Vastu Tips For Marriage : ಮದುವೆಯ ವಯಸ್ಸು ಮೀರಿದರೂ ಸಂಗಾತಿಯು ಸಿಗುತ್ತಿಲ್ಲವೇ..? ಹಾಗಾದರೆ ಅನುಸರಿಸಿ ಈ ವಾಸ್ತುಟಿಪ್ಸ್​

Vastu Tips For Marriage : ಯೋಗ್ಯ ಸಮಯದಲ್ಲಿ ಸೂಕ್ತ ಜೀವನ ಸಂಗಾತಿ ಸಿಗಬೇಕು ಎಂಬ ಬಯಕೆ ಬಹುತೇಕ ಎಲ್ಲರಿಗೂ ಇರುತ್ತದೆ. ಆದರೆ ಎಲ್ಲರ ಜೀವನದಲ್ಲಿಯೂ ಈ ಮಾತು ನಿಜವಾಗುವುದಿಲ್ಲ. ಏಕೆಂದರೆ ವಯಸ್ಸು ಮೀರುತ್ತಾ ಬಂದರೂ ಸಹ ಅವರಿಗೆ ಇನ್ನೂ ಆದರ್ಶ ಸಂಗಾತಿ ಸಿಗುವುದಿಲ್ಲ. ಪೋಷಕರಿಗಂತೂ ಮಕ್ಕಳ ಮದುವೆ ಸರಿಯಾದ ಸಮಯಕ್ಕೆ ಆಗಿಲ್ಲ ಅಂದರೆ ಭಯ ಕಾಡಲು ಆರಂಭವಾಗುತ್ತದೆ. ನೀವು ಕೂಡ ಇಂತವರಲ್ಲಿ ಒಬ್ಬರಾಗಿದ್ದರೆ ನೀವು ಅತಿಯಾಗಿ ಚಿಂತಿಸಬೇಡಿ. ಏಕೆಂದರೆ ನಿಮ್ಮ ಈ ಸಮಸ್ಯೆಗಳಿಗೆ ವಾಸ್ತು ಶಾಸ್ತ್ರದಲ್ಲಿ ಪರಿಹಾರವಿದೆ.


ಹಾಸಿಗೆಯಲ್ಲಿ ಮಲಗುವ ದಿಕ್ಕು : ಅವಿವಾಹಿತ ಮಹಿಳೆಯು ಮನೆಯ ವಾಯುವ್ಯ ದಿಕ್ಕಿನಲ್ಲಿ ಮಲಗುವುದು ಉತ್ತಮ. ನೈಋತ್ಯ ದಿಕ್ಕಿನಲ್ಲಿ ಮಲಗಲೇಬಾರದು. ಈ ರೀತಿ ಮಾಡಿದರೆ ನಿಮಗೆ ಶೀಘ್ರದಲ್ಲಿಯೇ ಮದುವೆಯ ಯೋಗವನ್ನು ತರುತ್ತದೆ. ಅದೇ ರೀತಿ ಅವಿವಾಹಿತ ಪುರುಷನು ಈಶಾನ್ಯ ದಿಕ್ಕಿನಲ್ಲಿ ಮಲಗಬೇಕು ಹಾಗೂ ಆಗ್ನೇಯ ದಿಕ್ಕಿನಲ್ಲಿ ಮಲಗಲೇಬಾರದು.

ಬೆಡ್​ಶೀಟ್​ನ ಬಣ್ಣ : ಗುಲಾಬಿ, ಹಳದಿ, ತಿಳಿ ನೇರಳೆ ಅಥವಾ ಬಿಳಿಯಂತಹ ತಿಳಿ ಬಣ್ಣದ ಬೆಡ್​ಶೀಟ್​ನ ಮೇಲೆ ಮಲಗಬೇಕು. ಇದು ಕೋಣೆಗೆ ಸರಿಯಾದ ರೀತಿಯ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ಮದುವೆಯಾಗಲು ಬಯಸುವ ವ್ಯಕ್ತಿಗೆ ಧನಾತ್ಮಕ ಶಕ್ತಿಯನ್ನು ನೀಡುತ್ತದೆ.


ಕಬ್ಬಿಣ : ಮದುವೆಯಾಗಬೇಕೆಂದುಕೊಂಡಿರುವವರು ಎಂದಿಗೂ ಮಂಚದ ಕೆಳಗೆ ಕಬ್ಬಿಣದ ವಸ್ತು ಇರದಂತೆ ನೋಡಿಕೊಳ್ಳಬೇಕು. ಅಲ್ಲದೇ ಕೋಣೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಎಂದಿಗೂ ನೀವು ಮಲಗುವ ಕೋಣೆಯು ಚೆಲ್ಲಾಪಿಲ್ಲಿಯಾಗಿ ಇರಬಾರದು. ಆಗ ನಿಮ್ಮ ಕೋಣೆಯಲ್ಲಿ ಧನಾತ್ಮಕ ಶಕ್ತಿಯು ನೆಲೆಸುತ್ತದೆ.


ಭಾರವಾದ ವಸ್ತುಗಳು :ಮನೆಯ ಮಧ್ಯದಲ್ಲಿ ಭಾರವಾದ ವಸ್ತುಗಳನ್ನು ಅಥವಾ ಮೆಟ್ಟಿಲುಗಳನ್ನು ಇಡುವುದು ಸೂಕ್ತವಲ್ಲ. ಏಕೆಂದರೆ ಇದು ಮದುವೆಯ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತದೆ. ವಾಸ್ತು ಪ್ರಕಾರ, ಭಾರವಾದ ವಸ್ತುಗಳು ಮದುವೆಯ ಶುಭ ಶಕ್ತಿಯು ಮನೆಗೆ ಪ್ರವೇಶಿಸಲು ಅಡ್ಡ ಬರುತ್ತದೆ.

vastu tips for marriage if there is a problem in marriage then follow these vastu tips

ಇದನ್ನು ಓದಿ : Chinese Soldiers : ಗಾಲ್ವಾನ್​ ಕಣಿವೆ ಸಂಘರ್ಷದಲ್ಲಿ ಮೃತಪಟ್ಟ ಚೀನಾ ಸೈನಿಕರ ತನಿಖಾ ವರದಿಯಲ್ಲಿ ಬಯಲಾಯ್ತು ಸ್ಫೋಟಕ ಮಾಹಿತಿ

ಇದನ್ನೂ ಓದಿ : Rahul Gandhi hits out at Modi govt :‘ಭಾರತವನ್ನು ಸಾಮ್ರಾಜ್ಯದಂತೆ ಆಳಲು ಸಾಧ್ಯವಿಲ್ಲ’ : ಮೋದಿ ಸರ್ಕಾರಕ್ಕೆ ರಾಹುಲ್​ ಟಾಂಗ್​

Comments are closed.