Illegal Recruitment of Teachers : ರಾಜ್ಯದಲ್ಲಿ ಸಿಐಡಿ ದಾಳಿ ಅಕ್ರಮ ಶಿಕ್ಷಕರ ಬಂಧನ : ಇಂದೂ ಮುಂದುವರಿದ ಕಾರ್ಯಾಚರಣೆ

ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಅಕ್ರಮವಾಗಿ ನೇಮಕಗೊಂಡಿರುವ ಶಿಕ್ಷಕರ(Illegal Recruitment of Teachers) ಮೇಲೆ ಸಿಐಡಿ ದಾಳಿ ನಡೆಸಿದೆ. ರಾಜ್ಯದಾದ್ಯಂತ ನಡೆದ ದಾಳಿಯಲ್ಲಿ ಅಕ್ರಮವಾಗಿ ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿ ನೇಮಕಗೊಂಡಿರುವ 38 ಮಂದಿ ಶಿಕ್ಷಕರು ಹಾಗೂ ನಿರ್ದೇಶಕರನ್ನು ಸಿಐಡಿ ಅಧಿಕಾರಿಗಳು ಈಗಾಗಲೇ ವಶಕ್ಕೆ ತಗೆದುಕೊಂಡಿದ್ದಾರೆ. ಇಂದೂ ಕೂಡ ಸಿಐಡಿ ಅಧಿಕಾರಿಗಳು ಚಿತ್ರದುರ್ಗದಲ್ಲಿ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಐವರು ಶಿಕ್ಷಕರನ್ನು ಬಂಧಿಸಿದ್ದಾರೆ.

ಅಕ್ಟೋಬರ್‌ 19 ಮುಂಜಾನೆ 4 ಗಂಟೆ ವೇಳೆಯಲ್ಲಿ ಸಿಐಡಿ ಅಧಿಕಾರಿಗಳು 30 ತಂಡಗಳು ಕಾರ್ಯಾಚರಣೆ ನಡೆಸಿದೆ. ಎಸ್‌ಪಿ ರಮೇಶ್‌ ಬಾನೋತ್‌ ನೇತೃತ್ವದಲ್ಲಿ ಒಟ್ಟು 100 ಕ್ಕೂ ಹೆಚ್ಚಿನ ಅಧಿಕಾರಿಗಳು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ , ಕೋಲಾರ, ಕೆಜಿಎಫ್‌, ತುಮಕೂರು, ಚಿತ್ರದುರ್ಗ, ಚಳ್ಳಕೆರೆ ಸೇರಿದಂತೆ ವಿವಿಧೆಡೆ ಸಿಐಡಿ ಅಧಿಕಾರಿಗಳು ದಾಳಿ ಮಾಡಿ ಅಕ್ರಮವಾಗಿ ನೇಮಕಗೊಂಡ ಶಿಕ್ಷಕರನ್ನು ಬಂಧಿಸಿದ್ದಾರೆ. ಇಂದು ಚಿತ್ರದುರ್ಗದಲ್ಲಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಬಂಧಿತ ಶಿಕ್ಷಕರು ಹಾಗೂ ಅಧಿಕಾರಿಗಳ ವಿಚಾರಣೆಗೆ ವೇಳೆಯಲ್ಲಿ ಇನ್ನಷ್ಟು ಮಂದಿ ಅಕ್ರಮದಲ್ಲಿ ಭಾಗಿಯಾಗಿರುವ ವಿಚಾರವನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಅಕ್ರಮ ಶಿಕ್ಷಕರ ನೇಮಕಾತಿ ಹಿನ್ನಲೆ:

2012-13 ಹಾಗೂ 2014-15ರ ವೇಳೆಯಲ್ಲಿ ಅಕ್ರಮವಾಗಿ ಶಿಕ್ಷಕರ ನೇಮಕಾತಿ(Illegal Recruitment of Teachers) ನಡೆದಿದೆ. ಇದು ನಡೆದಿರುವುದು ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ. ಈ ಅಕ್ರಮ ನೇಮಕಾತಿಯ ಬಗ್ಗೆ ವಿಧಾನಸೌಧ ಮತ್ತು ಹಲಸೂರು ಗೇಟ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 420, 465, 768, 471ರ ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ರಾಜ್ಯದಲ್ಲಿ ಅತೀ ದೊಡ್ಡ ಅಕ್ರಮ ನೇಮಕಾತಿ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ರಾಜ್ಯ ಸರಕಾರ ಸಿಐಡಿ ತನಿಖೆಗೆ ವಹಿಸಿತ್ತು.

2012-13 ಹಾಗೂ 2014-15ರ ಅವಧಿಯ ನೇಮಕಾತಿಯಲ್ಲಿ ಅಕ್ರಮವಾಗಿ ನೂರಾರು ಮಂದಿ ಶಿಕ್ಷಕರು ನೇಮಕಗೊಂಡಿದ್ದರು. ಈ ನೇಮಕಾತಿಯಲ್ಲಿ ಡಿಡಿಪಿಐ ಹಾಗೂ ಜಂಟಿ ನಿರ್ದೇಶಕರು ಶಿಕ್ಷಕರ ಅಕ್ರಮ ನೇಮಕಾತಿಗೆ ಸಹಕಾರ ನೀಡಿದ್ದರು. ಸಿಐಡಿ ತನಿಖೆ ವೇಳೆಯಲ್ಲಿ ಡಿಡಿಪಿಐ ಹಾಗೂ ಜಂಟಿ ನಿರ್ದೇಶಕರು ಪ್ರತಿಯೊಬ್ಬ ಶಿಕ್ಷಕರಿಂದಲೂ 20 ರಿಂದ 25 ಲಕ್ಷ ರೂಪಾಯಿ ಲಂಚ ತೆಗೆದುಕೊಂಡು ನೇಮಕಾತಿ ಮಾಡಿರುವುದು ಬೆಳಕಿಗೆ ಬಂದಿತ್ತು.

ಇದನ್ನೂ ಓದಿ : Sonia Visit Kharge House: ಗೆಲುವಿನ ಬಳಿಕ ಖರ್ಗೆ ನಿವಾಸಕ್ಕೆ ಬಂದು ಶುಭ ಕೋರಿದ ಸೋನಿಯಾ.. ಕಾಂಗ್ರೆಸ್ ಅಧಿನಾಯಕಿ  ಕೊಟ್ಟ ಸಂದೇಶವೇನು..?

ಇದನ್ನೂ ಓದಿ : Shashi Tharoor : ಸೋತರೂ ಹೃದಯ ಗೆದ್ದ ಶಶಿ ತರೂರ್.. ಅಮಾನ್ಯಗೊಂಡ ಬ್ಯಾಲೆಟ್ ಪೇಪರ್ ನಲ್ಲಿ ಏನಿತ್ತು..?

ಇದನ್ನೂ ಓದಿ : Congress President Poll Results 2022:ಎಐಸಿಸಿ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಜಯಭೇರಿ

ಪ್ರಕರಣದಲ್ಲಿ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ಈಗಾಗಲೇ ಅಕ್ರಮವಾಗಿ ನೇಮಕಗೊಂಡು ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಹಾಗೂ ಅವರಿಗೆ ಸಹಾಯ ನೀಡಿದ ಆರೋಪದ ಮೇಲೆ ನಿರ್ದೇಶಕರನ್ನು ಕೂಡ ಬಂಧಿಸಿದ್ದಾರೆ. ಈ ಪ್ರಕರಣದ ವಿಚಾರಣೆಯಲ್ಲಿ ಇನ್ನೂ ಹಲವಾರು ಮಂದಿ ಶಿಕ್ಷಕರು ಅಕ್ರಮವಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ ಎನ್ನುವುದು ಕೂಡ ಬೆಳಕಿಗೆ ಬಂದಿದೆ. ಆರೋಪಿಗಳ ಪತ್ತೆಗಾಗಿ 18 ಮಂದಿ ಡಿವೈಎಸ್ಪಿ ಹಾಗೂ 14 ಮಂದಿ ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ವಿಶೇಷವಾಗಿ 30 ತಂಡವನ್ನ ರಚಿಸಿಕೊಂಡು ದಾಳಿಯನ್ನು ನಡೆಸಲಾಗಿದೆ.

CID raids arrest illegal teachers in the state: Operation continues today

Comments are closed.