ಹುಬ್ಬಳ್ಳಿ : ಸರಳವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಅವರ ಹತ್ಯೆ ಪ್ರಕರಣಕ್ಕೆ (chandrashekhar guruji Murder case) ಸಂಬಂಧಿಸಿದಂತೆ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಲಾಬೂರಾಂ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ಅಲ್ಲದೇ ಕೊಲೆ ನಡೆದಿರುವ ಪಿನ್ ಟು ಪಿನ್ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮಧ್ಯಾಹ್ನ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಚಂದ್ರಶೇಖರ ಗುರೂಜಿ ಅವರನ್ನು ಕೊಲೆ ಮಾಡಲಾಗಿದೆ. ಜುಲೈ ಐದನೇ ತಾರೀಕಿನಿಂದಲೂ ರೂಂ ಮಾಡಿಕೊಂಡು ಚಂದ್ರಶೇಖರ ಗುರೂಜಿ ಅವರು ಇಲ್ಲಿಯೇ ಉಳಿದುಕೊಂಡಿದ್ದರು. ಮಧ್ಯಾಹ್ನ ಯಾರೋ ಪೋನ್ ಮಾಡಿ ಕೆಳಗಡೆ ಕರೆಯಿಸಿಕೊಂಡಿದ್ದಾರೆ. ಹೀಗಾಗಿ ಗುರೂಜಿ ಹೋಟೆಲ್ ರಿಸೆಪ್ಷನ್‌ಗೆ ಬಂದಿದ್ದಾರೆ. ಈ ವೇಳೆಯಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಈಗಾಗಲೇ ಪ್ರಕರಣ ದಾಖಲು ಮಾಡಿಕೊಂಡಿದ್ದು, ಪೊಲೀಸರ ವಿಶೇಷ ತಂಡವನ್ನು ರಚಿಸಲಾಗಿದೆ. ಹಂತಕರಿಗಾಗಿ ಹುಡುಕಾಟವನ್ನು ನಡೆಸಲಾಗುತ್ತಿದೆ ಎಂದಿದ್ದಾರೆ.
ಇನ್ನು ಬಾಗಲಕೋಟೆ ಮೂಲದ ಚಂದ್ರಶೇಖರ ಗುರೂಜಿ ಅವರ ಮನೆ, ಹಳೆ ಬಾಗಲಕೋಟೆ ಪಟ್ಟಣದ ಹುಂಡೇಕಾರ ಗಲ್ಲಿಯಲ್ಲಿತ್ತು. ಆದ್ರೀಗ ಮನೆ ಖಾಲಿ ಮಾಡಿಕೊಂಡು, ಮನೆಯಲ್ಲಿದ್ದವರು ಹುಬ್ಬಳ್ಳಿಗೆ ಶಿಫ್ಟ್ ಆಗಿದ್ದರು. ಇನ್ನು ಸರಳವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಹತ್ಯೆ ದುಃಖದ ಸಂಗತಿ. ಅವರ ಕುಟುಂಬ ಸದಸ್ಯರಿಗೆ ಸಾವಿನ ದುಃಖ ಭರಿಸುವ ಶಕ್ತಿ ನೀಡಲಿ. ಚಂದ್ರಶೇಖರ ಗುರೂಜಿಯವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಮೈಸೂರಿನಲ್ಲಿ ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಭಕ್ತರ ಸೋಗಿನಲ್ಲಿ ಭೇಟಿ, ಕಾಲಿಗೆ ನಮಸ್ಕರಿಸಿ ಹತ್ಯೆ !
ಚಂದ್ರಶೇಖರ ಗುರೂಜಿ ಅವರನ್ನು ಭೇಟಿ ಮಾಡಲು ಹೋಟೆಲ್‌ಗೆ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಗುರೂಜಿ ಅವರನ್ನು ಹೋಟೆಲ್‌ನ ರಿಸೆಪ್ಷನ್‌ಗೆ ಕರೆಯಿಸಿಕೊಂಡಿದ್ದಾರೆ. ನಂತರ ಒಬ್ಬ ವ್ಯಕ್ತಿ ಗುರೂಜಿಯ ಕಾಲಿಗೆ ಬಿದ್ದಿದ್ದಾನೆ. ಈ ವೇಳೆಯಲ್ಲಿ ಅಲ್ಲಿಯೇ ಇದ್ದ ಮತ್ತೊಬ್ಬಾತ ಗುರೂಜಿಗೆ ಚಾಕುವಿನಿಂದ ಇರಿದಿದ್ದಾನೆ. ನೆಲೆಕ್ಕೆ ಬಿದ್ದ ನಂತರದಲ್ಲಿ ಗುರೂಜಿಗೆ ಸುಮಾರು ಆರವತ್ತಕ್ಕೂ ಅಧಿಕ ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಗುರೂಜಿ ಸಾವನ್ನಪ್ಪಿರೋದನ್ನು ಖಚಿತ ಪಡಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಗುರೂಜಿಯ ಮೇಲೆ ನಡೆದಿರುವ ಹಲ್ಲೆ ಇದೀಗ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ : Chandrashekar guruji murder : ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹತ್ಯೆ
ಇದನ್ನೂ ಓದಿ : murder of Chandrasekhar Guruji : ಚಂದ್ರಶೇಖರ್ ಗುರೂಜಿ ಸಾವಿಗೆ ಆ ಮಹಿಳೆಯೇ ಕಾರಣ..? ಅನುಮಾನಕ್ಕೆಡೆ ಮಾಡಿದ ಬೇನಾಮಿ ಆಸ್ತಿ
chandrashekhar guruji Murder case : Hubballi police commissioner Labhu Ram revealed the murder mystery