Cucumber Cold Soup: ಎಂದಾದರೂ ಸೌತೆಕಾಯಿ ಕೋಲ್ಡ್‌ ಸೂಪ್‌ ಟ್ರೈ ಮಾಡಿದ್ದೀರಾ; ಇದು ಬೇಸಿಗೆಗೆ ಬೆಸ್ಟ್‌

ಬೇಸಿಗೆ (Summer) ಪ್ರಾರಂಭವಾಗಿದೆ. ಹಾಗೆಯೇ ತಂಪು ಪಾನೀಯ, ಮೊಸರು, ಮಜ್ಜಿಗೆ ಹೀಗೆ ದೇಹವನ್ನು ತಂಪಾಗಿರಿಸುವ ಆಹಾರಗಳ ಮೊರೆ ಹೋಗುತ್ತಿದ್ದೇವೆ. ಹೆಚ್ಚಾಗಿ ಚಳಿಗಾಲದಲ್ಲಿ ಸೂಪ್‌ (Soup) ಕುಡಿಯುತ್ತಾರೆ. ಆದರೆ ಕೆಲವು ಸೂಪ್‌ಗಳು ಬೇಸಿಗೆಯಲ್ಲಿ ಬಹಳ ಉತ್ತಮವಾಗಿರುತ್ತದೆ. ಸವತೆಕಾಯಿಯ ಕೋಲ್ಡ್‌ ಸೂಪ್ (Cucumber Cold Soup) ನಲ್ಲಿ ಬೇಯಿಸಿದ ಕಡಲೆಯನ್ನು ಬಳಸಲಾಗುತ್ತದೆ. ಇದು ಕೆನೆಯಂತಹ ಟೆಕ್ಸ್ಚರ್‌ ನೀಡುತ್ತದೆ. ಈ ಸೂಪ್‌ ಪ್ರೋಟೀನ್‌ನಿಂದ ಸಮೃದ್ಧವಾಗಿದ್ದು, ಜೊತೆಗೆ ಸವತೆಕಾಯಿಯು ಜೀವಸತ್ವಗಳನ್ನು ದೇಹಕ್ಕೆ ಒದಗಿಸುತ್ತದೆ. ಇದು ತೂಕ ಕಳೆದುಕೊಳ್ಳುವವರಿಗೂ ಉತ್ತಮವಾಗಿದೆ. ಮಧುಮೇಹದಿಂದ ಬಳಲುತ್ತಿರುವವರಿಗೂ ಇದು ಉತ್ತಮವಾಗಿದೆ.

ಸವತೆಕಾಯಿ ಕೋಲ್ಡ್‌ ಸೂಪ್‌ ತಯಾರಿಸುವುದು ಹೇಗೆ?

  • ಮೊದಲಿಗೆ ಸ್ವಲ್ಪ ಚನ್ನಾ ಕಡಲೆಯನ್ನು ಚೆನ್ನಾಗಿ ತೊಳೆದು ರಾತ್ರಿಯಿಡೀ ನೀರಿನಲ್ಲಿ ನೆನೆಸಿ.
  • ನೀರನ್ನು ಶೋಧಿಸಿಕೊಳ್ಳಿ. ಕುಕ್ಕರ್‌ನಲ್ಲಿ ಹಾಕಿ 3–4 ಸೀಟಿ ಹಾಕಿಸಿ.
  • ಸವತೆಕಾಯಿಯನ್ನು ತೊಳೆದು, ಚಿಕ್ಕದಾಗಿ ಕತ್ತರಿಸಿ.
  • ಮಿಕ್ಸರ್‌ ಜಾರ್‌ ತೆಗೆದುಕೊಂಡು ಅದಕ್ಕೆ, ಬೇಯಿಸಿದ ಚನ್ನಾ ಕಡಲೆ, ಸವತೆಕಾಯಿ, ಸ್ವಲ್ಪ ಮೊಸರು, ಕರಿಮೆಣಸಿನ ಪುಡಿ, ಉಪ್ಪು, ಕೊತ್ತಂಬರಿ ಸೊಪ್ಪು, ಬೇಕಿದ್ದರೆ ಸ್ವಲ್ಪ ಹಸಿರು ಮೆಣಸಿನಕಾಯಿ ಸೇರಿಸಿ. ದಪ್ಪ ಕೆನೆಯ ಸೂಪ್‌ ಆಗುವವರೆಗೆ ಮಿಶ್ರಣವನ್ನು ಗ್ರೈಂಡ್‌ ಮಾಡಿ.
  • ಬೆಳ್ಳುಳ್ಳಿಯ ಒಗ್ಗರಣೆ ಮಾಡಿಕೊಳ್ಳಿ. ಸವತೆಕಾಯಿ ಕೋಲ್ಡ್‌ ಸೂಪ್‌ ಮೇಲೆ ಹಾಕಿ. ಚೆನ್ನಾಗಿ ಮಿಕ್ಸ್‌ಮಾಡಿ.
  • ನಿಮ್ಮಿಷ್ಟದಂತೆ ಅಲಂಕರಿಸಿ ಸೂಪ್‌ ಸವಿಯಿರಿ.

ಇದನ್ನೂ ಓದಿ : Summer health Superfoods : ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಇಲ್ಲಿವೆ 10 ಸೂಪರ್‌ಫುಡ್‌ಗಳು

ಸವತೆಕಾಯಿಯ ಪ್ರಯೋಜನಗಳು :

  • ಸವತೆಕಾಯಿ ಕಡಿಮೆ ಕ್ಯಾಲೋರಿ ಹೊಂದಿದೆ. ಆದರೆ ಇದು ವಿಟಮಿನ್‌ ಮತ್ತು ಮಿನರಲ್‌ಗಳಿಂದ ಸಮೃದ್ಧವಾಗಿದೆ.
  • ಹೆಚ್ಚಿನ ಪ್ರಮಾಣದ ಆಂಟಿಒಕ್ಸಿಡೆಂಟ್‌ನಿಂದ ಕೂಡಿದೆ.
  • ಹೆಚ್ಚಿನ ಪ್ರಮಾಣದ ನೀರಿನಂಶ ಹೊಂದಿರುವುದರಿಂದ ದೇಹವನ್ನು ಹೈಡ್ರೈಟ್‌ ಆಗಿರಿಸುತ್ತದೆ.
  • ತೂಕ ನಷ್ಟಕ್ಕೆ ಪೂರಕವಾಗಿದೆ.
  • ಡಯಟ್‌ಗೆ ಪೂರಕವಾಗಿದೆ.
  • ಬ್ಲಡ್‌–ಶುಗರ್‌ ಲೆವಲ್‌ ಅನ್ನು ನಿಯಂತ್ರಿಸುತ್ತದೆ.
  • ಅಧಿಕ ಪ್ರಮಾಣದ ಫೈಬರ್‌ ಹೊಂದಿರುವ ಸವತೆಕಾಯಿಯು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಇದನ್ನೂ ಓದಿ : Glowing Skin: ಬೇಸಿಗೆಯಲ್ಲಿ ಗ್ಲೋಯಿಂಗ್‌ ಸ್ಕಿನ್‌ಗಾಗಿ ಹೀಗಿರಿಲಿ ನಿಮ್ಮ ಜೀವನಶೈಲಿ

ಇದನ್ನೂ ಓದಿ : ಈ ಬೇಸಿಗೆಗೆ ಖರ್ಬೂಜಾವನ್ನು ತಿನ್ನುವುದರಿಂದ ಎಷ್ಟೆಲ್ಲಾ ಆರೋಗ್ಯಕರ ಪ್ರಯೋಜನಗಳಿವೆ ಗೊತ್ತಾ ?

(How to make Cucumber Cold Soup in this hot summer. Know the benefits of cucumber. Recipe inside)

Comments are closed.