Petrol will be banned : ದೇಶದಲ್ಲಿ ಶೀಘ್ರದಲ್ಲೇ ಪೆಟ್ರೋಲ್​ಗೆ ನಿಷೇಧ : ಸಚಿವ ಗಡ್ಕರಿ

ಮಹಾರಾಷ್ಟ್ರ : Petrol will be banned : ಪೆಟ್ರೋಲ್​ ಹಾಗೂ ಡೀಸೆಲ್​ ಸೇರಿದಂತೆ ತೈಲೋತ್ಪನ್ನಗಳ ಬೆಲೆ ದೇಶದಲ್ಲಿ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದ್ದು ಇದು ವಾಹನ ಸವಾರರ ನಿದ್ದೆಗೆಡಿಸಿದೆ. ಗಗನಕ್ಕೇರುತ್ತಿರುವ ಪೆಟ್ರೋಲ್​ನ ಬೆಲೆಯಿಂದಾಗಿ ಅನೇಕರು ಸಾರ್ವಜನಿಕ ಸಾರಿಗೆಯತ್ತ ಮುಖ ಮಾಡಿದ್ದರೆ ಇನ್ನೂ ಹಲವರು ಎಲೆಕ್ಟ್ರಿಕ್​ ಬೈಕ್​ಗಳನ್ನು ಖರೀದಿ ಮಾಡಿದ್ದಾರೆ. ಈ ಎಲ್ಲದರ ನಡುವೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ದೇಶದಲ್ಲಿ ಪೆಟ್ರೋಲ್​ ನಿಷೇಧಗೊಳಿಸುವ ಬಗ್ಗೆ ಸೂಚನೆಯನ್ನು ನೀಡಿದ್ದಾರೆ.

ಮಹಾರಾಷ್ಟ್ರದ ಅಕೋಲಾದಲ್ಲಿ ನಡೆದಿ ಡಾ. ಪಂಜಾಬ್​ರಾವ್​ ದೇಶ್​ಮುಖ್​ ಕೃಷಿ ವಿಶ್ವ ವಿದ್ಯಾಲಯದಲ್ಲಿ ನಡೆದ 36ನೇ ಘಟಿಕೋತ್ಸವದಲ್ಲಿ ಕೇಂದ್ರ ಸಚಿವ ನಿತಿನ್​ ಗಡ್ಕರಿಗೆ ಡಾಕ್ಟರ್​ ಆಫ್​ ಸೈನ್ಸ್​ ಗೌರವ ಪ್ರದಾನ ಮಾಡಲಾಯ್ತು. ಮಹಾರಾಷ್ಟ್ರ ರಾಜ್ಯಪಾಲ ಭಗತ್​ ಸಿಂಗ್​ ಕೋಶ್ಯಾರಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಗೌರವ ಡಾಕ್ಟರೇಟ್​ ಪ್ರದಾನ ಮಾಡಿದರು.

ಗೌರವ ಡಾಕ್ಟರೇಟ್​ ಪದವಿ ಸ್ವೀಕರಿಸಿದ ಬಳಿಕ ಮಾತನಾಡಿದ ಕೇಂದ್ರ ಸಚಿವ ನಿತಿನ್​ ಗಡ್ಕರಿ, ನಮ್ಮ ದೇಶದ ರೈತರು ಕೇವಲ ಅಕ್ಕಿ , ಗೋಧಿ ಹಾಗೂ ಜೋಳದ ಇಳುವರಿಯನ್ನೇ ಮಾಡುತ್ತಿದ್ದರೆ ಅವರು ಭವಿಷ್ಯದಲ್ಲಿಯೂ ಮುಂದೆ ಬರಲು ಸಾಧ್ಯವಿಲ್ಲ. ರೈತರು ಕೇವಲ ಆಹಾರ ಪೂರೈಕೆದಾರರು ಮಾತ್ರ ಆಗದೇ ಇಂಧನ ಪೂರೈಕೆದಾರರೂ ಆಗಬೇಕು ಎಂದು ಕರೆ ನೀಡಿದರು.

ಅಲ್ಲದೇ ಮಹಾರಾಷ್ಟ್ರದ ವಿದರ್ಭ ಜಿಲ್ಲೆಯಲ್ಲಿ ಜೈವಿಕ ಎಥೆನಾಲ್​ಗಳನ್ನು ತಯಾರಿಸಲಾಗುತ್ತಿದೆ. ಇದನ್ನು ವಾಹನಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಆಳವಾದ ಬಾವಿಯ ನೀರಿನಿಂದ ಹಸಿರು ಹೈಡ್ರೋಜನ್​ ತಯಾರಿಸಬಹುದು. ಇದನ್ನು ಕೆಜಿಗೆ 70 ರೂಪಾಯಿಗಳಂತೆ ಮಾರಾಟ ಕೂಡ ಮಾಡಬಹುದು. ಮುಂದಿನ ಐದು ವರ್ಷಗಳಲ್ಲಿ ಪೆಟ್ರೋಲ್​ ಖಾಲಿಯಾಗಲಿದೆ. ಹೀಗಾಗಿ ದೇಶದಲ್ಲಿ ನಾವು ಪಳೆಯುಳಿಕೆ ಇಂಧನಗಳನ್ನು ನಿಷೇಧ ಮಾಡುವ ದಿನ ಹೆಚ್ಚು ದೂರವಿಲ್ಲ ಎಂದು ಹೇಳಿದ್ದಾರೆ.

ಡಾ. ಪಂಜಾಬ್​ರಾವ್​​ ದೇಶ್​ಮುಖ್​ ಕೃಷಿ ವಿಶ್ವವಿದ್ಯಾಲಯದ 36ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಉಪಕುಲಪತಿ ಡಾ.ಮೋತಿಲಾಲ್ ಮದನ್, ಕುಲಸಚಿವ ಡಾ.ವಿಲಾಸ್ ಭಾಲೆ, ಕುಲಸಚಿವರು, ಅಧ್ಯಾಪಕರು, ಪ್ರಾಧ್ಯಾಪಕರು, ಶಿಕ್ಷಕರು ಹಾಗೂ ಪದವೀಧರ ವಿದ್ಯಾರ್ಥಿಗಳು ಕೂಡ ಹಾಜರಿದ್ದರು.

ಇದನ್ನು ಓದಿ : Boris Johnson resigns : ಬ್ರಿಟನ್​ ಪ್ರಧಾನಿ ಸ್ಥಾನಕ್ಕೆ ಬೋರಿಸ್​ ಜಾನ್ಸನ್​​ ರಾಜೀನಾಮೆ

ಇದನ್ನೂ ಓದಿ : Vikram Admitted To Hospital : ತಮಿಳು ನಟ ವಿಕ್ರಮ್​ ಆರೋಗ್ಯದಲ್ಲಿ ಹೃದಯಾಘಾತ: ಆಸ್ಪತ್ರೆಗೆ ದಾಖಲು

Nitin Gadkari’s big claim on petrol ban! Says Petrol will be banned in India in the next 5 years

Comments are closed.