Diabetes : ಡಯಾಬಿಟೀಸ್‌ ನಿಯಂತ್ರಣದಲ್ಲಿ ತರಕಾರಿಗಳ ಮಹತ್ವ: ಈ 5 ತರಕಾರಿಗಳು ನಿಮ್ಮನ್ನು ಡಯಾಬಿಟೀಸ್‌ನಿಂದ ಕಾಪಾಡಬಲ್ಲದು

ಡಯಾಬಿಟೀಸ್‌ (Diabetes) ಇದ್ದವರಿಗೆ ಈ ಗೊಂದಲ ಇದ್ದೇ ಇರುತ್ತದೆ; ಯಾವ ತರಕಾರಿ ತಿನ್ನಬೇಕು, ಯಾವುದನ್ನು ತಿನ್ನಬಾರದು ಎಂದು. ಕೆಲವು ತರಕಾರಿಗಳು (Vegetables) ರಕ್ತದಲ್ಲಿ ಸಕ್ಕರೆಯ ಪ್ರಮಾಣ (Blood Sugar Levels) ಹೆಚ್ಚಿಸಿದರೆ, ಇನ್ನು ಕೆಲವು ಕಡಿಮೆ ಮಾಡುತ್ತದೆ. ಡಯಾಬಿಟೀಸ್‌ ಜಗತ್ತಿನಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಿರುವ ಒಂದು ರೋಗ. ಡಯಾಬಿಟೀಸ್‌ ಇನ್ಸುಲಿನ್‌ ಮಟ್ಟದಿಂದ ಹೆಚ್ಚು ಪರಿಣಾಮ ಬೀರುತ್ತದೆ. ಮೇದೋಜ್ಜೀರಕ ಗ್ರಂಥಿಯಿಂದ ಉತ್ಪತ್ತಿಯಾಗುವ ಹಾರ್ಮೋನ್‌ ಆಹಾರದಿಂದ ಪಡೆದ ಗ್ಲುಕೋಸ್‌ ಅನ್ನು ಶಕ್ತಿಯಾಗಿ ಪರಿವರ್ತಿಸಿ ನಮ್ಮ ಜೀವಕೋಶಗಳಿಗೆ ಸಾಗಿಸತ್ತದೆ. ಡಯಾಬಿಟೀಸ್‌ ನಮ್ಮ ದೇಹಕ್ಕೆ ಸಾಕಾಗುವಷ್ಟು ಇನ್ಸುಲಿನ್‌ ಅನ್ನು ಉತ್ಪಾದಿಸುವು ಸಾಮರ್ಥ್ಯಕ್ಕೆ ಅಡ್ಡಿಪಡಿಸುತ್ತದೆ. ಇದರಿಂದ ಗ್ಲೂಕೋಸ್‌ ರಕ್ತದಲ್ಲೇ ಉಳಿಯುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ, ಡಯಾಬಿಟೀಸ್‌ ಪ್ರಪಂಚದಾದ್ಯಂತ 422 ಮಿಲಿಯನ್‌ ಜನರ ಮೇಲೆ ಪರಿಣಾಮ ಬೀರುತ್ತಿದೆ. ಇದು ವಾರ್ಷಿಕವಾಗಿ 1.6 ಮಿಲಿಯನ್‌ ಜೀವ ಹಾನಿಗೆ ದಾರಿಯಾಗಿದೆ. ಡಯಾಬಿಟೀಸ್‌ ಅನ್ನು ಆರಂಭದಲ್ಲೇ ಗುರುತಿಸಿ ಸೂಕ್ತ ಚಿಕತ್ಸೆ ಪಡದುಕೊಳ್ಳುವುದು ಉತ್ತಮ. ದಿನನಿತ್ಯದ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದಲೂ ಇದನ್ನು ಸಮರ್ಪಕವಾಗಿ ನಿಯಂತ್ರಣದಲ್ಲಿಡಬಹುದು. ಕೆಲವು ಹಸಿರು ತರಕಾರಿಗಳು ಡಯಾಬಿಟೀಸ್‌ ನಿಯಂತ್ರಿಸಲು ಸಹಾಯ ಮಾಡುತ್ತವೆ.

ಡಯಾಬಿಟೀಸ್‌ ನಿಯಂತ್ರಣದಲ್ಲಿಡಲು ಸಹಾಯ ಮಾಡುವ 5 ತರಕಾರಿಗಳು :

ಸೌತೆಕಾಯಿ :
ಎಲ್ಲರೂ ಇಷ್ಟಪಡುವ ಸೌತೆಕಾಯಿ ನಿಮ್ಮ ಡಯಾಬಿಟೀಸ್‌ ಅನ್ನು ನಿಯಂತ್ರಣದಲ್ಲಿಡಲು ಸಹಾಯಮಾಡುತ್ತದೆ. ಇದರಲ್ಲಿ ನೀರಿನಂಶ ಅಧಿಕವಾಗಿರುತ್ತದೆ. ಇದರಿಂದ ನಿಮಗೆ ಬೇಗನೆ ಹೊಟ್ಟೆತುಂಬಿದ ಅನುಭವ ನೀಡುವುದರ ಜೊತೆಗೆ ನಿಮ್ಮನ್ನು ಹೈಡ್ರೇಟ್‌ ಆಗಿರಿಸುತ್ತದೆ. ಮೇದೋಜ್ಜೀರಕ ಗ್ರಂಥಿಯ ಬೀಟಾ ಕೋಶಗಳಿಂದ ಉತ್ಪತ್ತಿಯಾಗುವ ಇನ್ಸುಲಿನ್‌ ಹಾರ್ಮೋನ್‌ಗೆ ಇದು ಸಹಾಯಮಾಡುತ್ತದೆ. ಇದಲ್ಲದೇ ಸೌತೆಕಾಯಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಮತ್ತು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಹಾಗಲಕಾಯಿ :
ಇದರ ಕಹಿ ಗುಣದಿಂದಾಗಿ ಬಹಳಷ್ಟು ಜನರಿಗೆ ಇದು ಇಷ್ಟವೇ ಆಗುವುದಿಲ್ಲ. ಆದರೆ ಹಾಗಲಕಾಯಿ ಡಯಾಬಿಟೀಸ್‌ಗೆ ರಾಮಬಾಣ. ಸಂಶೋಧನೆಯ ಪ್ರಕಾರ ಹಾಗಲಕಾಯಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಇದು ಪಾಲಿಪೆಪ್ಟೈಡ್‌ – ಪಿ (ಇನ್ಸುಲಿನ ಪಿ) ಎಂಬ ವಸ್ತುವನ್ನು ಹೊಂದಿದೆ. ಈ ವಸ್ತು ಇನ್ಸುಲಿನ್‌ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಬೀನ್ಸ್‌ :
ಫಲಾವ್‌ನಿಂದ ಹಿಡಿದು ಪಲ್ಯ, ಸಾಗು ಎಲ್ಲದರಲ್ಲೂ ಬಳಕೆಯಾಗುವ ಬೀನ್ಸ್ ಸುಲಭವಾಗಿ ಕರಗುವ ಫೈಬರ್‌ ಮತ್ತು ಪ್ರೋಟೀನ್‌ ಹೊಂದಿದೆ. ಇದು ಹಸಿವನ್ನು ನಿಯಂತ್ರಿಸಿ ತೂಕ ಇಳಕೆಗೂ ಸಹಾಯ ಮಾಡುತ್ತದೆ. ಇದು ಡಯಾಬಿಟೀಸ್‌ ಇರುವವರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುಲು ಸಹಾಯ ಮಾಡುತ್ತದೆ.

ಕಾಲಿಫ್ಲಾವರ್ :
ಕಾಲಿಫ್ಲಾವರ್‌ ಅಥವಾ ಹೂಕೋಸು ತಿನ್ನುವುದರಿಂದಲೂ ಡಯಾಬಿಟೀಸ್‌ ನಿಯಂತ್ರಣದಲ್ಲಿಡಬಹುದು ಎಂದರೆ ಆಶ್ಚರ್ಯವಾಗುತ್ತದೆಯಲ್ಲವೇ? ಇದು ಕಡಿಮೆ ಕ್ಯಾಲೋರಿಯನ್ನು ಹೊಂದಿದೆ. ಫೈಬರ್, ವಿಟಮಿನ್ ಸಿ ಮತ್ತು ಫೋಲೇಟ್‌ಗಳಿಂದ ಸಮೃದ್ಧಿಯಾಗಿರುವ ಕಾಲಿಫ್ಲಾವರ್‌ ಉತ್ತಮ ಪ್ರಮಾಣದ ಫೈಬರ್‌ ಅನ್ನು ಹೊಂದಿದೆ. ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡವನ್ನು ಕಡಿಮೆ ಮಾಡುತ್ತದೆ. ರಕ್ತದಲ್ಲಿ ಸಕ್ಕರೆ ಹೆಚ್ಚಾಗುವುದನ್ನು ಕಡಿಮೆ ಮಾಡುತ್ತದೆ.

ಬ್ರೊಕೊಲಿ :
ಇದು ವಿಟಮಿನ್‌ ಮತ್ತು ಖನಿಜಗಳ ಆಗರ. ಬ್ರೊಕೊಲಿಯಲ್ಲಿ ಕ್ಯಾಲ್ಸಿಯಂ, ಸೆಲೆನಿಯಮ್, ಮೆಗ್ನೀಸಿಯಮ್, ಫೈಬರ್, ಪ್ರೊಟೀನ್, ಕಬ್ಬಿಣ ಮತ್ತು ವಿಟಮಿನ್ ಸಿ ಗಳು ಹೇರಳವಾಗಿರುತ್ತದೆ. ಇದರಲ್ಲಿರುವ ಸಲ್ಫೊರಾಫೇನ್‌ ಎಂಬ ವಸ್ತುವು ಕ್ಯಾನ್ಸರ್‌ ವಿರೋಧಿ ಗುಣವನ್ನು ಹೊಂದಿದೆ ಮತ್ತು ಯಕೃತ್ತಿನ ಗ್ಲೂಕೋಸ್ ಉತ್ಪಾದನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪರಿಣಾಮವಾಗಿ ರಕ್ತದಲ್ಲಿನ ಗ್ಲೂಕೋಸ್‌ ಮಟ್ಟವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ : Millets : ಚಳಿಗಾಲಕ್ಕೆ ಸಿರಿಧಾನ್ಯಗಳೇ ಬೆಸ್ಟ್‌ : ಹೇಗೆ ಅಂತೀರಾ…

ಇದನ್ನೂ ಓದಿ : Sprouted Seeds : ನಿಮಗೆ ಪ್ರೊಟೀನ್‌ ಅಗತ್ಯವಿದೆಯೇ; ಹಾಗಾದರೆ ಮೊಳಕೆಯೊಡೆದ ಕಾಳು ತಿನ್ನಿ

(Diabetes 5 green vegetables help to reduce blood sugar)

Comments are closed.