New OnePlus Nord 2T : ಶ್ರೀಘ್ರದಲ್ಲಿ ಬರಲಿದೆ OnePlus Nord 2T

ಮಾರುಕಟ್ಟೆಯಲ್ಲಿ ಅತಿ ಬೇಡಿಕೆ (On Trending )ಇರುವ OnePlus ಕಂಪೆನಿ ವಿನೂತನ OnePlus Nord 2T ಸ್ಮಾರ್ಟ್‌ಫೋನ್ ಕೆಲವೇ ದಿನಗಳಲ್ಲಿ ಬರಲಿದೆ. 90Hz AMOLED ಡಿಸ್‌ಪ್ಲೇ, ಅಲ್ಟ್ರಾ-ಕ್ಲಿಯರ್ ಫ್ರಂಟ್ ಕ್ಯಾಮೆರಾ, ಮೀಡಿಯಾ ಟೆಕ್ ಡೈಮೆನ್ಸಿಟಿ 1300 ಮತ್ತು 80W ವೇಗದ ಚಾರ್ಜಿಂಗ್ ವೈಶಿಷ್ಟ್ಯಗಳನ್ನು ಹೊತ್ತು ದೇಶದಲ್ಲಿ ಬಿಡುಗಡೆಯಾಗಲಿದೆ,ಈ ಲೇಖನದಲ್ಲಿ, ಭಾರತದಲ್ಲಿ ನಿರೀಕ್ಷಿತNew OnePlus Nord 2T ಬೆಲೆ, ವಿಶೇಷಣಗಳು, ವಿನ್ಯಾಸ ಬಗ್ಗೆ ನಾವು ತಿಳಿಸುತ್ತೇವೆ

ಟಿಪ್‌ಸ್ಟರ್ ಪರಾಸ್ ಗುಗ್ಲಾನಿ ಪ್ರಕಾರ, OnePlus Nord 2T ಈ ತಿಂಗಳ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಸುಮಾರು 30,000 ರೂ.ಗಳ ಬೆಲೆಯಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಇದು 8GB RAM + 128GB ಸ್ಟೋರೇಜ್ ಮತ್ತು 12GB RAM + 256GB ಸ್ಟೋರೇಜ್ ಎಂದು BGR ಇಂಡಿಯಾ ವರದಿಯಲ್ಲಿ ಉಲ್ಲೇಖಿಸಿದೆ .ಇದು ಬಹುಶಃ ಎರಡು ಬಣ್ಣಗಳಲ್ಲಿ ಬರಬಹುದು, ಅದು ಗ್ರೇ ಷಾಡೋ ಮತ್ತು ಜೇಡ್ ಫಾಗ್. OnePlus Nord 2T OnePlus Nord 2 ನಿಂದ ಅಪ್‌ಗ್ರೇಡ್ ಆಗಿರುತ್ತದೆ.

ಅದರ ಪೂರ್ವವರ್ತಿಯಲ್ಲಿ ಕಂಡುಬರುವ ಡೈಮೆನ್ಸಿಟಿ 1200 ಗೆ ವಿರುದ್ಧವಾಗಿ MediaTek ಡೈಮೆನ್ಸಿಟಿ 1300 SoC ಯೊಂದಿಗೆ ಬರುತ್ತದೆ.ಇಂಚಿನ Full HD + AMOLED ಡಿಸ್ ಪ್ಲೇ ಜೊತೆಗೆ 90Hz ರಿಫ್ರೆಶ್ ದರವನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತದೆ. ಸ್ಮಾರ್ಟ್‌ಫೋನ್‌ನ ಪ್ರೊಸೆಸರ್ ಮೀಡಿಯಾ ಟೆಕ್ ಡೈಮೆನ್ಸಿಟಿ 1300 ಎಂದು ತಿಳಿದುಬಂದಿದೆ. ಇದು 6 GB RAM ಮತ್ತು 256 GB ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿರಬಹುದು ಎಂದು ಊಹಿಸಲಾಗುತ್ತಿದೆ. ಆದರೆ, ಯಾವುದೇ ನಿಖರವಾದ ಮಾಹಿತಿಯನ್ನು ಕಂಪನಿಯು ಬಿಟ್ಟುಕೊಟ್ಟಿಲ್ಲ.

ವಿಶೇಷ ಕ್ಯಾಮೆರಾ ಮತ್ತು ವಿನ್ಯಾಸ

ಈ ಫೋನಿನಲ್ಲಿ ತ್ರಿಬಲ್ ಕ್ಯಾಮರಾ ವ್ಯವಸ್ಥೆಯನ್ನು ಹೊಂದಿದೆ ಅದರ ಜೊತೆಗೆ 50MPಲೆನ್ಸ್, 8MP ಅಲ್ಟ್ರಾ-ವೈಡ್ ಸೆನ್ಸರ್, 2MP ಮೊಂವ್ಚ್ರೋಮೇ ಸೆನ್ಸರ್,ವಿಶೇಷವಾಗಿ ಫ್ರಂಟ್ ಕ್ಯಾಮೆರಾ ಸೆಲ್ಫಿ ಶಾಟ್‌ಗಳಿಗಾಗಿ 32MP ಕ್ಯಾಮೆರಾವನ್ನು ಹೊಂದಿದೆ. ಹಿಂಬದಿಯ ಕ್ಯಾಮರಾ 30 fps ನಲ್ಲಿ 4k ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.OnePlus Nord 2T ಸ್ಮಾರ್ಟ್ ಫೋನ್ ವಿಶೇಷವಾದ ತ್ರಿಬಲ್ ಕ್ಯಾಮೆರಾ , ಸೆಲ್ಫಿ ಸ್ನ್ಯಾಪರ್ ಮತ್ತು ಸ್ಲಿಮ್ ಬೆಜೆಲ್‌ಗಳಿಗಾಗಿ ಪಂಚ್-ಹೋಲ್ ಕಟೌಟ್‌ನೊಂದಿಗೆ ಫೋನ್ ಮುಂಭಾಗದಿಂದ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ.ಫೋನ್ ಆಯತಾಕಾರದ ಮಾಡ್ಯೂಲ್‌ನಲ್ಲಿ ಎರಡು ವೃತ್ತಾಕಾರದ ಉಂಗುರಗಳನ್ನು ಹೊಂದಿದೆ. ಮೇಲಿನ ಉಂಗುರವು ಒಂದೇ ದೊಡ್ಡ ಕ್ಯಾಮೆರಾ ಸೆನ್ಸರ್ ವನ್ನು ಹೊಂದಿದೆ, ಆದರೆ ಕೆಳಗಿನ ವೃತ್ತವು ಎರಡು ಸೆನ್ಸರ್ ಗಳನ್ನು ಹೊಂದಿದೆ. ಮಾಡ್ಯೂಲ್ ಪಕ್ಕದಲ್ಲಿ ಎಲ್ಇಡಿ ಫ್ರೇಮ್ ಇದೆ. ಫ್ರೇಮ್ ಪ್ಲಾಸ್ಟಿಕ್ನಿಂದ ಮಾಡಲ್ಪಟ್ಟಿದೆ ಎಂದು ತೋರುತ್ತದೆ.

ಭಾರತದಲ್ಲಿ ಬೆಲೆ

30,000-40,000 ರೂಪಾಯಿಗಳ ನಡುವೆ ಇರಬಹುದೆಂದು ನಿರೀಕ್ಷಿಸಲಾಗಿದೆ. ಮೂಲ ಮಾದರಿಯು ರೂ 30,000 ಕ್ಕಿಂತ ಕಡಿಮೆಯಿರುವ ಸಾಧ್ಯತೆಗಳಿವೆ, ಆದರೆ Nord 2 ಬೇಸ್ 6GB/128GB ಮಾದರಿಯು ಖರೀದಿಸಲು ವಿರಳವಾಗಿ ಲಭ್ಯವಿರುವುದರಿಂದ ಸ್ಟಾಕ್ ಇದರಿಂದ ಇರುವುದು ಅನುಮಾನವಾಗಿದೆ

ಬ್ಯಾಟರಿ

ಸ್ಮಾರ್ಟ್​ಫೋನಿನ ಬ್ಯಾಟರಿ ಬ್ಯಾಕಪ್ ಕುರಿತು ಮಾತನಾಡುತ್ತಾ, ಇದು 4500mAh ಬ್ಯಾಟರಿಯನ್ನು ಹೊಂದಿದೆ. 80W SUPERVOOC ವೇಗದ ಚಾರ್ಜಿಂಗ್ ಬೆಂಬಲವು ಬ್ಯಾಟರಿಯೊಂದಿಗೆ ಲಭ್ಯವಿದೆ. ಸಂಪರ್ಕ ವೈಶಿಷ್ಟ್ಯಗಳಾಗಿ, 5G, Wi-Fi, ಬ್ಲೂಟೂತ್ 5.2, NFC ವೈಶಿಷ್ಟ್ಯಗಳನ್ನು ಫೋನ್​ನಲ್ಲಿ ನೀಡಲಾಗಿದೆ.ಒಟ್ಟಾರೆಯಾಗಿ ಭಾರತೀಯರಿಗೆ ಭಾರತೀಯ ಮಾರುಕಟ್ಟೆಯ ಅತಿ ಹೆಚ್ಚು ಬೇಡಿಕೆ ಹೊಂದಿರುವ OnePlus ಈಗ ಹೊಸ ಆವೃತ್ತಿಯಲ್ಲಿ ಬರುವುದು ಸಂತಸ ತರುವ ವಿಷಯ, ಆದಷ್ಟು ಬೇಗ ಬೆಲೆ ನಿಖರವಾಗಿ ತಿಳಿಸಿ.

ಇದನ್ನೂ ಓದಿ : Top 5 Automatic Cars: 8 ಲಕ್ಷಕ್ಕಿಂತ ಕಡಿಮೆ ಬೆಲೆಯ ಭಾರತದ ಟಾಪ್‌ 5 ಆಟೊಮೆಟಿಕ್‌ ಕಾರುಗಳು!

ಇದನ್ನೂ ಓದಿ :Changes in RTO rules : ವಾಹನ ಮಾಲೀಕರಿಗೆ ಇಲ್ಲಿದೆ ಗುಡ್‌ನ್ಯೂಸ್‌ : RTO ನಿಯಮದಲ್ಲಿ ಹಲವು ಬದಲಾವಣೆ

OnePlus Nord 2T Launching in India

Comments are closed.