Bruce Lee death secret: 49 ವರ್ಷಗಳ ಬಳಿಕ ಬ್ರೂಸ್ ಲೀ ಸಾವಿನ ರಹಸ್ಯ ಬಯಲು; ನಿಜಾಂಶ ಗೊತ್ತಾದ್ರೆ ನೀರು ಕುಡಿಯೋಕೆ ಮುನ್ನ ನೂರು ಬಾರಿ ಯೋಚಿಸ್ತೀರಾ..!

ಅಮೆರಿಕ: Bruce Lee death secret: ಬ್ರೂಸ್ ಲೀ ಅಂದರೆ ಗೊತ್ತಿಲ್ಲ ಅನ್ನೋರ ಸಂಖ್ಯೆ ತುಂಬಾ ವಿರಳ. ಕುಂಗ್ ಫೂನಿಂದಲೇ ಜಗತ್ತಿಗೆ ಫೇಮಸ್ ಆದವರು ಬ್ರೂಸ್ ಲೀ. ಸಮರಕಲೆ ಪ್ರವೀಣ, ನಟರಾಗಿದ್ದ ಬ್ರೂಸ್ ಲೀ ಸಾವಿನ ಹಿಂದೆ ಹಲವಾರು ಊಹಾಪೋಹಗಳಿವೆ. ಅವುಗಳಿಗೆಲ್ಲಾ ತೆರೆ ಎಳೆಯುವ ಅಂಶವೊಂದು ಅಧ್ಯಯನದಲ್ಲಿ ಬಹಿರಂಗಗೊಂಡಿದೆ. ಬ್ರೂಸ್ ಲೀ ಸತ್ತು 49 ವರ್ಷಗಳ ಬಳಿಕ ಸಿಕ್ಕಿರುವ ಮಾಹಿತಿ ಎಲ್ಲರನ್ನೂ ಅಚ್ಚರಿಗೀಡುಮಾಡಿದೆ.

ಸಮರಕಲೆಯಲ್ಲಿ ನೈಪುಣ್ಯರಾಗಿದ್ದ, ಅಭಿನಯದಲ್ಲೂ ಪಳಗಿದ್ದ ಬ್ರೂಸ್ ಲೀ ತನ್ನ 32ನೇ ವಯಸ್ಸಿನಲ್ಲಿ ಅಂದರೆ 1973ರ ಜುಲೈ 20ರಂದು ಸಾವಿಗೀಡಾಗಿದ್ದರು. ಅವರ ಸಾವಿನ ಕುರಿತು ನಿಖರವಾದ ಕಾರಣ ಬಹಿರಂಗಗೊಂಡಿರದ ಹಿನ್ನೆಲೆ ಹಲವು ಊಹಾಪೋಹಗಳು ಎದ್ದಿದ್ದವು. ಆದರೆ ಇದೀಗ ಅಧ್ಯಯನವೊಂದು ಅವರ ಸಾವಿನ ಕಾರಣ ಬಹಿರಂಗಗೊಳಿಸಿದೆ.

ಬ್ರೂಸ್ ಲೀ ಅವರು ಹೆಚ್ಚು ನೀರನ್ನು ಕುಡಿದಿದ್ದರಿಂದ ಸಾವನ್ನಪಿರಬಹುದು ಎಂದು ಅಧ್ಯಯನ ತಿಳಿಸಿದೆ. ಹೆಚ್ಚುವರಿ ನೀರನ್ನು ಹೊರಹಾಕಲು ಮೂತ್ರಪಿಂಡ ಅಸಮರ್ಥವಾಗಿದ್ದರಿಂದ ಬ್ರೂಸ್ ಲೀ ಸಾವಿಗೀಡಾಗಿರಬಹುದು ಎಂದು ಸಂಶೋಧಕರ ತಂಡ ಹೇಳಿದೆ.

ಇದನ್ನೂ ಓದಿ: 0nline Gaming: ಆನ್ ಲೈನ್ ಗೇಮಿಂಗ್ ಪ್ರಿಯರಿಗೆ ದರ ಏರಿಕೆ ಬಿಸಿ?; ಶೇ.28ರಷ್ಟು GST ವಿಧಿಸುವಂತೆ ಸಮಿತಿ ಶಿಫಾರಸ್ಸು ಸಾಧ್ಯತೆ

ಬ್ರೂಸ್ ಲೀ ಅವರು ಮೆದುಳು ಊದಿಕೊಂಡು ಸಾವಿಗೀಡಾಗಿದ್ದರು ಎಂಬ ವಿಚಾರ ಅವರ ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಿಳಿದುಬಂದಿತ್ತು. ಅಂದರೆ ಸಾಮಾನ್ಯವಾಗಿ 1,400 ಗ್ರಾಂ ಇರುವಂಥ ಮೆದುಳು 1,575 ಗ್ರಾಂನಷ್ಟು ಊದಿಕೊಂಡಿತ್ತು ಎನ್ನಲಾಗಿತ್ತು. ಇದೀಗ ಕ್ಲಿನಿಕಲ್ ಕಿಡ್ನಿ ಜರ್ನಲ್ ನಲ್ಲಿ ಪ್ರಕಟವಾಗಿರುವ ಅಧ್ಯಯನದ ಪ್ರಕಾರ ಹೆಚ್ಚುವರಿ ನೀರನ್ನು ಹೊರಹಾಕಲು ಮೂತ್ರಪಿಂಡ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಬಿ ವಾಟರ್ ಮೈ ಫ್ರೆಂಡ್ (ನೀರಿನಂತಿರು ನನ್ನ ಗೆಳೆಯ) ಅನ್ನೋದು ಬ್ರೂಸ್ ಲೀ ಅವರ ಫೇಮಸ್ ಕೋಟ್. ಆದರೆ ಅವರ ಸಾವು ಕೂಡಾ ನೀರಿನಿಂದಾಗಿತ್ತು ಎಂದು ಅಧ್ಯಯನದ ಕೊನೆಯಲ್ಲಿ ಉಲ್ಲೇಖಿಲಸಾಗಿದೆ.

ಅಂದಹಾಗೆ ಬ್ರೂಸ್ ಲೀ ನಿಜವಾದ ಹೆಸರು ಲೀ ಜುನ್ ಫಾನ್. ಇವರು ಕುಂಗ್ ಫೂ ಪರಿಣಿತಿಯೊಂದಿಗೆ ಪ್ರತಿಭಾವಂತ ಕವಿಯೂ ಆಗಿದ್ದರು. 32ನೇ ವಯಸ್ಸಿನಲ್ಲಿ ನಿಧನರಾದ ಅವರ ಸಾವಿನ ಬಗ್ಗೆ ಹಲವು ವದಂತಿಗಳು ಹರಡಿದ್ದವು. ಚೀನಾದ ಸೀಕ್ರೆಟ್ ಸಂಸ್ಥೆ ಟ್ರೈಡ್ ಬ್ರೂಸ್ ಲೀ ಅವರನ್ನು ಕೊಲೆಗೈದಿದೆ ಎನ್ನಲಾಗಿತ್ತು. ಬಳಿಕ ಸೆರೆಬ್ರಲ್ ಎಡಿಮಾ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ಈ ಆರೋಗ್ಯ ಸಮಸ್ಯೆಗೆ ಒಳಗಾದವರಲ್ಲಿ ಮೆದುಳಿನಲ್ಲಿ ಊತ ಹಾಗೂ ಉಸಿರಾಟದಲ್ಲಿ ತೊಂದರೆ ಹಾಗೂ ಹಠಾತ್ ಅಸಾಮಾನ್ಯ ನಡವಳಿಕೆಗಳು ಕಾಣಿಸಿಕೊಳ್ಳುತ್ತವೆ. ಅವರ ಚಿತ್ರೀಕರಣದ ಸಂದರ್ಭದಲ್ಲೂ ಈ ನಡವಳಿಕೆಗಳು ಕಾಣಿಸಿಕೊಂಡಿತ್ತು ಎನ್ನಲಾಗಿತ್ತು.

ಇದನ್ನೂ ಓದಿ: India Vs New Zealand T20 : ಮೂರನೇ ಟಿ20 ಪಂದ್ಯ ರೋಚಕ ಟೈ, ಭಾರತಕ್ಕೆ 1-0 ಸರಣಿ ಜಯ

ಬ್ರೂಸ್ ಲೀ ನಿಧನರಾಗಿದ್ದ ದಿನದಂದು ಗೇಮ್ ಆಫ್ ಡೆತ್ ಎಂದ ಹೊಸ ಸಿನಿಮಾದ ಕುರಿತು ಮಾತನಾಡುವ ಸಲುವಾಗಿ ಹಾಂಗ್ ಕಾಂಗ್ ಚಿತ್ರ ನಿರ್ಮಾಪಕ ರೇಮಂಡ್ ಚೂ ಅವರನ್ನು ಸಂಜೆ 4 ಗಂಟೆ ವೇಳೆಗೆ ಭೇಟಿಯಾಗಿದ್ದರು. ಅದಾದ ಬಳಿಕ ಅವರಿಗೆ ತೀವ್ರವಾದ ತಲೆನೋವು ಉಂಟಾಗಿತ್ತು. ಆಗ ಅವರ ಸ್ನೇಹಿತ ಹಾಗೂ ನಟಿ ಬೆಟ್ಟಿ ಟಿಂಗ್ ಪಿ ಅವರು ಆಸ್ಪ್ರಿನ್, ಮೆಪ್ರೊಬಾಮೆಟ್ ಮಾತ್ರೆ ತೆಗೆದುಕೊಳ್ಳಲು ಸಲಹೆ ನೀಡಿದ್ದರು ಎಂದು ಕೂಡಾ ಹೇಳಲಾಗುತ್ತಿತ್ತು. ಬಳಿಕ ಆ ರಾತ್ರಿ ಅವರಿಗೆ ಅನಾರೋಗ್ಯ ಕಾಡಿದ ಕಾರಣ ರಾಣಿ ಎಲಿಜಬೆತ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು ಎಂದು ಘೋಷಿಸಲಾಗಿತ್ತು. ಅವರ ಮರಣೋತ್ತರ ವರದಿಯ ಪ್ರಕಾರ ಅವರಿಗೆ ಆ ಮಾತ್ರೆಗಳಿಂದ ಅಲರ್ಜಿ ಹೊಂದಿದ್ದರು ಎಂದು ತಿಳಿದುಬಂದಿತ್ತು. ಅವರ ಮೆದುಳು ಶೇ.13ರಷ್ಟು ದೊಡ್ಡ ಗಾತ್ರವನ್ನು ಪಡೆದುಕೊಂಡಿತ್ತು. ಅವರ ಮೃತದೇಹವನ್ನು ಸೀಟಲ್ ಗೆ ತಂದು ಅಂತ್ಯಸಂಸ್ಕಾರ ಮಾಡಲಾಗಿತ್ತು.

Bruce Lee death secret: After 49 years the secret of Bruce Lee’s death is revealed. If you know the truth you will think a hundred times before drinking water

Comments are closed.