Chandrashekhar Guruji murder case : ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ : ಹೋಟೆಲ್‌ನಲ್ಲಿ ಸುದರ್ಶನ ಹೋಮ, ಹವನದ

ಹುಬ್ಬಳ್ಳಿ : ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್‌ ಗುರೂಜಿ ಹತ್ಯೆ ಪ್ರಕರಣ (Chandrashekhar Guruji murder case) ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಗುರೂಜಿ ಹತ್ಯೆಯ ಬೆನ್ನಲ್ಲೇ ಹೋಟೆಲ್‌ ಸಿಬ್ಬಂದಿಗಳು ಭಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲೀಗ ದಿ ಪ್ರೆಸಿಡೆಂಟ್ ಹೋಟೆಲ್ ಆಡಳಿತ ಮಂಡಳಿ ದೇವರ ಮೊರೆ ಹೋಗಿದ್ದಾರೆ.

ಹುಬ್ಬಳ್ಳಿಯ ಉಣಕಲ್‌ ಕೆರೆ ಬಳಿಯಲ್ಲಿರುವ ದಿ ಪ್ರೆಸಿಡೆಂಟ್ ಹೋಟೆಲ್‌ನ ರಿಸೆಪ್ಷನ್‌ನಲ್ಲಿ ಚಂದ್ರಶೇಖರ ಗುರೂಜಿ ಅವರನ್ನು ಇಬ್ಬರು ಹಂತಕರು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಇತ್ತ ಕೊಲೆ ನಡೆದಿರುವ ಹೋಟೆಲ್‌ ಸಿಬ್ಬಂದಿ ಭಯಗೊಂಡಿದ್ದರು. ಹೀಗಾಗಿ ಆಡಳಿತ ಮಂಡಳಿ ಇದೀಗ ಹೋಟೆಲ್‌ನಲ್ಲಿ ಸುದರ್ಶನ ಹೋಮ ಸೇರಿದಂತೆ ಇತರ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಗಿದೆ.

ಗುರೂಜಿ ಕೊನೆಯುಸಿರೆಳೆದ ಸ್ಥಳದಲ್ಲೇ ಹೋಮ, ಹವನ ನಡೆಸಲಾಗಿದೆ. ಗುರೂಜಿ ಹತ್ಯೆಯಿಂದ ಸಿಬ್ಬಂದಿಯಲ್ಲಿ ತೀವ್ರ ಆತಂಕ ಹಾಗೂ ಭಯದ ವಾತಾವರಣ ನಿರ್ಮಾಣವಾಗಿತ್ತು. ಭಯ ದೂರಮಾಡಲು ಮತ್ತು ಹೋಟೆಲ್ ಶುದ್ಧಗೊಳಿಸಲು ಹುಬ್ಬಳ್ಳಿ ಖ್ಯಾತ ಪುರೋಹಿತರಿಂದ ಸುದರ್ಶನ ಹೋಮ ಮಾಡಿಸಿದ್ದಾರೆ. ಹೋಟೆಲ್ ಗೆ ಅಂಟಿದ ಕಳಂಕ ದೂರಮಾಡುವ ಹಿನ್ನೆಲೆಯಲ್ಲಿ ಇಬ್ಬರು ಪುರೋಹಿತರಿಂದ ಮಂತ್ರಘೋಷ ಮೊಳಗಿಸಿದ್ದಾರೆ‌. ಈ ಮೂಲಕ ಎಂದಿನಂತೆ ತಮ್ಮ ವ್ಯಾಪಾರ ವ್ಯವಹಾರ ನಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಮಣ್ಣಲ್ಲಿ ಮಣ್ಣಾದ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್​ ಗುರೂಜಿ

ಆಪ್ತರ ಮೋಸದಾಟಕ್ಕೆ ಬಲಿಯಾದ ವಾಸ್ತು ಶಾಸ್ತ್ರಜ್ಞ ಹಾಗೂ ಮಾನವತಾವಾದಿ ಚಂದ್ರಶೇಖರ್​ ಗುರೂಜಿ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಹುಬ್ಬಳ್ಳಿಯ ಸುಳ್ಳಾ ಗ್ರಾಮದ ಅವರ ಜಮೀನಿನಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗಿದೆ.

ಹುಬ್ಬಳ್ಳಿಯ ಸುಳ್ಳಾ ಗ್ರಾಮದಲ್ಲಿರುವ ಗುರೂಜಿಗೆ ಸೇರಿದ ಜಮೀನಿಗೆ ಪತ್ನಿ ಅಂಕಿತಾ, ಪುತ್ರಿ ಸ್ವಾತಿ ಸೇರಿದಂತೆ ಕುಟುಂಬಸ್ಥರ ದಂಡೇ ಆಗಮಿಸಿತ್ತು. ಪತಿಯ ಮುಖವನ್ನು ನೋಡಿ ಪತ್ನಿ ಅಂಕಿತಾ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ಮನಕಲಕುವಂತಿತ್ತು. ಪತ್ನಿಯ ಅಂತಿಮ ಪೂಜಾ ಕಾರ್ಯಗಳನ್ನು ನೆರವೇರಿಸಿ ಅಂಕಿತಾ ಆಕ್ರಂದನ ಮುಗಿಲು ಮುಟ್ಟಿತ್ತು. ಕುಟುಂಬಸ್ಥರು ಕೂಡ ಗುರೂಜಿಯ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದರು. ಚಂದ್ರಶೇಖರ್​ ಗುರೂಜಿಯ ಪ್ರೀತಿಯ ಶ್ವಾನ ಪ್ರಿನ್ಸ್​ ಕೂಡ ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಆಗಮಿಸಿತ್ತು. ಗುರೂಜಿ ಶವವನ್ನು ಇಡಲಾಗಿದ್ದ ಪೆಟ್ಟಿಗೆಯ ಮೇಲೆ ಮಲಗಿ ಗುರೂಜಿಗಳನ್ನೇ ದಿಟ್ಟಿಸಿದ ಶ್ವಾನ ಬಳಿಕ ಬೇಸರವಾದವರಂತೆ ಕೂತಿದ್ದ ದೃಶ್ಯ ಕೂಡ ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದೆ.

ಇದನ್ನೂ ಓದಿ : Petrol will be banned : ದೇಶದಲ್ಲಿ ಶೀಘ್ರದಲ್ಲೇ ಪೆಟ್ರೋಲ್​ಗೆ ನಿಷೇಧ : ಕೇಂದ್ರ ಸಚಿವ ನಿತಿನ್ ಗಡ್ಕರಿ ಅಚ್ಚರಿಯ ಹೇಳಿಕೆ

ಇದನ್ನೂ ಓದಿ : Exclusive : secret of Hardik Pandya’s Success : ಹಾರ್ದಿಕ್ ಪಾಂಡ್ಯ ಯಶೋಗಾಥೆಯ ಹಿಂದಿನ ಶಿಲ್ಪಿ ನಮ್ಮ ಕನ್ನಡಿಗ..!

Chandrashekhar Guruji murder case, Sudarshan Homa at The President hotel Hubli

Comments are closed.