Corona Death Report : ಕೊರೋನಾ ಸಾವಿನ ಸಂಖ್ಯೆಯಲ್ಲೂ ಸುಳ್ಳು: ವಿಪಕ್ಷ ಆರೋಪಕ್ಕೆ ಡಾ.ಸುಧಾಕರ್ ಟ್ವೀಟ್ ತಿರುಗೇಟು

ಬೆಂಗಳೂರು : ಬಿಜೆಪಿ ಸರ್ಕಾರದಲ್ಲಿರೋ ಒಬ್ಬೊಬ್ಬ ಸಚಿವರೂ ಕಾಂಗ್ರೆಸ್‌ನ ಟಾರ್ಗೆಟ್ ಗೆ ಗುರಿಯಾಗುತ್ತಿದ್ದಾರೆ. ಈಶ್ವರಪ್ಪ, ಅಶ್ವತ್ಥ ನಾರಾಯಣ್ ಹಾಗೂ ಆರಗ ಜ್ಞಾನೇಂದ್ರ ಬಳಿಕ ಈಗ ಆರೋಗ್ಯ ಸಚಿವ ಡಾ.ಸುಧಾಕರ್ ವಿರುದ್ಧ ಕೈಪಡೆ ತಿರುಗಿ ಬಿದ್ದಿದೆ. ಕೊರೋನಾ ಒಂದು, ಎರಡು, ಮೂರನೆ ಅಲೆಯ ವೇಳೆ ಸುಧಾಕರ್ ಕಾರ್ಯವೈಖರಿ ಶ್ಲಾಘಿಸಿದವರೇ, ಈಗ ಸುಳ್ಳು ಲೆಕ್ಕಾಚಾರ (Corona Death Report ) ಎಂದು ಆರೋಪಿಸಲಾಗುತ್ತಿದ್ದು, ಸಾವಿನ ಸಂಖ್ಯೆಯನ್ನು ಸರ್ಕಾರ ಮುಚ್ಚಿಡುತ್ತಿದೆ ಎಂದು ಕೈನಾಯಕರು ವಾಗ್ದಾಳಿ ನಡೆಸಿದ್ದಾರೆ.

ಕೊರೋನಾ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರಿಗೆ ಸುಳ್ಳು ಲೆಕ್ಕ ಹೇಳಿವೆ.‌ಸತ್ತವರ ಸಂಖ್ಯೆಯನ್ನು ಮುಚ್ಚಿಡಲಾಗಿದೆ ಎಂದು ಕಾಂಗ್ರೆಸ್ ನಾಯಕರಾದ ಡಿಕೆಶಿ, ಸಿದ್ಧರಾಮಯ್ಯ ಹಾಗೂ ಪ್ರಿಯಾಂಕ್ ಖರ್ಗೆ ಈ ಹಿಂದಿನಿಂದಲೂ ಆರೋಪಿಸುತ್ತ ಬಂದಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸರ್ಕಾರ ಕೊರೋನಾ ಸಂತ್ರಸ್ಥರಿಗೆ ಪರಿಹಾರ ನೀಡುವಲ್ಲಿ ವಿಫಲವಾಗಿದೆ.ಗಂಗಾ ನದಿಯಲ್ಲಿ ಹೆಣಗಳು ತೇಲಿದ್ವು, ಯುಪಿ,ಬಿಹಾರದಲ್ಲಿ ಸರಿಯಾದ ಸಾವಿನ ಸಂಖ್ಯೆ ಕೊಡಲಿಲ್ಲ.ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲ. ಡಬ್ಲ್ಯುಹೆಚ್ ಒ ವರದಿ ಸುಳ್ಳು ಅಂತ ಹೇಳ್ತಾರೆ. ನಾವು ಸಂಸತ್ತಿನಲ್ಲೂ ಪ್ರಸ್ತಾಪಿಸಿದ್ದೆವು.ವಿಧಾನಸಭೆಯಲ್ಲೂ ಪ್ರಸ್ತಾಪ ಮಾಡಿದ್ದೆವು
ಕೊರೊನಾದಲ್ಲಿ ಸರ್ಕಾರ ಎಷ್ಟು ಸುಳ್ಳು ಹೇಳಿದೆ ಎಂಬುದು ಜನರಿಗೆ ಗೊತ್ತಾಗಿದೆ ಎಂದು ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ ಈ ಹೇಳಿಕೆಗೆ ಆರೋಗ್ಯ ಸಚಿವ ಡಾ.ಸುಧಾಕರ್ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. ಇಲ್ಲಿವರೆಗೂ ಕೊವೀಡ್ ನಿಂದ ಮೃತಪಟ್ಟಿದ್ದು 40,060 ಜನ.ಕೊರೊನಾ ಅಂಕಿ – ಅಂಶ ದಾಖಲಿಸಲು ಪಾರದರ್ಶಕ ವ್ಯವಸ್ಥೆ ಕಲ್ಪಿಸಲಾಗಿದೆ.ಈ ವರೆಗೂ ಕೊವೀಡ್ ನಿಂದ 40,060ಜನ ಮೃತಪಟ್ಟಿರುವ ಅಧಿಕೃತ ದಾಖಲೆ ಇದೆ. ಕೊರೊನಾ ಅಂಕಿ- ಅಂಶಗಳ ಬಗ್ಗೆ ಯಾವುದೇ ಊಹಾಪೋಹಗಳು, ಅಪಪ್ರಚಾರ ಗಳಿಗೆ ಕಿವಿ ಕೊಡಬೇಡಿ. ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂಕಿ, ಅಂಶ ಸ್ಪಷ್ಟವಾಗಿದೆ ಎಂದು ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.

ಆದರೆ ಇದನ್ನು ಕಾಂಗ್ರೆಸ್ ಅಲ್ಲಗಳೆಯುತ್ತಲೇ ಬಂದಿದೆ. ಈ ಹಿಂದೆಯೂ ಕೊರೋನಾ ವಿಚಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು ನಾಲ್ಕು ಸಾವಿರ ಕೋಟಿ ಅವ್ಯವಹಾರ ನಡೆದಿದೆ ಎಂದು ಸಿದ್ಧರಾಮಯ್ಯ ಆರೋಪಿಸಿದ್ದರು. ಇದು ಕೇವಲ ರಾಜ್ಯ ಮಾತ್ರವಲ್ಲ ದೇಶದ ಮಟ್ಟದಲ್ಲಿಯೂ ಕೇಂದ್ರದ ಸರ್ಕಾರದ ವಿರುದ್ಧವೂ ಇದೇ ಆರೋಪ ಕೇಳಿಬಂದಿದ್ದು, ಸಾವಿನ ಸಂಖ್ಯೆಯನ್ನು ಮುಚ್ಚಿಡಲಾಗಿದೆ ಎಂದು ವಿಪಕ್ಷಗಳು ಕಿಡಿಕಾರಿವೆ.

ಇದನ್ನೂ ಓದಿ : ಕೊರೋನಾದಿಂದ ಕಂಗೆಟ್ಟವರಿಗೆ ಸಮಾಧಾನದ ಸುದ್ದಿ: ಏಪ್ರಿಲ್‌ನಲ್ಲಿ ದಾಖಲಾಯ್ತು ಅತಿ ಕಡಿಮೆ ಸಾವಿನ ಸಂಖ್ಯೆ

ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆರಡು ಹೊಸ ಓಮಿಕ್ರಾನ್​ ರೂಪಾಂತರಿಗಳು ಪತ್ತೆ

Corona Death Report Allegation Minister Sudhakar tweet

Comments are closed.