Prakash Raj : ದಿ ಕಾಶ್ಮೀರಿ ಫೈಲ್ಸ್ ಗೆ ಪ್ರಕಾಶ್ ರೈ ಆಕ್ರೋಶ : ಇನ್ನೈದು ವಿಷಯದ ಬಗ್ಗೆ ಸಿನಿಮಾ ಯಾವಾಗ ಅಂದ ನಟ

ಸಿನಿಮಾಗಳು ತೆರೆ ಕಂಡಾಗ ಚೆನ್ನಾಗಿದೆ ಚೆನ್ನಾಗಿಲ್ಲ ಎಂಬ ಅಭಿಪ್ರಾಯಗಳು ರೂಪುಗೊಳ್ಳೋದು ಕಾಮನ್. ಆದರೆ ಈ ಸಿನಿಮಾ ಮಾತ್ರ‌ ದೇಶದಾದ್ಯಂತ ಪರ ಮತ್ತು ವಿರೋಧದ ಚರ್ಚೆ ಹುಟ್ಟುಹಾಕಿದೆ. ಈ ಸಿನಿಮಾ ಮತ್ಯಾವುದು ಅಲ್ಲ, ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕ್ಯಾಶ್ಮೀರಿ ಫೈಲ್ಸ್ (The Kashmiri Files). ಕಟ್ಟು ಕತೆ ಎಂಬ ವಾದ ಒಂದೆಡೆಯಾದರೇ, ಇದು ಮುಚ್ಚಿಟ್ಟ ಸತ್ಯ ಕತೆ ಎಂಬ ವಾದ ಮತ್ತೊಂದೆಡೆ. ಇದೆಲ್ಲದರ ಮಧ್ಯೆ ನಟ ಹಾಗೂ ಚಿಂತಕ ಪ್ರಕಾಶ್ ರೈ ( Prakash Raj) ಸಿನಿಮಾ ಬಗ್ಗೆ ಪರೋಕ್ಷ ಟಾಂಟ್ ನೀಡಿದ್ದಾರೆ.

ಸಿನಿಮಾದ ಬಗ್ಗೆ ಟ್ವೀಟ್ ಮಾಡಿರೋ ಪ್ರಕಾಶ್ ರೈ , ಇನ್ನೂ ಆರು ಸಂಗತಿಗಳನ್ನು ಹೆಸರಿಸಿ ಅವುಗಳ ಫೈಲ್ಸ್ ಯಾವಾಗಾ ತೆರೆದುಕೊಳ್ಳುತ್ತವೆ ಎಂದು ಪ್ರಶ್ನಿಸಿದ್ದಾರೆ. ನಿರ್ಮಾಪಕರಾಗಿ ಬದಲಾದ ಪ್ರೀತಿಯ ನಟರೇ ಎಂದು ಟ್ವೀಟ್ ಆರಂಭಿಸಿದ ಪ್ರಕಾಶ್ ರೈ, ಗೋದ್ರಾ ಫೈಲ್ಸ್, ಜಿಎಸ್ಟಿ ಫೈಲ್ಸ್, ದೆಹಲಿ ಫೈಲ್ಸ್, ನೋಟು ಅಮಾನ್ಯೀಕರಣದ ಫೈಲ್ಸ್, ಕೋವಿಡ್ ಫೈಲ್ಸ್ ಮತ್ತು ಗಂಗಾ ಫೈಲ್ಸ್ ಬಗ್ಗೆ ಯಾವಾಗ ಸಿನಿಮಾ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಆ ಮೂಲಕ ಇದು ಬಿಜೆಪಿ ಬೆಂಬಲಿಗರ ಸಿನಿಮಾ ಎಂಬರ್ಥದಲ್ಲಿ ವ್ಯಂಗ್ಯವಾಡಿದ್ದು ಈ ಸಬ್ಜೆಕ್ಟ್ ಗಳ ಮೇಲೆ ಸಿನಿಮಾ ಮಾಡಿ ಎಂದು ಕೆಣಕಿದ್ದಾರೆ. ಪ್ರಕಾಶ್ ರೈ ಅವರ ಟ್ವೀಟ್ ಗೆ ಹಲವರು ಕಮೆಂಟ್ ಮಾಡಿದ್ದು ಕೆಲವರು ನೀವೆ ಈ ವಿಚಾರಗಳ ಮೇಲೆ ಸಿನಿಮಾ ಮಾಡಿ ತೋರಿಸಿ ನೋಡೋಣ ಎಂದು ಸವಾಲೆಸೆದಿದ್ದಾರೆ. ಇನ್ನೂ ಕೆಲವರು ಪ್ರಕಾಶ್ ರೈಯವರನ್ನು ಬೆಂಬಲಿಸಿ ದಿ ಕಾಶ್ಮೀರಿ ಫೈಲ್ಸ್ ಬಗ್ಗೆ ಕಮೆಂಟ್ ಮಾಡಿದ್ದಾರೆ.

ಕಾಶ್ಮೀರಿ ಫೈಲ್ಸ್ 1990 ದಶಕದಲ್ಲಿ ಜಮ್ಮು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ಕತೆ ಎಂದು ಹಲವರು ಹೇಳಿದ್ದರೇ ಇನ್ನು ಕೆಲವರು ಇದು ಕಟ್ಟು ಕತೆ. ಹಿಂದೂ ಮುಸ್ಲಿಂರ ನಡುವೆ ದ್ವೇಷ ಹುಟ್ಟುಹಾಕುವ ಪ್ರಯತ್ನ ಎಂದು ಕೆಲವರು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಹುತೇಕ ಬಿಜೆಪಿ ನಾಯಕರು ಸಿನಿಮಾ ನೋಡಿದ್ದು, ಕಾಶ್ಮೀರಿ ಫೈಲ್ಸ್ ಗೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಕರ್ನಾಟಕದಲ್ಲಂತೂ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಬೇಕೆಂಬ ಒತ್ತಡವೂ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ಕೂಡ ಈಗ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ.

ಇದನ್ನೂ ಓದಿ : KGF Chapter 2 : ಮಾರ್ಚ್ 21ಕ್ಕೆ ತೆರೆಗೆ ಅಪ್ಪಳಿಸಲಿದೆ ತೂಫಾನ್ : ಕೆಜಿಎಫ್-2 ಸಾಂಗ್ ರಿಲೀಸ್ ಗೆ ಮುಹೂರ್ತ ಫಿಕ್ಸ್

ಇದನ್ನೂ ಓದಿ : The Kashmiri Files : ದಿ ಕಾಶ್ಮೀರಿ ಫೈಲ್ಸ್ ಕನ್ನಡಕ್ಕೆ : ಹಿಂದುತ್ವವೇ ಬಿಜೆಪಿ ಅಜೆಂಡಾ ಎಂದ ಕಾಂಗ್ರೆಸ್

( Prakash Raj outrage to The Kashmiri Files)

Comments are closed.