corona control dc responsible : ಕೊರೋನಾ ನಿಯಂತ್ರಣ ಜಿಲ್ಲಾಧಿಕಾರಿಗಳ ಹೆಗಲಿಗೆ : ಹೊರಬಿತ್ತು ಸರ್ಕಾರದ ಪರಿಷ್ಕೃತ ಮಾರ್ಗಸೂಚಿ

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯದಾದ್ಯಂತ ಕಠಿಣ ಕ್ರಮಕೈಗೊಳ್ಳಲು ಸಿದ್ಧತೆ ನಡೆಸಿದ್ದು ಈಗಾಗಲೇ ಸಿಎಂ ತಜ್ಞರ ಜೊತೆ ಸಭೆ ನಡೆಸಿದ್ದಾರೆ. ಈ ಸಭೆ ಬಳಿಕ ಆಯಾ ಪ್ರದೇಶದ ಪಾಸಿಟಿವಿಟಿ ರೇಟ್ ಆಧಾರದ ಮೇಲೆ ಕಠಿಣ ಕ್ರಮಕೈಗೊಳ್ಳುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ( corona control dc responsible ) ನೀಡಿ ಸರ್ಕಾರ ಆದೇಶ ( new guidelines ) ಹೊರಡಿಸಿದೆ.

ಮಾತ್ರವಲ್ಲ ಹೆಚ್ಚುತ್ತಿರುವ ಕೊರೋನಾ ಹಾಗೂ ಓಮೈಕ್ರಾನ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ನಿಯಮಗಳ ಕುರಿತು ಪರಿಷ್ಕೃತ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಸರ್ಕಾರದಿಂದ ಸಂಜೆ ಬಿಡುಗಡೆಯಾದ ಪರಿಷ್ಕೃತ ಕೊರೋನಾ ಮಾರ್ಗಸೂಚಿಯಲ್ಲಿ ಏನಿದೆ ಅನ್ನೋದನ್ನು ಗಮನಿಸೋದಾದರೇ,

  • ಹಬ್ಬ ಹರಿದಿನಗಳಿಗೆ ಈಗಾಗಲೇ ವಿಶೇಷ ಮಾರ್ಗಸೂಚಿ ಪ್ರಕಟಿಸಿರುವ ಸರ್ಕಾರ ಪೂಜೆ ಪುನಸ್ಕಾರಕ್ಕೆ ಅವಕಾಶ ನೀಡಿದ್ದು, ತೀರ್ಥ ಪ್ರಸಾದ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ.
  • ದೇವಾಲಯಗಳಲ್ಲಿ ಒಂದು ಸಲಕ್ಕೆ ೫೦ ಜನರಿಗೆ ಮಾತ್ರ ಪ್ರವೇಶಾವಕಾಶ ಹಾಗೂ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದೆ.
  • ಆಯಾ ಜಿಲ್ಲೆಗಳಲ್ಲಿ ನಿರ್ದಿಷ್ಟ ತಾಲೂಕು ಮಟ್ಟದ ಸೋಂಕಿನ ಪ್ರಮಾಣ ಗಮನದಲ್ಲಿಟ್ಟುಕೊಂಡು ಜಿಲ್ಲಾಧಿಕಾರಿಗಳಿಗೆ ನಿರ್ಬಂಧ ಹೇರುವ ಅವಕಾಶ
  • ಶಾಲೆ, ಕಾಲೇಜು, ವಸತಿ ಶಾಲೆ ಸೇರಿಂದತೆ ಇನ್ನಿತರ ಶಿಕ್ಷಣ ಸಂಸ್ಥೆಗಳನ್ನು ತರೆಯುವ ಅಥವಾ ಮುಚ್ಚುವ ಅಧಿಕಾರ ಜಿಲ್ಲಾಧಿಕಾರಿಗಳ ಹೆಗಲಿಗೆ
  • ಮೆರವಣಿಗೆ, ಪ್ರತಿಭಟನೆ, ಧರಣಿ ಎಲ್ಲದಕ್ಕೂ ನಿರ್ಬಂಧ ತೆರೆದ ಜಾಗದಲ್ಲಿ ಮದುವೆ ಕಾರ್ಯಕ್ರಮಕ್ಕೆ 200 ಮಂದಿ, ಮುಚ್ಚಿದ ಜಾಗದಲ್ಲಿ 100 ಮಂದಿಗೆ ಅವಕಾಶ, ಆದರೆ CAB ಕಡ್ಡಾಯಗೊಳಿಸಲಾಗಿದೆ
  • ಕೇರಳ, ಮಹಾರಾಷ್ಟ್ರ, ಗೋವಾ ಗಡಿ ಭಾಗದಲ್ಲಿ ಮತ್ತಷ್ಟು ಬಿಗಿ ಕ್ರಮಕ್ಕೆ ಸೂಚನೆ
  • ಈಗಾಗಲೇ ಆರೋಗ್ಯ ಇಲಾಖೆ ಈ ಬಗ್ಗೆ ಹೊರಡಿಸಿರುವ ಮಾರ್ಗಸೂಚಿ ಪಾಲನೆಗೆ ತಾಕೀತು
  • ಸೋಂಕು ಹೆಚ್ಚಳವಾಗಿರುವ ಪ್ರದೇಶಗಳಲ್ಲಿ ‌ಸೋಂಕು ಹತೋಟಿಗೆ ತರಲು 144 ಸೆಕ್ಷನ್ ಜಾರಿ ಮಾಡಲು ಅನುಮತಿ
  • ಆಯಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಕಮಿಷನರ್ ಗಳು 144 ಸೆಕ್ಷನ್ ಜಾರಿ ಮಾಡಲು ಸ್ವತಂತ್ರರು ಎಂದು ಸರ್ಕಾರ ಸೂಚಿಸಿದೆ

ಅಲ್ಲದೇ ಮೇಲಿನ ಕಾನೂನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 51,60 – 2005 ಹಾಗೂ IPC 188 ಕ್ರಮಕ್ಕೆ ಸರ್ಕಾರ ಸೂಚನೆ ನೀಡಿದ್ದು ಈ ಪರಿಷ್ಕೃತ ಆದೇಶದ ಮಾರ್ಗಸೂಚಿ ಜನವರಿ 31ರ ಬೆಳಗ್ಗೆ 5ರ ವರೆಗೆ ಜಾರಿಯಲ್ಲಿರಲಿದೆ ಎಂದು ಹೇಳಿದೆ.

ಇದನ್ನೂ ಓದಿ : Covid Meeting : ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಕೋವಿಡ್‌ ಸಭೆಯಲ್ಲಿ16 ನಿರ್ಧಾರ

ಇದನ್ನೂ ಓದಿ : ಅಮೆಜಾನ್, ಫ್ಲಿಪ್‌ಕಾರ್ಟ್ ಗಣರಾಜ್ಯೋತ್ಸವ ದಿನದ ವಿಶೇಷ ಮಾರಾಟ ಜನವರಿ 16 ರಿಂದಲೇ ಆರಂಭ ಸಾಧ್ಯತೆ!

(corona control dc responsible : Karnataka government release new guidelines)

Comments are closed.