗ್ರಹಕ್ಕೆ ಕಾಂಗ್ರೆಸ್ ವಿಧಾನಪರಿಷತ್ ನಾಯಕ ಬಿ.ಕೆ.ಹರಿ ಪ್ರಸಾದ್ ಇನ್ನಷ್ಟು ತುಪ್ಪ ಸುರಿದಿದ್ದು ಒಂದೊಮ್ಮೆ ಬಿಜೆಪಿ ಹರ್ಷ (Hindu Harsha) ತಾಯಿಗೆ ಟಿಕೇಟ್ ಕೊಟ್ಟರೇ ಕಾಂಗ್ರೆಸ್ ಕ್ಯಾಂಡಿಡೇಟ್ ಹಾಕೋದೇ ಇಲ್ಲ ಎಂದು ಭರವಸೆ ನೀಡಿದ್ದಾರೆ. ಬಿಜೆಪಿ ಹರ್ಷನ ತಾಯಿಗೆ ಅಥವಾ ಅಕ್ಕನಿಗೆ ಟಿಕೇಟ್ ನೀಡಲಿ. ಆ ಮೂಲಕ ಹರ್ಷನಿಗೆ ನೈಜ ಶೃದ್ಧಾಂಜಲಿ ಸಲ್ಲಿಸಲಿ. ಹಾಗೊಂದೊಮ್ಮೆ ಬಿಜೆಪಿ ಟಿಕೇಟ್ ನೀಡಿದರೇ ನಾವು ಅಭ್ಯರ್ಥಿ ಗಳನ್ನೇ ಕಣಕ್ಕಿಳಿಸದೇ ಬೆಂಬಲಿಸುತ್ತೇವೆ ಎನ್ನುವ ಮೂಲಕ ಬಿಜೆಪಿಗೆ ಸವಾಲೆಸೆದಿದ್ದಾರೆ‌

ಹಿಂದುತ್ವದ ಹೆಸರಿನಲ್ಲಿ ಚಟ್ಟಕ್ಕೇರಲು ಅಮಾಯಕರ ಬಡವರ ಮನೆಯ ಮಕ್ಕಳು ಬೇಕು. ಅಧಿಕಾರ ಅನುಭವಿಸಲು ಮಾತ್ರ ಬಿಜೆಪಿ ನಾಯಕರ ಮಕ್ಕಳು ಬೇಕಾ ? ಬಿಜೆಪಿಗೆ ನಿಜವಾಗಿಯೂ ಕಾರ್ಯಕರ್ತರ ಬಗ್ಗೆ ಗೌರವವಿದ್ದರೇ ಹರ್ಷನ ತಾಯಿಗೆ ಟಿಕೇಟ್ ನೀಡಲಿ ಎಂದು ಬಿ.ಕೆ.ಹರಿಪ್ರಸಾದ್ ಎಂದು ಸವಾಲು ಹಾಕಿದ್ದಾರೆ. ಬಿ.ಕೆ.ಹರಿಪ್ರಸಾದ್ ಹೇಳಿಕೆಯಿಂದ ಹರ್ಷನ ತಾಯಿಗೆ ಟಿಕೇಟ್ ಅಭಿಯಾನಕ್ಕೆ ಮತ್ತಷ್ಟು ಬಲಬಂದಿದ್ದು ಈ ಅಭಿಯಾನ ಎಲ್ಲಿಗೆ ತಲುಪುತ್ತೆ ಕಾದುನೋಡಬೇಕಿದೆ.

‌ಇದನ್ನೂ ಓದಿ : ಮೃತ ಹರ್ಷ ತಾಯಿಗೆ ಬಿಜೆಪಿ ಟಿಕೇಟ್ : ಈಶ್ವರಪ್ಪ, ಯಡಿಯೂರಪ್ಪ ಎದೆಯಲ್ಲಿ ನಡುಕ

ಇದನ್ನೂ ಓದಿ : ಸದ್ಯದಲ್ಲೇ ನಿಷೇಧವಾಗುತ್ತಾ ಪಿಎಫ್ಐ : ಸಿಎಂ ಬೊಮ್ಮಾಯಿ ಕೊಟ್ರು ಸುಳಿವು

(BJP MLA Ticket giving Hindu Harsha mother, congress candidate not contesting Election)

Comments are closed.