Solar Eclipse 2023 : ಇಂದು ವರ್ಷದ ಮೊದಲ ಸೂರ್ಯಗ್ರಹಣ, ಗ್ರಹಣದ ಆಚರಣೆಯ ಸಂಪೂರ್ಣ ವಿವರ

ನವದೆಹಲಿ : 2023ರ ಮೊದಲ ಸೂರ್ಯಗ್ರಹಣ (Solar Eclipse 2023) ಗೋಚರಿಸಿದೆ. ಈ ಸೂರ್ಯಗ್ರಹಣವು ಏಪ್ರಿಲ್ 20 ರಂದು ಬೆಳಿಗ್ಗೆ 7.04 ಕ್ಕೆ ಪ್ರಾರಂಭವಾಗಿದ್ದು, ಮಧ್ಯಾಹ್ನ 12.29 ಕ್ಕೆ ಕೊನೆಗೊಳ್ಳಲಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೂರ್ಯನು ತನ್ನ ಕಕ್ಷೆಯಲ್ಲಿ ಪ್ರಯಾಣಿಸುತ್ತಲೇ ಇರುತ್ತಾನೆ. ಆದರೆ ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬಂದಾಗ, ಸೂರ್ಯನು ಮರೆಯಾಗುತ್ತಾನೆ. ಸೌರಮಂಡಲದಲ್ಲಿ ಈ ರೀತಿ ಬದಲಾವಣೆಯನ್ನು ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯದಲ್ಲಿ ಸೂರ್ಯ ಗ್ರಹನಿಗೆ ಸಂಬಂಧಿಸಿದ ಹಲವು ನಿಯಮಗಳಿವೆ. ಹಾಗಾದರೆ ಸೂರ್ಯಗ್ರಹಣದ ಸಮಯದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.

ಈ ಸೂರ್ಯಗ್ರಹಣದ ಸಮಯದಲ್ಲಿ ಇದನ್ನು ಮಾಡಬೇಡಿ :

  • ಸೂರ್ಯಗ್ರಹಣದ ಸಮಯದಲ್ಲಿ ಯಾವುದೇ ಆಹಾರವನ್ನು ಬೇಯಿಸಿ ತಿನ್ನಬಾರದು. ಈ ಸಮಯದಲ್ಲಿ ಈ ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ
  • ಸೂರ್ಯಗ್ರಹಣದ ದಿನ ಯಾವುದೇ ರೀತಿಯ ಹಿಂದಿನ ದಿನ ತಯಾರಿಸಿದ ಆಹಾರವನ್ನು ಇಟ್ಟುಕೊಳ್ಳಬಾರದು. ಇನ್ನು ಗ್ರಹಣ ಮುಗಿದ ನಂತರ, ಮನೆಯನ್ನು ಶುದ್ಧೀಕರಿಸಿ ನಂತರ ಆಹಾರವನ್ನು ತಯಾರಿಸಿಕೊಂಡು ತಿನ್ನಬೇಕು.
  • ಒಂದು ವೇಳೆ ಸೂರ್ಯಗ್ರಹಣಕ್ಕೆ ಮುಂಚೆಯೇ ಆಹಾರವನ್ನು ಬೇಯಿಸಿದರೆ, ತುಳಸಿ ಎಲೆಗಳನ್ನು ಹಾಕಿ ಇಡಬೇಕು. ಈ ರೀತಿ ಮಾಡುವುದರಿಂದ ಗ್ರಹಣವು ಆಹಾರದ ಮೇಲೆ ಪರಿಣಾಮ ಬೀರುವುದಿಲ್ಲ ಎನ್ನುವ ನಂಬಿಕೆ ಇದೆ.
  • ಯಾವುದೇ ಕಾರಣಕ್ಕೂ ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು. ಹಾಗೆ ಮಾಡುವುದರಿಂದ ನಿಮ್ಮ ಹಾನಿಯಾಗಬಹುದು
  • ಗ್ರಹಣದ ಸಮಯದಲ್ಲಿ ಮಲಗಬಾರದು. ಹಾಗೆಯೇ ಪ್ರಯಾಣ ಮಾಡಬಾರದು.
  • ಸೂರ್ಯಗ್ರಹಣದ ಸಮಯವನ್ನು ತುಂಬಾ ಅಶುಭವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಈ ಸಮಯದಲ್ಲಿ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಾರದು.
  • ಸಾಧ್ಯವಾದರೆ, ಈ ಸಮಯದಲ್ಲಿ ಮಲವಿಸರ್ಜನೆಯನ್ನು ತಪ್ಪಿಸಬೇಕು.
  • ಸೂರ್ಯಗ್ರಹಣದ ಸಮಯದಲ್ಲಿ ಮನೆಯಲ್ಲಿಯೇ ಇರಿ, ಹೊರಗೆ ಹೋಗುವುದನ್ನು ತಪ್ಪಿಸಿ ಏಕೆಂದರೆ ಈ ಸಮಯದಲ್ಲಿ ಸೂರ್ಯನು ಕಲುಷಿತನಾಗಿರುತ್ತಾನೆ, ಇದು ಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ : Puttur Mahalingeshwara Temple : ಭಕ್ತರಿಗಾಗಿ ಊರೂರು ತಿರುಗುತ್ತಾನೆ ಶಿವ, ಹತ್ತೂರ ಒಡೆಯನ ದರ್ಶನ ಪಡೆದವನೇ ಧನ್ಯ

ಇದನ್ನೂ ಓದಿ : ಹತ್ತೂರ ಒಡೆಯನಿಗೆ ಅವಭೃತ ಸ್ನಾನ – ಭಕ್ತರಿಂದ ದೇವರಿಗೆ ಭಕ್ತಿಯ ಸೇವೆ

ಇದನ್ನೂ ಓದಿ : World Heritage Day : ಇತಿಹಾಸದ ಶ್ರೀಮಂತ ಪರಂಪರೆಯ ಕುರುಹುಗಳನ್ನು ರಕ್ಷಿಸುವ ಸಂಕಲ್ಪ ತೊಟ್ಟ ಸಿಎಂ ಬೊಮ್ಮಾಯಿ

ಈ ಸೂರ್ಯಗ್ರಹಣದ ಸಮಯದಲ್ಲಿ ಈ ಕೆಲಸಗಳನ್ನು ಮಾಡಿ :

  • ಸೂರ್ಯಗ್ರಹಣದ ಮೊದಲು ತುಳಸಿ ಎಲೆಗಳನ್ನು ನೀರು ಮತ್ತು ಉಳಿದ ಆಹಾರದಲ್ಲಿ ಹಾಕಿ ಇಡಬೇಕು.
  • ಸೂರ್ಯಗ್ರಹಣದ ಸಮಯದಲ್ಲಿ ಶಿವನ ಯಾವುದೇ ಮಂತ್ರವನ್ನು ಪಠಿಸುವುದು ಉತ್ತಮ.
  • ಸೂರ್ಯಗ್ರಹಣದ ದುಷ್ಪರಿಣಾಮಗಳನ್ನು ತಪ್ಪಿಸಲು ಮಂತ್ರಗಳನ್ನು ಜಪಿಸಿ ದಾನ ಮಾಡಬೇಕು.
  • ಸೂರ್ಯಗ್ರಹಣ ಮುಗಿದ ನಂತರ ಸ್ನಾನ ಮಾಡಬೇಕು
  • ಸೂರ್ಯಗ್ರಹಣ ಮುಗಿದ ನಂತರ ಮನೆಯನ್ನು ಸ್ವಚ್ಛಗೊಳಿಸಬೇಕು.
  • ಗ್ರಹಣ ಮುಗಿದ ನಂತರ ಮನೆಯಲ್ಲಿ ಗಂಗಾಜಲವನ್ನು ಸಿಂಪಡಿಸುವುದು ಉತ್ತಮ.
  • ಸೂರ್ಯಗ್ರಹಣದ ಸಮಯದಲ್ಲಿ ಆದಿತ್ಯಹೃದಯ ಸ್ತೋತ್ರ ಮತ್ತು ಹನುಮಾನ್ ಚಾಲೀಸವನ್ನು ಪಠಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
  • ಹಿಂದೂ ಪಂಚಾಂಗದ ಪ್ರಕಾರ, ಈ ಗ್ರಹಣವು ಬೆಳಿಗ್ಗೆ 7.04 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮಧ್ಯಾಹ್ನ 12.29 ರವರೆಗೆ ಇರುತ್ತದೆ, ಆದರೆ ಭಾರತದಲ್ಲಿ ಗೋಚರಿಸದ ಕಾರಣ, ಸೂತಕ ಅವಧಿಯು ದೇಶದಲ್ಲಿ ಮಾನ್ಯವಾಗಿಲ್ಲ.

Solar Eclipse 2023 : Today is the first solar eclipse of the year, complete details of the eclipse celebration

Comments are closed.