BY Vijayendra vs BY Umadevi : ಅಕ್ಕ ಕಣ್ಣಿಟ್ಟ ಕ್ಷೇತ್ರ ತಮ್ಮನ ಪಾಲಿಗೆ : ಬಿ.ಎಸ್‌.ಯಡಿಯೂರಪ್ಪ ಕುಟುಂಬದಲ್ಲಿ ಹೊತ್ತಿತಾ ಅಸಮಧಾನದ ಕಿಡಿ

ಶಿವಮೊಗ್ಗ : ರಾಜ್ಯದಲ್ಲಿ 2023 ರ ವಿಧಾನಸಭಾ ಚುನಾವಣೆಗೆ ತೆರೆಮರೆಯಲ್ಲಿ ನಡೆಯುತ್ತಿದ್ದ ಕಸರತ್ತುಗಳು ಈಗ ಬಹಿರಂಗವಾಗಿಯೇ ಆರಂಭಗೊಂಡಿವೆ. ಈ ಮಧ್ಯೆ ಬಿಜೆಪಿ ರಾಜಕಾರಣದಲ್ಲಿ ಸ್ಪೋಟಕ ಬೆಳವಣಿಗೆಯೊಂದು ನಡೆದಿದ್ದು ಬಿಜೆಪಿಯ ರಾಜಾಹುಲಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದು ತಮ್ಮ ಕ್ಷೇತ್ರವನ್ನು ಪುತ್ರನಿಗೆ ಬಿಟ್ಟುಕೊಡುವುದಾಗಿ ಘೋಷಿಸಿದ್ದಾರೆ. ಆದರೆ ಈ ಘೋಷಣೆ ಯಿಂದ ರಾಜಕಾರಣದ ಲೆಕ್ಕಾಚಾರಗಳು ಒಂದೆಡೆ ಆರಂಭಗೊಂಡಿದ್ದರೇ, ಇದುವರೆಗೂ ಜೇನುಗೂಡಿನಂತಿದ್ದ ಬಿ.ಎಸ್‌.ಯಡಿಯೂರಪ್ಪ ಕುಟುಂಬದಲ್ಲಿ ಸಣ್ಣ ಅಸಮಧಾನದ ಕಿಡಿ ಹೊತ್ತಿಕೊಂಡಿದ್ದು, ತಂದೆಯ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಬಿ.ಎಸ್‌.ಯಡಿಯೂರಪ್ಪ ಪುತ್ರಿಗೆ (BY Vijayendra vs BY Umadevi) ನಿರಾಸೆ ಎದುರಾಗಿದೆ.

ಪ್ರಸ್ತುತ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿರೋ ಬಿ.ವೈ.ವಿಜಯೇಂದ್ರ್, 2023 ರ ಚುನಾವಣೆ ಮೂಲಕ ರಾಜಕಾರಣಕ್ಕೆ ಎಂಟ್ರಿ ಕೊಡೋದು ಹಾಗೂ ಸರ್ಕಾರ ಅಧಿಕಾರಕ್ಕೆ ಬಂದರೇ ಮಹತ್ವದ ಸ್ಥಾನ ಪಡೆಯೋದು ಬಹುತೇಕ ಖಚಿತ ಎನ್ನಲಾಗ್ತಿತ್ತು. ಆದರೆ ವಿಜಯೇಂದ್ರ್ ಗೆ ಶಿಕಾರಿಪುರ ಕ್ಷೇತ್ರ ವನ್ನು ಬಿ.ಎಸ್‌.ಯಡಿಯೂರಪ್ಪ ಬಿಟ್ಟುಕೊಡ್ತಾರೇ ಅನ್ನೋ ನೀರಿಕ್ಷೆ ಯಾರಿಗೂ ಇರಲಿಲ್ಲ. ಬದಲಾಗಿ ಬಿ.ಎಸ್‌.ಯಡಿಯೂರಪ್ಪ ಪುತ್ರ ವಿಜಯೇಂದ್ರ್ ಮೈಸೂರು ಭಾಗದಿಂದ ಚುನಾವಣೆಗೆ ಸ್ಪರ್ಧಿಸಿ ಗೆಲ್ಲುತ್ತಾರೆ ಎಂದು ಲೆಕ್ಕಾಚಾರ ಹಾಕಲಾಗಿತ್ತು.

ರಾಜಕೀಯ ವಲಯದಲ್ಲೂ ಇದೇ ಚರ್ಚೆ ಜೋರಾಗಿ ನಡೆದಿದ್ದು, ವಿಜಯೇಂದ್ರ ವರುಣಾ, ಗುಂಡ್ಲುಪೇಟೆ ಅಥವಾ ಹೊಸದುರ್ಗ ಕ್ಷೇತ್ರದಿಂದ ಕಣಕ್ಕೆ ಇಳಿಯಬಹುದು ಎಂದು ನೀರಿಕ್ಷಿಸಲಾಗಿತ್ತು. ಹೀಗಾಗಿ ಬಿಎಸ್ವೈ ಪುತ್ರಿ ಉಮಾದೇವಿ ತಂದೆಯ ಸ್ವ ಕ್ಷೇತ್ರ ಅದರಲ್ಲೂ ಬಿಎಸ್ವೈ ಅವರನ್ನು ಎಂಟಕ್ಕೂ ಹೆಚ್ಚು ಭಾರಿ ಶಾಸಕರನ್ನಾಗಿ‌ ಮಾಡಿದ ಶಿಕಾರಿಪುರ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು. ರಾಜಕಾರಣಕ್ಕೆ ಇನ್ನೂ ಅಂಬೆಗಾಲಿಡಬೇಕಿರುವ ಬಿಎಸ್ವೈ ಪುತ್ರಿ ಉಮಾದೇವಿ ಪಾಲಿಗೆ ಈ ಕ್ಷೇತ್ರ ವರದಾನವಾಗಿತ್ತು. ಯಾಕೆಂದರೇ ಶಿಕಾರಿಪುರದಲ್ಲಿ ಸ್ವತಃ ಬಿಎಸ್ವೈ ಮಾಡಿರೋ ಅಭಿವೃದ್ಧಿ ಕಾರ್ಯ ಹಾಗೂ ಜನತೆಯ ಅಭಿಮಾನ ಉಮಾದೇವಿ ಗೆಲುವಿನ ಹಾದಿ ಸುಲಭವಾಗಿಸುತ್ತಿತ್ತು.

ಹೀಗಾಗಿ ಕುಟುಂಬದಲ್ಲಿ ಹಾಗೂ ತಂದೆಯ ಬಳಿ ಉಮಾದೇವಿ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದು, ಹೆಣ್ಣುಮಕ್ಕಳಿಗೆ ರಾಜಕಾರಣದಲ್ಲಿ ಅವಕಾಶ ಬೇಕು ಎಂಬರ್ಥದಲ್ಲಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅಲ್ಲದೇ ಉಮಾದೇವಿ ತಂದೆಯ ಎಲ್ಲ ಏಳುಬೀಳುಗಳ ಸಂದರ್ಭದಲ್ಲೂ ಜೊತೆ ನಿಂತಿದ್ದು ಸಹಜವಾಗಿ ಬಿಎಸ್ವೈ ತಮ್ಮ ಕ್ಷೇತ್ರವನ್ನು ಪುತ್ರಿಗೆ ಬಿಟ್ಟು ಕೊಡಬಹುದು ಎಂಬ ನೀರಿಕ್ಷೆ ಆಪ್ತ ವಲಯದಲ್ಲಿ ಕೇಳಿಬಂದಿತ್ತು. ಆದರೆ ಪುತ್ರಿಗಿಂತ ಪುತ್ರನನ್ನೇ ತಮ್ಮ ರಾಜಕೀಯ ಉತ್ತರಾಧಿಕಾರಿ ಮಾಡಿ ರಾಜ್ಯ ರಾಜಕಾರಣದಲ್ಲಿ ಹಿಡಿತ ಸಾಧಿಸಲು ಮುಂದಾಗಿರೋ ಬಿಎಸ್ವೈ ಚುನಾವಣೆಗೂ ಮುನ್ನವೇ ಕ್ಷೇತ್ರವನ್ನು ಪುತ್ರನಿಗೆ ತ್ಯಾಗ ಮಾಡೋ ಮೂಲಕ ಮತ್ತೊಮ್ಮೆ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ಆದರೆ ಬಿಎಸ್ವೈ ಈ ನಿರ್ಧಾರ ಕುಟುಂಬದಲ್ಲಿ ಅಸಮಧಾನದ ಸಣ್ಣ ಕಿಡಿ ಹೊತ್ತಿಸಿದೆ ಎನ್ನಲಾಗ್ತಿದೆ.

ಇದನ್ನೂ ಓದಿ : vijayendra will contest from shikaripura : ಶಿಕಾರಿಪುರದಲ್ಲಿನ್ನು ವಿಜಯೇಂದ್ರ ಸ್ಪರ್ಧೆ : ಬಿಎಸ್​ವೈ ರಾಜಕೀಯ ನಿವೃತ್ತಿ ಸಾಧ್ಯತೆ

ಇದನ್ನೂ ಓದಿ : cm bommai : ರಾಜ್ಯದಲ್ಲಿ ಮತ್ತೆ ಗರಿಗೆದರಿದ ಸಂಪುಟ ವಿಸ್ತರಣೆ ಚಟುವಟಿಕೆ : ಮಹತ್ವದ ಸುಳಿವು ನೀಡಿದ ಸಿಎಂ ಬೊಮ್ಮಾಯಿ

BY Vijayendra vs BY Umadevi, A spark of discontent ignited in BS Yediyurappa’s family

Comments are closed.