ಸೋಮವಾರ, ಏಪ್ರಿಲ್ 28, 2025
HomeCoastal NewsCongress final list : ಕಾಂಗ್ರೆಸ್‌ ಅಂತಿಮ ಪಟ್ಟಿ ಪ್ರಕಟ : ಮೊಯಿದ್ದೀನ್‌ ಬಾವಾಗೆ ಒಂದು...

Congress final list : ಕಾಂಗ್ರೆಸ್‌ ಅಂತಿಮ ಪಟ್ಟಿ ಪ್ರಕಟ : ಮೊಯಿದ್ದೀನ್‌ ಬಾವಾಗೆ ಒಂದು ಕರೆಯಿಂದ ತಪ್ಪಿದ ಟಿಕೆಟ್‌ !

- Advertisement -

ಬೆಂಗಳೂರು : ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಒಂದು ದಿನ ಮುಂಚಿನವಾಗಿ ಕಾಂಗ್ರೆಸ್‌ ಪಕ್ಷ ಕರ್ನಾಟಕದ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು (Congress final list ) ಪ್ರಕಟಿಸಿದೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಮಾಜಿ ಶಾಸಕ ಮೊಯಿದ್ದೀನ್‌ ಬಾವಾ (Mohiuddin Bava) ಅವರಿಗೆ ಕಾಂಗ್ರೆಸ್‌ ಶಾಕ್‌ ಕೊಟ್ಟಿದೆ. ಉಳಿದಂತೆ ಶಿಡ್ಲಘಟ್ಟದಿಂದ ಬಿ.ವಿ.ರಾಜೀವ್‌ ಗೌಡ, ರಾಯಚೂರಿನಿಂದ ಮೊಹಮ್ಮದ್‌ ಸಲಾಂ, ಸಿ.ವಿ.ರಾಮನ್‌ ನಗರದಿಂದ ಎಸ್.‌ ಆನಂದ ಕುಮಾರ್‌, ಅರಕಲಗೋಡಿನಿಂದ ಎಚ್.ಪಿ.ಶ್ರೀಧರ್‌ ಗೌಡ ಹಾಗೂ ಮಂಗಳೂರು ಉತ್ತರ ಕ್ಷೇತ್ರದಿಂದ ಇನಾಯತ್‌ ಆಲಿ (Inayat Ali) ಅವರಿಗೆ ಟಿಕೆಟ್‌ ಘೋಷಣೆ ಮಾಡಿದೆ.

ಕಾಂಗ್ರೆಸ್‌ ಪಕ್ಷ ಇದೇ ಮೊದಲ ಬಾರಿ 6 ಪಟ್ಟಿಯ (congress final list) ಮೂಲಕ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಮೊದಲ ಪಟ್ಟಿಯನ್ನು ಪ್ರಕಟಿಸಿದ್ದ ಕಾಂಗ್ರೆಸ್‌ಗೆ ನಂತರ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿ ಪರಿಣಮಿಸಿತ್ತು. ಜಾತಿವಾರು ಲೆಕ್ಕಾಚಾರದ ಜೊತೆಗೆ ಬಂಡಾಯದ ಬಿಸಿಯನ್ನು ತಪ್ಪಿಸಿಕೊಳ್ಳಲು ಅಂತಿಮ ಹಂತದಲ್ಲಿ ಪಕ್ಷದ ಟಿಕೆಟ್‌ ಘೋಷಿಸುವ ಮೂಲಕ ಕಾಂಗ್ರೆಸ್‌ ಪಕ್ಷ ಟಿಕೆಟ್‌ ಆಕಾಂಕ್ಷಿಗಳಿಗೆ ಶಾಕ್‌ ಕೊಟ್ಟಿದೆ. ಇದನ್ನೂ ಓದಿ : JDS 3rd List : ಜೆಡಿಎಸ್​ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ

ಒಂದು ಕರೆಯಿಂದ ತಪ್ಪಿದ ಟಿಕೆಟ್‌ !

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಗೆ ಬಾರೀ ಪೈಪೋಟಿ ನಡೆದಿದೆ. ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಶಾಸಕ ಮೊಯಿದ್ದೀನ್‌ ಬಾವಾ ಹಾಗೂ ಡಿಕೆ ಶಿವಕುಮಾರ್‌ ಬಣದಲ್ಲಿ ಗುರುತಿಸಿಕೊಂಡಿರುವ ಇನಾಯತ್‌ ಆಲಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಹೈಕಮಾಂಡ್‌ ಇನಾಯತ್‌ ಆಲಿ ಅವರಿಗೆ ಟಿಕೆಟ್‌ ನೀಡುವ ಮೂಲಕ ಮಾಜಿ ಶಾಸಕ ಮೊಯಿದ್ದೀನ್‌ ಬಾವಾಗೆ ಶಾಕ್‌ ಕೊಟ್ಟಿದೆ. ಇದನ್ನೂ ಓದಿ : ಕುಂದಾಪುರ ಬಿಜೆಪಿಗೆ ಹಾಲಾಡಿಯೇ ಸ್ಟಾರ್‌ ಪ್ರಚಾರಕ !

ಈ ಬಾರಿ ಮೊಯಿದ್ದೀನ್‌ ಬಾವಾ ಅವರಿಗೆ ಟಿಕೆಟ್‌ ಖಚಿತವಾಗಿತ್ತು. ಆದರೆ ಮಾಧ್ಯಮಗಳಲ್ಲಿ ಇನಾಯತ್‌ ಆಲಿ (Inayat Ali) ಟಿಕೆಟ್‌ ಸಿಕ್ಕಿದೆ ಅನ್ನೋ ಸುದ್ದಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ಮೊಯಿದ್ದೀನ್‌ ಬಾವ ಪ್ರಭಾವಿ ನಾಯಕರೊಬ್ಬರಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರಿಗೆ ಕರೆ ಮಾಡಿಸಿ ಮೊಯಿದ್ದೀನ್‌ ಬಾವಾ (Mohiuddin Bava) ಅವರಿಗೆ ಈ ಬಾರಿ ಪಕ್ಷದ ಟಿಕೆಟ್‌ ನೀಡಬೇಕು. ಬಾವಾ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ ಎಂದು ಲಾಭಿ ನಡೆಸಿದ್ದರು. ಪ್ರಭಾವಿ ವ್ಯಕ್ತಿ ಕರೆ ಮಾಡಿದ್ದರಿಂದಾಗಿ ಕೆರಳಿದ ಮಲ್ಲಿಕಾರ್ಜುನ್‌ ಖರ್ಗೆ ಯಾವುದೇ ಕಾರಣಕ್ಕೂ ಮೊಯಿದ್ದೀನ್‌ ಬಾವಾ ಅವರಿಗೆ ಈ ಬಾರಿ ಟಿಕೆಟ್‌ ನೀಡಬಾರದು ಎಂದು ಕಟ್ಟಪ್ಪಣೆ ಹೊರಡಿಸಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ ಪಕ್ಷ ಇನಾಯತ್‌ ಆಲಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡುವ ಮೂಲಕ ಮೊಯಿದ್ದೀನ್‌ ಬಾವಾ ಅವರಿಗೆ ಶಾಕ್‌ ಕೊಟ್ಟಿದೆ ಎಂಬ ಮಾತುಗಳು ಕೇಳಿಬಂದಿವೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular