Raghavendra Acharya Jansale : ಮತ್ತೆ ಪೆರ್ಡೂರು ಮೇಳಕ್ಕೆ ಗಾನಕೋಗಿಲೆ ಜನ್ಸಾಲೆ ರಾಘವೇಂದ್ರ ಆಚಾರ್‌

ಗಾನ ಕೋಗಿಲೆ, ಯುವ ಜನಾಂಗವನ್ನು ಮತ್ತೆ ಯಕ್ಷಗಾನ ಕಲೆಯತ್ತ ವಾಲುವಂತೆ ಮಾಡಿದ್ದ ಖ್ಯಾತ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್‌ (Raghavendra Acharya Jansale) ಮತ್ತೆ ಪೆರ್ಡೂರು ಮೇಳ ಸೇರ್ಪಡೆಯಾಗುತ್ತಿದ್ದಾರೆ. ಮುಂದಿನ ತಿರುಗಾಟದಲ್ಲಿ ಜನ್ಸಾಲೆ ಪೆರ್ಡೂರು ಮೇಳದ ಪ್ರಧಾನ ಭಾಗತವರಾಗಿ ರಂಗಮಂಚ ಏರಲಿದ್ದಾರೆ. ಒಂದು ವರ್ಷದ ಬಳಿಕ ಮತ್ತೆ ಪೆರ್ಡೂರು ಮೇಳ (perdoor mela) ಸೇರ್ಪಡೆಯಾಗುತ್ತಿರೋದು ಅಭಿಮಾನಿಗಳಲ್ಲಿ ಸಂಭ್ರಮ ಮೇಳೈಸಿದೆ.

ಪೆರ್ಡೂರು ಮೇಳದ ಯಜಮಾನರಾದ ಕರುಣಾಕರ ಶೆಟ್ಟಿ ಹಾಗೂ ಜನ್ಸಾಲೆ ರಾಘವೇಂದ್ರ ಆಚಾರ್‌ ಅವರ ನಡುವಿನ ಸಣ್ಣದೊಂದು ಗೊಂದಲ ವಿವಾದವನ್ನೇ ಹುಟ್ಟುಹಾಕಿತ್ತು. ಈ ಬಾರಿ ಮೇಳ ಹೊರಡುವುದಕ್ಕೆ ಒಂದು ವಾರದ ಮೊದಲು ಜನ್ಸಾಲೆ ಮೇಳ ತೊರೆಯುವುದಾಗಿ ಹೇಳಿಕೆ ನೀಡುವ ಮೂಲಕ ಶಾಕ್‌ ಕೊಟ್ಟಿದ್ದರು. ಅಲ್ಲದೇ ಪೆರ್ಡೂರು ಮೇಳದ ಪ್ರಧಾನ ಭಾಗವತರಾಗಿ ಗಾನಗಾರುಡಿನ, ಯಕ್ಷಗಾನದ ಹಿರಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರು ಮೇಳವನ್ನು ಮುನ್ನೆಡೆಸಿದ್ದರು. ಆದ್ರೀಗ ಮತ್ತೊಂದು ಬದಲಾವಣೆಯ ಗಾಳಿ ಬೀಸಿದ್ದು, ಗಾನಕೋಗಿಲೆ ಜನ್ಸಾಲೆ ರಾಘವೇಂದ್ರ ಆಚಾರ್‌ ಅವರು ಮತ್ತೆ ಪೆರ್ಡೂರು ಮೇಳವನ್ನು ಸೇರ್ಪಡೆಯಾಗಲಿದ್ದಾರೆ.

ಜನ್ಸಾಲೆ ರಾಘವೇಂದ್ರ ಆಚಾರ್‌ ಅವರು ಬದಲು ಸುಬ್ರಹ್ಮಣ್ಯ ಧಾರೇಶ್ವರ ಅವರನ್ನು ಪೆರ್ಡೂರು ಮೇಳಕ್ಕೆ ಕರೆತರುವ ವೇಳೆಯಲ್ಲಿ ಕೇವಲ ಒಂದು ವರ್ಷದ ಒಪ್ಪಂದ ನಡೆದಿತ್ತು. ಕರುಣಾಕರ ಶೆಟ್ಟಿ ಅವರು ಇಂತಹ ಪರಿಸ್ಥಿತಿಯಲ್ಲಿ ನೀವು ಒಂದು ವರ್ಷದ ಮಟ್ಟಿಗೆ ತಿರುಗಾಟ ಮಾಡಬೇಕು ಎಂದು ಕೇಳಿಕೊಂಡಿದ್ದರು. ಮೇಳದ ಯಜಮಾನರ ಮಾತಿಗೆ ಒಪ್ಪಿದ ಧಾರೇಶ್ವರ ಅವರು ಮತ್ತೆ ಪೆರ್ಡೂರು ಮೇಳದ ಪ್ರಧಾನ ಭಾಗವತರಾಗಿ ರಂಗಮಂಚವನ್ನು ಏರಿದ್ದರು. ಆದ್ರೀಗ ಒಂದು ವರ್ಷದ ಅವಧಿ ಪೂರ್ಣಗೊಂಡಿದೆ. ಇನ್ನೊಂದೆಡೆಯಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್‌ ಹಾಗೂ ಮೇಳದ ಯಜಮಾನರಾದ ಕರುಣಾಕರ ಶೆಟ್ಟಿ ಅವರ ನಡುವಿನ ವೈಮನಸ್ಸೂ ಮಾಯವಾಗಿದೆ.

ಜನ್ಸಾಲೆ ಈ ಬಾರಿ ಪೆರ್ಡೂರು ಮೇಳದಲ್ಲಿ ಇಲ್ಲಾ ಅನ್ನೋದು ಎದ್ದು ಕಾಣುವಂತೆ ಭಾಸವಾಗುತ್ತಿತ್ತು. ಖ್ಯಾತ ಪ್ರಸಂಗಕರ್ತ ಪವನ್‌ ಕಿರಣ್‌ಕೆರೆ ಅವರ ಕೃಷ್ಣಕಾದಂಬಿನಿ ಪ್ರಸಂಗ ಅದ್ಬುತ ಕಥೆ ಹೊಂದಿದ್ದರೂ ಕೂಡ ಹಿಮ್ಮೇಳ ಕೊಂಚ ಸಪ್ಪೆ ಅನಿಸುತ್ತಿತ್ತು. ಕರ್ಕಿ, ಸುಜನ್‌, ಜನ್ಸಾಲೆ ಅವರ ಅಬ್ಬರ ಒಂದು ವರ್ಷ ಮಿಸ್‌ ಆಗಿತ್ತು. ಜನ್ಸಾಲೆ ಸಾಲಿಗ್ರಾಮ ಸೇರಿದಂತೆ ಹಲವು ಮೇಳಗಳಲ್ಲಿ ಅತಿಥಿ ಭಾಗವತರಾಗಿ ಕಾಣಿಸಿಕೊಂಡಿದ್ದರೂ ಕೂಡ ಯಾವುದೇ ಮೇಳದ ಪ್ರಧಾನ ಭಾಗವತರಾಗಿ ಗುರುತಿಸಿಕೊಂಡಿರಲಿಲ್ಲ.

ರಾಘವೇಂದ್ರ ಆಚಾರ್‌ ಜನ್ಸಾಲೆ ಅವರು ಮತ್ತೆ ಪೆರ್ಡೂರು ಮೇಳದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಸಂತಸವನ್ನು ತಂದಿದೆ. ಯಕ್ಷಗಾನ ಸೇವೆಯ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಜನ್ಸಾಲೆ ರಾಘವೇಂದ್ರ ಆಚಾರ್‌ ಪೆರ್ಡೂರು ಮೇಳದ ರಂಗಮಂಚದಲ್ಲಿ ವಿಜೃಂಭಿಸಲಿದ್ದಾರೆ.

ಇದನ್ನೂ ಓದಿ :  ರಾಘವೇಂದ್ರ ಜನ್ಸಾಲೆ ಅವರ ಸ್ಥಾನಕ್ಕೆ ಧಾರೇಶ್ವರ : ಪೆರ್ಡೂರು ಮೇಳದಲ್ಲಿ ಭಾರೀ ಬದಲಾವಣೆ

ಇದನ್ನೂ ಓದಿ : ಪಾವಂಜೆ ಮೇಳ ಕಟ್ಟಿ ಗೆದ್ದ ಪಟ್ಲ, ಹೊಸ ಮೇಳ ಕಟ್ತಾರಾ ಜನ್ಸಾಲೆ

Raghavendra Acharya Jansale Re Join perdoor mela

Comments are closed.