ಗಣೇಶ ವಿಸರ್ಜನೆಯ ವೇಳೆ ವಿದ್ಯಾರ್ಥಿಯ ಬರ್ಬರ ಕೊಲೆ : 4 ವಿದ್ಯಾರ್ಥಿಗಳು ಅರೆಸ್ಟ್‌

ಬೆಳಗಾವಿ : (College Student Murderd) ಗಣೇಶಮೂರ್ತಿ ವಿಸರ್ಜನೆಯ ಮೆರವಣಿಗೆ (Ganeshothsava Procession) ವೇಳೆಯಲ್ಲಿ ಎರಡು ಗುಂಪುಗಳ ನಡುವೆ ಆರಂಭವಾದ ಜಗಳ ವಿದ್ಯಾರ್ಥಿ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಳಗಾವಿ ಜಿಲ್ಲೆಯ ಯರಹಟ್ಟಿ (Belagavi Yaragatti)ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ನಡೆದಿದೆ. ವಿದ್ಯಾರ್ಥಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅರ್ಜುನ್‌ ಗೌಡ ಪಾಟೀಲ (20 ವರ್ಷ) ಎಂಬಾತನೇ ಕೊಲೆಯಾಗಿರುವ ವಿದ್ಯಾರ್ಥಿಯಾಗಿದ್ದಾನೆ. ಇನ್ನು ವಿದ್ಯಾರ್ಥಿಗಳಾದ ಉದಯ ಭಂಡ್ರೊಲ್ಲಿ ( 21 ವರ್ಷ), ಸುಭಾಷ ಸೋಲಣ್ಣವರ (21 ವರ್ಷ), ವಿಠಲ ಮೀಶಿ ( 20 ವರ್ಷ) ಹಾಗೂ ಮತ್ತೋರ್ವ ಬಾಲಾಪರಾಧಿಕಯನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮದಲ್ಲಿ ಈ ಬಾರಿ ಅದ್ದೂರಿಯಾಗಿ ಗಣೇಶೋತ್ಸವವನ್ನು ಆಚರಿಸಲಾಗಿತ್ತು. 11 ದಿನಗಳ ಆಚರಣೆಯ ಬಳಿಕ ಶನಿವಾರ ವಿಸರ್ಜನಾ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಈ ವೇಳೆಯಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ಆರಂಭಗೊಂಡಿತ್ತು. ಗಲಾಟೆ ವಿಕೋಪಕ್ಕೆ ತಿರುಗಿ ಅರ್ಜುನ್‌ ಗೌಡ ಪಾಟೀಲ್‌ಗೆ ಯುವಕರ ತಂಡ ಚಾಕುವಿನಿಂದ ಇರಿದಿದೆ. ಘಟನೆಯಲ್ಲಿ ಅರ್ಜುನ್‌ ಗೌಡ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಅರ್ಜುನ್‌ ಗೌಡ ಸಾವನ್ನಪ್ಪಿದ್ದಾನೆ.

ಇನ್ನು ಘಟನೆಯ ಬೆನ್ನಲ್ಲೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಘಟನೆಯ ಮಾಹಿತಿ ಪಡೆದ ಪೊಲೀಸರು ಬಾಲ ಆರೋಪಿ ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ. ಎಲ್ಲರೂ ಕೂಡ ಕಾಲೇಜು ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ವೈಯಕ್ತಿಕ ದ್ವೇಷದ ಕಾರಣಕ್ಕೆ ಈ ಹತ್ಯೆ ನಡೆದಿದೆ ಎನ್ನಲಾಗುತ್ತಿದೆ. ಈ ಕುರಿತು ಯರಹಟ್ಟಿ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು ತನಿಖೆಯನ್ನು ನಡೆಸುತ್ತಿದ್ದಾರೆ.

ಗಣಪತಿ ವಿಸರ್ಜನೆ ವೇಳೆ ದುರಂತ : ಆರು ಮಂದಿ ಸಾವು

ಹರಿಯಾಣದ ಮಹೇಂದರ್​ಗಢ ಹಾಗೂ ಸೋನಿಪತ್​ ಜಿಲ್ಲೆಗಳಲ್ಲಿ ಶುಕ್ರವಾರ ಸಂಜೆ ಸುಮಾರಿಗೆ ಗಣೇಶ ಮೂರ್ತಿಯನ್ನು ವಿಸರ್ಜಿಸುವ ಸಂದರ್ಭದಲ್ಲಿ ಎರಡು ಪ್ರತ್ಯೇಕ ದುರಂತಗಳು ಸಂಭವಿಸಿದೆ. ಮಹೇಂದರಗಢ ಕಾಲುವೆಯಲ್ಲಿ ನಾಲ್ವರು ಯುವಕರು ಹಾಗೂ ಸೋನಿಪತ್​​ನಲ್ಲಿ ಯಮುನಾ ನದಿಯಲ್ಲಿ ಇಬ್ಬರು ಜಲಸಮಾಧಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜಗದೋಳಿ ಎಂಬ ಗ್ರಾಮದ 20ಕ್ಕೂ ಅಧಿಕ ಮಂದಿ ಗಣೇಶ ವಿಸರ್ಜನೆಗೆ ತೆರಳಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ನೀರುಪಾಲಾಗುತ್ತಿದ್ದ ನಾಲ್ವರು ಬಾಲಕರನ್ನು ರಕ್ಷಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗಣೇಶ ಮೂರ್ತಿಯನ್ನು ವಿಸರ್ಜಿಸಬೇಕೆಂದು ಮಹೇಂದ್ರಗಢದ ಜಗದೊಳಿ ಗ್ರಾಮದ ಬಳಿ ಕಾಲುವೆಗೆ ಸುಮಾರು 20-22 ಮಂದಿ ತೆರಳಿದ್ದರು. ಈ ವೇಳೆ ಅನೇಕರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸಧ್ಯ ನಾಲ್ವರು ಬಾಲಕರು ಪ್ರಾಣ ಕಳೆದುಕೊಂಡಿದ್ದು ನಾಲ್ಕು ಮಂದಿಯನ್ನು ಪ್ರಾಣಾಪಾಯಾದಿಂದ ಪಾರು ಮಾಡಲಾಗಿದೆ ಎಂದು ಮಹೇಂದ್ರಗಢದ ಡಿಸಿ ಜೆ.ಕೆ ಅಬೀರ್​ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : painting a kitten with tiger paint : ಬೆಕ್ಕಿನ‌ ಮರಿಗೆ ಹುಲಿ ಬಣ್ಣ ಬಳಿದು ವಂಚನೆಗೆ ಯತ್ನ: ಖತರ್ನಾಕ್ ಯುವಕ‌ ಅಂದರ್

ಇದನ್ನೂ ಓದಿ : grandson who killed his grandfather :ಆಸ್ತಿ ಆಸೆಗಾಗಿ ತಾತನನ್ನೇ ಕೊಂದ ಪಾಪಿ ಮೊಮ್ಮಗ ಅಂದರ್​​

College Student Murderd Druing Ganeshothsava Procession Belagavi Yaragatti

Comments are closed.