BJP Offer : ಬ್ಯಾಲೆಟ್ ಪೇಪರ್ ನಲ್ಲಿ ಮತ ಹಾಕಿ ನಿಮ್ಮ ಅಭ್ಯರ್ಥಿ ಆಯ್ಕೆ ಮಾಡಿ : ಬಿಜೆಪಿ ಹೊಸ ಆಫರ್

ಬೆಂಗಳೂರು : (BJP Offer) ರಾಜ್ಯದಲ್ಲಿ ಚುನಾವಣೆ ರಂಗೇರಿದೆ. ಈ ಮಧ್ಯೆ ಅಧಿಕಾರದ ಚುಕ್ಕಾಣಿ ಹಿಡಿಯೋ ಕನಸಿನಲ್ಲಿ ಮತದಾರರ ಆಶೀರ್ವಾದ ಪಡೆಯಲು ಸಿದ್ಧವಾಗ್ತಿರೋ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಪಾರದರ್ಶಕ ವ್ಯವಸ್ಥೆಯೊಂದನ್ನು ಆಯ್ಕೆ ಮಾಡಿಕೊಂಡಿದೆ. ಹೌದು ಬಿಜೆಪಿ ತನ್ನ ಅಭ್ಯರ್ಥಿಗಳ ಆಯ್ಕೆಗೆ ಬ್ಯಾಲೇಟ್ ಪೇಪರ್ ನಲ್ಲಿ ವೋಟ್ ಮಾಡುವ ಅವಕಾಶ ಕಲ್ಪಿಸಿದೆ. ಹೌದು ಕುಟುಂಬ ರಾಜಕಾರಣ, ಸಂಬಂಧಿಗಳಿಗೆ ಟಿಕೇಟ್ ನೀಡೋದು ಸೇರಿದಂತೆ ಹಳೆಯ ಸಂಪ್ರದಾಯಗಳಿಗೆ ತಿಲಾಂಜಲಿ ನೀಡಲು ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಕಾರ್ಯಕರ್ತರಿಗೆ ಅವಕಾಶ ನೀಡಿದೆ.

ವಿಧಾನಸಭಾ ಕ್ಷೇತ್ರದ ಪಕ್ಷದ ಮುಖಂಡರಿಗೆ, ಗ್ರಾಮ ಪಂಚಾಯತಿ ಅಧ್ಯಕ್ಷ, ಮಾಜಿ ಅಧ್ಯಕ್ಷ,ಜಿಲ್ಲಾ ಪಂಚಾಯತಿ ಸದಸ್ಯ, ಮಾಜಿ ಜಿಲ್ಲಾ ಸದಸ್ಯ,ಕಾರ್ಪೋರೇಟರ್, ಮಾಜಿ ಕಾರ್ಪೊರೇಟರ್,ಪಟ್ಟಣ ಪಂಚಾಯತಿ ಅಧ್ಯಕ್ಷ, ಮಾಜಿ ಅಧ್ಯಕ್ಷ,ಶಾಸಕ, ಮಾಜಿ ಶಾಸಕ, ಸಂಸದ ಮಾಜಿ ಸಂಸದ ಕ್ಷೇತ್ರದ ಪದಾಧಿಕಾರಿಗಳಿಗೆ ವೋಟ್ ಮಾಡಲು ಬಿಜೆಪಿ ಅವಕಾಶ ನೀಡಿದೆ. ಬ್ಯಾಲೇಟ್ ಪೇಪರ್ ನಲ್ಲಿ ತಮ್ಮ ಇಷ್ಟದ ಅಭ್ಯರ್ಥಿಗೆ ಮತ ಹಾಕಿ, ಅದನ್ನು ಒಂದು ಬಾಕ್ಸ್ ಗೆ ಹಾಕಬೇಕು.ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಮತ ಬಾಕ್ಸ್.ಬೆಳಿಗ್ಗೆ 9ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ.

ಒಂದೊಂದು ಕ್ಷೇತ್ರಕ್ಕೆ ಇಂತಿಷ್ಟು ಗಂಟೆ ಎಂದು ಸಮಯ ನಿಗಧಿಪಡಿಸಲಾಗಿದೆ. ಆ ಸಮಯದಲ್ಲಿ ಆ ಕ್ಷೇತ್ರಕ್ಕೆ ಸಂಬಂಧಿಸಿದ ಮುಖಂಡರು ಹೋಗಿ ಮತ ಹಾಕಬೇಕು.ತಮ್ಮ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕೆಂದು ಮತ ಹಾಕಬೇಕು . ಮತದಾನ ಪ್ರಕ್ರಿಯೆಯನ್ನು ಕೋರ್ ಕಮಿಟಿ ಸದಸ್ಯರ ನೇತೃತ್ವದ ಟೀಮ್ ನಡೆಸಲಿದೆ. ಶುಕ್ರವಾರ ಬೆಳಿಗ್ಗೆಯಿಂದ ಸಂಜೆ ವರೆಗೂ ಎಲ್ಲಾ ಜಿಲ್ಲೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಮತದಾನದ ಬಾಕ್ಸ್ ಶುಕ್ರವಾರ ರಾತ್ರಿಯೇ ಬೆಂಗಳೂರಿಗೆ ತಲುಪಲಿದೆ. ನಂತರ ಅದೇ ಕಮಿಟಿ ಸದಸ್ಯರು ಬಾಕ್ಸ್ ಓಪನ್ ಮಾಡಿ, ಯಾರಿಗೆ ಮತ ಹಾಕಿದ್ದಾರೆಂದಯ ಲೆಕ್ಕ ಹಾಕಿ ವಿಜೇತರ ಹೆಸರನ್ನು ರಾಜ್ಯ ಕೋರ್ ಕಮಿಟಿ ಗೆ ಶಿಫಾರಸು ಮಾಡಲಿದ್ದಾರೆ.

ಇದನ್ನೂ ಓದಿ : Nitin Gadkari : ರಾಜಕೀಯದಿಂದ ನಿತಿನ್ ಗಡ್ಕರಿ ನಿವೃತ್ತಿ ?

ಕೋರ್ ಕಮಿಟಿ ಸಭೆಯಲ್ಲಿ ಈ ಹೆಸರುಗಳು ಶಾರ್ಟ್ ಲಿಸ್ಟ್ ಆಗಲಿದ್ದು, ಬಳಿಕ ಕೇಂದ್ರಕ್ಕೆ ರವಾನೆಯಾಗಲಿದೆ. ಇದರ ಜೊತೆ ಏಪ್ರಿಲ್ 1 ಮತ್ತು 2 ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ಕೂಡ ನಡೆಯಲಿದ್ದು, ಒಟ್ಟಿನಲ್ಲಿ ಅಭ್ಯರ್ಥಿಗಳ ಪಾರದರ್ಶಕ ಆಯ್ಕೆಗೆ ಬಿಜೆಪಿ ಸರ್ಕಸ್ ನಡೆಸುತ್ತಿದೆ.

BJP Offer: Vote on the ballot paper and choose your candidate: BJP New Offer

Comments are closed.