ಕುಂದಾಪುರ : ಹೆಸರಾಂತ ಉದ್ಯಮಿ, ಕುಂದಾಪುರ ಚಿನ್ಮಯಿ ಆಸ್ಪತ್ರೆಯ (kudapura Chinmayi Hospital )ಮಾಲೀಕ ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಭೋಜಣ್ಣ ಅವರು ಬರೆದಿದ್ದಾರೆ ಎನ್ನಲಾಗುತ್ತಿರುವ ಡೆತ್‌ನೋಟ್ (Katte Gopalakrishna Death Note) ಪತ್ತೆಯಾಗಿದ್ದು, ಡೆತ್‌ನೋಟ್‌ನಲ್ಲಿ ಇಬ್ಬರು ಉದ್ಯಮಿಗಳ ಹೆಸರುಗಳನ್ನು ಬರೆದಿದ್ದಾರೆ. ಬಡ್ಡಿ ಆಮಿಷ ತೋರಿಸಿ ಕೋಟ್ಯಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾರೆಂದು ಬರೆದಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಪುರಾಣಿಕ ರಸ್ತೆಯ ಕುದುರೆಬೆಟ್ಟಿನಲ್ಲಿರುವ ಮೊಳಹಳ್ಳಿ ಗಣೇಶ್ ಶೆಟ್ಟಿ ಅವರ ಮನೆಯ ಸಿಟೌಟ್‌ನಲ್ಲಿ ಉದ್ಯಮಿ ಕಟ್ಟೆ ಭೋಜಣ್ಣ ತಮ್ಮ ಕೈಯಲ್ಲಿದ್ದ ಗನ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣ ಕರಾವಳಿಯಾದ್ಯಂತ ಸಂಚಲನ ಮೂಡಿಸಿತ್ತು.

ಆದ್ರೀಗ ಪ್ರಕರಣದ ತನಿಖೆಗೆ ಇಳಿದ ಪೊಲೀಸರಿಗೆ ಮಹಜರು ವೇಳೆಯಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಕುಂದಾಪುರದ ಗೋಲ್ಡ್ ಜುವೆಲ್ಲರ್ಸ್ ನ ಗಣೇಶ್ ಶೆಟ್ಟಿ ಮತ್ತು ಬ್ರೋಕರ್ ಹಂಗಳೂರು ಇಸ್ಮಾಯಿಲ್ ಅವರ ಹೆಸರನ್ನು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. 2013 ರ ಫೆಬ್ರವರಿ ತಿಂಗಳಲ್ಲಿ 3 ಕೋಟಿ 34 ಲಕ್ಷ ನಗದು ಹಾಗೂ 5 ಕೆಜಿ ಚಿನ್ನವನ್ನು ನೀಡಿದ್ದಾರೆ. ಆದರೆ ಪಡೆದ ಹಣವನ್ನಾಗಲಿ, ಬಡ್ಡಿಯನ್ನಾಗಲಿ ನೀಡಲಿಲ್ಲ. ಈ ಕುರಿತು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಸುಮ್ಮುಖದಲ್ಲಿಯೇ 6 ರಿಂದ 7 ಬಾರಿ ಪಂಚಾಯಿತಿ ನಡೆಸಲಾಗಿತ್ತು. ಅಲ್ಲದೇ ಗಣೇಶ್ ಶೆಟ್ಟಿ ಅವರು ಪಂಚಾಯಿತಿಯಲ್ಲಿ ವಾಯಿದೆ ಪಡೆದಿದ್ದರೂ ಕೂಡ ಹಣವನ್ನು ಹಿಂದಿರುಗಿಸಿಲ್ಲ.

ಚಿನ್ನ ಮತ್ತು ನಗದು ಹಾಗೂ ಬ್ಯಾಂಕ್ ಬಡ್ಡಿ ಸೇರಿ ಸುಮಾರು 9 ಕೋಟಿಗೂ ಅಧಿಕ ಆಗಿರುತ್ತದೆ. ನಾನು ಇಲ್ಲಿಯ ತನಕ ಮರ್ಯಾದೆಯಿಂದಲೇ ಬಾಳಿದವನು. ನಾನು ಹೊರಗಿನವರಿಗೆ ಹಣವನ್ನು ಕೊಡಬೇಕಾಗಿದೆ. ಬ್ಯಾಂಕಿನಲ್ಲಿ ಸಾಲ ಇದೆ. ಗಣೇಶ್ ಶೆಟ್ಟಿ ಅವರ ಮನೆಗೆ ತಿರುಗಿ ತಿರುಗಿ ಸಾಕಾಯ್ತು. ಹೀಗಾಗಿ ಮನಸ್ಸಿಗೆ ಬೇಜಾರಾಗಿ ಈ ದಿನ ಗಣೇಶ್ ಶೆಟ್ಟಿ ಅವರ ಮನೆಯಲ್ಲಿ ನಾನು ನನ್ನ ರಿವಾಲ್ವಾರ್‌ನಿಂದ ಆತ್ಮಹತ್ಯೆ ಮಾಡಿಕೊಂಡಿರುತ್ತೇನೆ. ಇಷ್ಟೇ ಅಲ್ಲಾ ಮೊಳಹಳ್ಳಿ ಗಣೇಶ್ ಶೆಟ್ಟಿ ಮತ್ತು ಹಂಗಳೂರು ಇಸ್ಮಾಯಿಲ್ ಇವರಿಂದ ಹಣವನ್ನು ರಿಕವರಿ ಮಾಡಿಸಿ ನನ್ನ ಮನೆಯವರಿಗೆ ನೀಡಬೇಕಾಗಿ ಕೇಳಿಕೊಳ್ಳುತ್ತೇನೆ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.

ಹಿಂದೆಯೇ ಆತ್ಮಹತ್ಯೆಗೆ ಪ್ಲ್ಯಾನ್ ಮಾಡಿದ್ರಾ ? ಡೆತ್‌ನೋಟ್‌ನಲ್ಲಿ ದಿನಾಂಕ ಬದಲು !
ಕುಂದಾಪುರ ಪೊಲೀಸರ ಹೆಸರಿಗೆ ಬರೆದಿರುವ ಡೆತ್‌ನೋಟ್‌ನಲ್ಲಿ ಕಟ್ಟೆ ಭೋಜಣ್ಣ ಅವರು ತನಗೆ ಆಗಿರುವ ವಂಚನೆಯನ್ನು ಉಲ್ಲೇಖಿಸಿದ್ದಾರೆ. ಅಲ್ಲದೇ ಇಬ್ಬರು ಉದ್ಯಮಿಗಳ ಹೆಸರನ್ನೂ ಬರೆದಿದ್ದಾರೆ. ಆದ್ರೆ ಡೆತ್‌ನೋಟ್ ನಲ್ಲಿ ದಿನಾಂಕವನ್ನು ತಿದ್ದಲಾಗಿದೆ. ಈ ಹಿಂದೆಯೇ ಆತ್ಮಹತ್ಯೆಗೆ ಯತ್ನಿಸಿ ನಂತರ ಮನಸ್ಸು ಬದಲಾಯಿಸಿರಬಹುದು ಎನ್ನಲಾಗುತ್ತಿದೆ. ಅಲ್ಲದೇ ಈ ಡೆತ್‌ನೋಟ್ ಬಹಳ ಹಿಂದೆಯೇ ಬರೆದಿರುವು ಕಂಡು ಬರುತ್ತಿದೆ. ಇದೀಗ ಡೆತ್‌ನೋಟ್ ಆಧಾರದಲ್ಲಿಯೇ ಕುಂದಾಪುರ ಠಾಣೆಯ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಕಟ್ಟೆ ಭೋಜಣ್ಣ ಅವರ ಹಣಕಾಸಿನ ವ್ಯವಹಾರದ ಕುರಿತು ಮಾಹಿತಿಯನ್ನು ಪಡೆಯುತ್ತಿದ್ದಾರೆ.
ಇದನ್ನೂ ಓದಿ : Sex work legal : ವೇಶ್ಯಾವಾಟಿಕೆ ಕಾನೂನು ಬದ್ಧ:ವೇಶ್ಯೆಯರಿಗೆ ಸಮಾಜದಲ್ಲಿ ಗೌರವ ಸಿಗಬೇಕು : ಸುಪ್ರೀಂ ಕೋರ್ಟ್
ಇದನ್ನೂ ಓದಿ : ಕುಂದಾಪುರ ಚಿನ್ಮಯಿ ಆಸ್ಪತ್ರೆ ಮಾಲೀಕ ಕಟ್ಟೆ ಬೋಜಣ್ಣ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
kudapura Chinmayi Hospital Owner Katte Gopalakrishna Death Note found, Suicide big Twist