Mysore Dasara 2022: ಈ ಬಾರಿ ಅದ್ದೂರಿ ನಾಡಹಬ್ಬ, ದಸರಾ ಉದ್ಘಾಟಿಸಲಿದ್ದಾರೆ ರಾಷ್ಟ್ರಪತಿ ದ್ರೌಪದಿ ಮುರ್ಮು

ಮೈಸೂರು : (Mysore Dasara 2022)ಕಳೆದ ಎರಡು ವರ್ಷಗಳಿಂದಲೂ ಕಳೆಗುಂದಿದ್ದ ನಾಡಹಬ್ಬ ದಸರಾ ಈ ಬಾರಿ ಅದ್ದೂರಿಯಾಗಿ ನಡೆಯಲಿದೆ. ಈಗಾಗಲೇ ದಸರಾ ಹಬ್ಬಕ್ಕಾಗಿ ಸಿದ್ದತೆಗಳು ಆರಂಭಗೊಂಡಿವೆ. ಈ ನಡುವಲ್ಲೇ ಈ ಬಾರಿಯ ದಸರಾವನ್ನು(President Draupadi Murmu) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಲಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ (Karnataka cm basavaraj bommai) ಅವರು ಅಧಿಕೃತ ಮಾಹಿತಿ ನೀಡಿದ್ದಾರೆ.

(Mysore Dasara 2022)ಕೋವಿಡ್‌ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದಲೂ ನಾಡಹಬ್ಬವನ್ನು ಸರಳವಾಗಿ ಆಚರಿಸಲಾಗಿತ್ತು. ಆದ್ರೆ ಈ ಬಾರಿ ಅದ್ದೂರಿಯಾಗಿ ದಸರಾ ಆಚರಿಸಲು ರಾಜ್ಯ ಸರಕಾರ ಸಜ್ಜಾಗಿದೆ. ಅಲ್ಲದೇ ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಈ ಬಾರಿ ದಸರಾ ಹಬ್ಬದ ವಸ್ತು ಪ್ರದರ್ಶನಕ್ಕೆ ೧೫ ದಿನಗಳ ಮೊದಲೇ ಒಪ್ಪಿಗೆಯನ್ನು ಸೂಚಿಸಿದೆ.

ಸ್ಪೆಪೆಂಬರ್‌ 26ರಿಂದ ದಸರಾ ಆರಂಭಗೊಳ್ಳಲಿದ್ದು, ಅಕ್ಟೋಬರ್‌ 5ರ ವರೆಗೆ ನಡೆಯಲಿದೆ. ಈ ಬಾರಿ ದಸರಾ ಉದ್ಘಾಟನೆ ಯಾರು ಮಾಡುತ್ತಾರೆ ಅನ್ನೋ ಕುರಿತು ಸಾಕಷ್ಟು ಚರ್ಚೆಗಳು ನಡೆದಿದ್ದವು. ಅಂತಿಮವಾಗಿ (President Draupadi Murmu) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಉದ್ಘಾಟಕರಾಗಿ ಆಯ್ಕೆ ಮಾಡಲಾಗಿದೆ. ಅಲ್ಲದೇ ರಾಷ್ಟ್ರಪತಿಗಳು ದಸರಾ ಉದ್ಘಾಟನೆಗೆ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ.

ಇದನ್ನೂ ಓದಿ: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2022 ಕ್ಕೆ ದಿನ ಗಣನೆ: ನಾಡಿಗೆ ಬಂದು ತೂಕ ಹೆಚ್ಚಿಸಿಕೊಂಡ ಗಜಪಡೆ

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ಅವರ ನೇತೃತ್ವದಲ್ಲಿ ದಸರಾ ಸಮಿತಿಯನ್ನು ರಚಿಸಲಾಗಿದೆ. ಅದ್ದೂರಿ ದಸರಾ ಹಿನ್ನೆಲೆಯಲ್ಲಿ ಈ ಬಾರಿ ಸಾರ್ವಜನಿಕರಿಗೆ ದಸರಾ ವೀಕ್ಷಣೆಗೆ ಮುಕ್ತ ಅವಕಾಶವನ್ನು ನೀಡಲಾಗುತ್ತದೆ. ಹೀಗಾಗಿ ಲಕ್ಷಾಂತರ ಮಂದಿ ದಸರಾ ವೀಕ್ಷಣೆ ಮಾಡುವ ಸಾಧ್ಯತೆಯಿದೆ. ಇನ್ನು ವಸ್ತು ಪ್ರದರ್ಶನವನ್ನು ಕೂಡ ವಿಭಿನ್ನವಾಗಿ ಆಯೋಜಿಸಲು ಸಿದ್ದತೆ ನಡೆದಿದೆ. ಗಜಪಡೆ ಈಗಾಗಲೇ ದಸರಾದಲ್ಲಿ ಭಾಗಿಯಾಗಲು ಸಿದ್ದತೆಯನ್ನು ನಡೆಸುತ್ತಿದೆ.

ಮೈಸೂರು ದಸರಾ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರಾಷ್ಟ್ರಪತಿಗಳಿಂದ ದಸರಾ ಉದ್ಘಾಟನೆಯನ್ನು ಮಾಡಲಾಗುತ್ತಿದೆ. ಮೈಸೂರಿನಲ್ಲಿ ಮಾತ್ರವಲ್ಲದೇ ಶ್ರೀರಂಗಪಟ್ಟಣ ಹಾಗೂ ಚಾಮರಾಜನಗರದಲ್ಲಿಯೂ ದಸರಾ ಆಚರಣೆಯನ್ನು ಮಾಡಲು ಈ ಬಾರಿ ತೀರ್ಮಾನ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಪ್ರವೀಣ್ ನೆಟ್ಟಾರ್ ಪತ್ನಿಗೆ ಸರ್ಕಾರಿ ಉದ್ಯೋಗ: ಸಿ.ಎಂ ಬೊಮ್ಮಾಯಿ ಭರವಸೆ

mysore dasara 2022 Karnataka cm basavaraj bommai president draupadi murmu

Comments are closed.