BSY’s political retirement : ನಿವೃತ್ತಿ ಎಂಬ ಮಾತು ಬಿಎಸ್​ವೈ ಪದಕೋಶದಲ್ಲಿಯೇ ಇಲ್ಲ : ತಂದೆಯ ರಾಜಕೀಯ ನಿವೃತ್ತಿ ಬಗ್ಗೆ ವಿಜಯೇಂದ್ರ ಸ್ಪಷ್ಟನೆ

ಶಿವಮೊಗ್ಗ : BSYs political retirement : ಇಂದು ಅಂಜನಾಪುರ ಡ್ಯಾಂಗೆ ಬಾಗೀನ ಅರ್ಪಿಸಲು ತೆರಳಿದ್ದ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ಸಂಚಲನವನ್ನೇ ಸೃಷ್ಟಿಸುವಂತಹ ಹೇಳಿಕೆಯೊಂದನ್ನು ನೀಡಿದ್ದಾರೆ. ಶಿಕಾರಿಪುರ ಕ್ಷೇತ್ರವನ್ನು ನಾನು ಖಾಲಿ ಮಾಡುತ್ತಿದ್ದು ಈ ಕ್ಷೇತ್ರದಲ್ಲಿ ನನ್ನ ಪುತ್ರ ಬಿ.ವೈ ವಿಜಯೇಂದ್ರ ಸ್ಪರ್ಧಿಸಲಿದ್ದಾರೆ ಎಂದು ಹೇಳುವ ಮೂಲಕ ತಾವು ರಾಜಕೀಯವಾಗಿ ಜನ್ಮ ತಾಳಿದ್ದ ಶಿಕಾರಿಪುರ ಕ್ಷೇತ್ರವನ್ನೇ ಇಂದು ಯಡಿಯೂರಪ್ಪ ತ್ಯಾಗ ಮಾಡಿದ್ದಾರೆ.

ಶಿಕಾರಿಪುರದಲ್ಲಿ ಈ ವಿಚಾರವಾಗಿ ಮಾತನಾಡಿದ ಯಡಿಯೂರಪ್ಪ, ಶಿಕಾರಿಪುರ ಕ್ಷೇತ್ರದಿಂದ ಮುಂದಿನ ವಿಧಾನಸಭಾ ಚುನಾವಣೆಯನ್ನು ಬಿ,ವೈ ವಿಜಯೇಂದ್ರ ಎದುರಿಸಲಿದ್ದಾರೆ. ನನಗಿಂತಲೂ ನನ್ನ ಪುತ್ರನಿಗೆ ಇನ್ನೂ ಹೆಚ್ಚಿನ ಮತವನ್ನು ನೀಡಿ ಎಂದು ಹೇಳುವ ಮೂಲಕ ಯಡಿಯೂರಪ್ಪ ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ ಎಂಬ ವಿಚಾರದ ಬಗ್ಗೆ ಸ್ಪಷ್ಟ ಸಂದೇಶವನ್ನು ಸಾರಿದ್ದಾರೆ. ಯಡಿಯೂರಪ್ಪ ಇಂತಹದ್ದೊಂದು ಹೇಳಿಕೆ ನೀಡಿದ ಬಳಿಕ ಇವರು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದಬಹುದೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಮೂಡಿದೆ,

ತಂದೆ ರಾಜಕೀಯ ನಿವೃತ್ತಿ ಪಡೆಯುತ್ತಾರಾ ಎಂಬ ಪ್ರಶ್ನೆಗೆ ಶಿಕಾರಿಪುರದಲ್ಲಿ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ,ವೈ ವಿಜಯೇಂದ್ರ, ತಂದೆ ಇಂದು ಅಚಾನಕ್​ ಆಗಿ ಇಂತಹದ್ದೊಂದು ಘೋಷಣೆ ಮಾಡಿದ್ದಾರೆ. ಅವರು ಈ ರೀತಿ ಘೋಷಣೆ ಮಾಡಬಹುದು ಎಂಬ ಸುಳಿವು ನನಗೂ ಇರಲಿಲ್ಲ. ಪಕ್ಷದ ರಾಜ್ಯ ಉಪಾಧ್ಯಕ್ಷನಾಗಿ ನಾನು ಪಕ್ಷದ ಹಾಗೂ ತಂದೆಯ ಮಾತಿಗೆ ಎಂದು ಬದ್ಧನಾಗಿ ಇರಲಿದ್ದೇನೆ ಎಂದು ಹೇಳಿದರು.

ನಿವೃತ್ತಿ ಎಂಬ ಮಾತು ನನ್ನ ತಂದೆಯ ಡಿಕ್ಶನರಿಯಲ್ಲಿಯೇ ಉದ್ಭವಿಸೋದಿಲ್ಲ. ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇ ಯಡಿಯೂರಪ್ಪ. ಅವರು ಕೇವಲ ಚುನಾವಣಾ ಜೀವನದಿಂದ ಹಿಂದೆ ಸರಿಯುತ್ತಾರೆ. ರಾಜಕಾರಣದಲ್ಲಿ ಅವರು ಶಕ್ತಿ ಇರುವವರೆಗೂ ಸಕ್ರಿಯರಾಗಿ ಇರಲಿದ್ದಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭದಲ್ಲಿಯೂ ಯಡಿಯೂರಪ್ಪ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಬಹುಮತಗಳೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ತರುತ್ತೇನೆ ಎಂದು ಭವಿಷ್ಯ ನುಡಿದಿದ್ದರು. ಆ ಮಾತನ್ನು ಉಳಿಸಿಕೊಳ್ಳಲಿಕ್ಕಾದರೂ ಯಡಿಯೂರಪ್ಪ ರಾಜ್ಯ ಪ್ರವಾಸಗಳನ್ನು ಕೈಗೊಂಡು ಪಕ್ಷ ಸಂಘಟನೆ ಮಾಡಲಿದ್ದಾರ ಎಂದು ಸ್ಪಷ್ಟನೆ ನೀಡಿದರು.

ಇದನ್ನು ಓದಿ : vijayendra will contest from shikaripura : ಶಿಕಾರಿಪುರದಲ್ಲಿನ್ನು ವಿಜಯೇಂದ್ರ ಸ್ಪರ್ಧೆ : ಬಿಎಸ್​ವೈ ರಾಜಕೀಯ ನಿವೃತ್ತಿ ಸಾಧ್ಯತೆ

ಇದನ್ನೂ ಓದಿ : Mysore Tourist Places: ಮೈಸೂರಿನ ಈ ಅದ್ಭುತ ಪ್ರವಾಸ ತಾಣಗಳನ್ನ ಮಿಸ್ ಮಾಡದೇ ಭೇಟಿ ನೀಡಿ

Vijayendra clarified about BSYs political retirement

Comments are closed.