banana shawige :ಥಟ್​ ಅಂತಾ ರೆಡಿಯಾಗುತ್ತೆ ಬಾಳೆಹಣ್ಣಿನ ಶ್ಯಾವಿಗೆ

banana shawige: ಶ್ಯಾವಿಗೆ ಅಥವಾ ಸೇಮಿಗೆ ಅನ್ನೋದು ಕರಾವಳಿ ಹಾಗೂ ಮಲೆನಾಡು ಭಾಗದ ಸಾಂಪ್ರದಾಯಿಕ ತಿಂಡಿಗಳಲ್ಲಿ ಒಂದು.ಸಾವಿಗೆ ಪಾಯಸಗಳಲ್ಲಿ ಬಳಸುವ ಸಾವಿಗೆ ಒಂದು ಬಗೆಯಾದರೆ ಅಕ್ಕಿ ಹಿಟ್ಟಿನಿಂದ ಶ್ಯಾವಿಗೆ ತಯಾರಿಸಿ ಅದಕ್ಕೆ ಕಾಯಿ ಹಾಲನ್ನು ಹಾಕಿ ಸವಿಯುವ ಮತ್ತೊಂದು ಬಗೆಯ ತಿಂಡಿಯೇ ಬೇರೆ. ಈ ತಿಂಡಿಯ ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿರುತ್ತದೆ. ಆದರೆ ಎಂದಾದರೂ ನೀವು ಬಾಳೆಹಣ್ಣಿನಿಂದ ಸೇಮಿಗೆಯನ್ನು ತಯಾರಿಸಿ ತಿಂದಿದ್ದೀರೇ..? ಇಲ್ಲ ಎಂದಾದಲ್ಲಿ ಇಲ್ಲೊಂದು ಅದ್ಭುತವಾದ ಹಾಗೂ ಅಷ್ಟೇ ರುಚಿಕರವಾದ, ಸರಳ ರೆಸಿಪಿ ಇದೆ.


ಈಗಂತೂ ನವರಾತ್ರಿ ಹಬ್ಬ ನಡೆಯುತ್ತಿದೆ, ಮನೆಯಲ್ಲಿ ದಿನಕ್ಕೊಂದು ಬಗೆಯ ತಿನಿಸುಗಳನ್ನು ತಯಾರಿಸುತ್ತಾರೆ. ಹೀಗಾಗಿ ನೀವು ಈ ಬಾರಿ ಪ್ರತಿಬಾರಿ ಮಾಡುವ ಅಕ್ಕಿ ಹಿಟ್ಟಿನ ಶಾವಿಗೆಗೆ ಸ್ವಲ್ಪ ಟ್ವಿಸ್ಟ್​ ನೀಡಿ ಬಾಳೆ ಹಣ್ಣಿನ ಸೇಮಿಗೆಯನ್ನು ಥಟ್​ ಅಂತಾ ತಯಾರಿಸಬಹುದಾಗಿದೆ.


ಬೇಕಾಗುವ ಸಾಮಗ್ರಿಗಳು :
ಬಾಳೆಹಣ್ಣು ; 4, ಅಕ್ಕಿ ಹಿಟ್ಟು : 1ಕಪ್​, ನೀರು : 1ಕಪ್​, ಬಾಳೆ ಎಲೆ , ಉಪ್ಪು ರುಚಿಗೆ ತಕ್ಕಷ್ಟು, ತೆಂಗಿನ ತುರಿ : ಸ್ವಲ್ಪ


ಮಾಡುವ ವಿಧಾನ:
ಚೆನ್ನಾಗಿ ಬಲಿತ ಬಾಳೆಹಣ್ಣನ್ನು ಇಡ್ಲಿ ಪಾತ್ರೆಯಲ್ಲಿಟ್ಟು ಒಂದೆರಡು ನಿಮಿಷ ಚೆನ್ನಾಗಿ ಬೇಯಿಸಿಕೊಳ್ಳಿ. ಇದಾದ ಬಳಿಕ ಈ ಬಾಳೆಹಣ್ಣು ತಣ್ಣಗಾಗುವವರೆಗೂ ಹಾಗೆಯೇ ಇಡಿ. ಈ ಬಾಳೆಹಣ್ಣು ತಣ್ಣಗಾದ ಬಳಿಕ ಅದರ ಸಿಪ್ಪೆ ಸುಲಿದು ಬಾಳೆಹಣ್ಣನ್ನು ಕೈನಿಂದ ಸ್ಮ್ಯಾಶ್​ ಮಾಡಿಕೊಳ್ಳಿ, ಈ ಮಿಶ್ರಣಕ್ಕೆ ಅಕ್ಕಿ ಹಿಟ್ಟನ್ನು ಸೇರಿಸಿ. ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನೂ ಹಾಕಿ. ಇದನ್ನು ಸೇವಿಗೆ ಮಾಡುವ ಹದಕ್ಕೆ ತಂದುಕೊಳ್ಳಿ, ಈ ಹಿಟ್ಟನ್ನು ಹದಕ್ಕೆ ತರಲು ನೀವು ನೀರನ್ನು ಬಳಸಬಹುದು.


ಚಪಾತಿ ಹಿಟ್ಟಿನ ಹದಕ್ಕೆ ಬರುತ್ತಿದ್ದಂತೆಯೇ ಈ ಹಿಟ್ಟಿನ ಉಂಡೆಯನ್ನು ಶ್ಯಾಮಿಗೆ ಮಾಡುವ ಸಾಧನದ ಒಳಗೆ ಹಾಕಿ . ಶಾವಿಗೆಯನ್ನು ಚಿಕ್ಕದಾಗಿ ತುಂಡು ಮಾಡಿಕೊಂಡ ಬಾಳೆ ಎಲೆಯ ಮೇಲೆ ಒತ್ತಿರಿ. ಆಮೇಲೆ ಕಾಯಿ ತುರಿಯನ್ನು ಸಿಂಪಡಿಸಿ.ಮತ್ತೊಂದು ಎಳೆಯಲ್ಲಿ ಶಾವಿಗೆಯನ್ನು ಒತ್ತಿರಿ. ಬಳಿಕ ಈ ಬಾಳೆಎಲೆಯನ್ನು ಇಡ್ಲಿ ಪಾತ್ರೆಯಲ್ಲಿ ಇಡಿ. ಶಾವಿಗೆ ಬೆಂದ ತಕ್ಷಣ ಇದನ್ನು ಸವಿಯಲು ನೀಡಿ.

ಇದನ್ನು ಓದಿ : CM Ibrahim :‘ಹಾಳೂರಿಗೆ ಉಳಿದೋನೇ ಗೌಡ’:ಖರ್ಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಬಗ್ಗೆ ಸಿಎಂ ಇಬ್ರಾಹಿಂ ವ್ಯಂಗ್ಯ

ಇದನ್ನೂ ಓದಿ : Dhoni vs Gambhir : ಧೋನಿ “ಓರಿಯೊ” ಅಂದ್ರೆ, ನಮ್ಮನೆ ನಾಯಿ ಓರಿಯೊ ಅಂದ್ರಲ್ಲಾ ಗಂಭೀರ್.. ಹೊಟ್ಟೆಕಿಚ್ಚಿನ ಮೊಟ್ಟೆಕೋಳಿಗೆ ಧೋನಿ ಮೇಲೇಕೆ ಇಷ್ಟೊಂದು ಕಿಚ್ಚು?

How to make banana shawige

Comments are closed.