Goa Restriction : ಗೋವಾ ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ: ರಾಜ್ಯ ಪ್ರವೇಶಕ್ಕೆ ಪ್ರತ್ಯೇಕ ಮಾರ್ಗಸೂಚಿ

ಬೆಂಗಳೂರು : ಹೊಸ ವರ್ಷಾಚರಣೆ ಗೋವಾ ರಾಜ್ಯಕ್ಕೆ ಕಂಟಕವಾಗಿ ಪರಿಣಮಿಸಿದ್ದು, ದೇಶದ ನಾನಾ ಭಾಗ ಗಳಿಂದ ನ ಜನರು ಹೊಸ ವರ್ಷಾಚರಣೆಗೆ ಗೋವಾಕ್ಕೆ ಆಗಮಿಸಿದ್ದರಿಂದ ಗೋವಾದಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ಸ್ಪೋಟಗೊಂಡಿದೆ. ಕಳೆದ‌ ಒಂದು ವಾರದಲ್ಲಿ ಗೋವಾದಲ್ಲಿ ಕೊರೋನಾ ಸೋಂಕಿತರ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ. ಹೀಗಾಗಿ ಕರ್ನಾಟಕ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಗೋವಾದಿಂದ ರಾಜ್ಯಕ್ಕೆ ಆಗಮಿಸುವವರಿಗೆ (Goa Restriction) ಕಠಿಣ ನಿಯಮ ರೂಪಿಸಿದೆ. ಗೋವಾದಿಂದ ಕರ್ನಾಟಕಕ್ಕೆ ಆಗಮಿಸಿವವರಿಗೆ ಪ್ರತ್ಯೇಕ ಮಾರ್ಗಸೂಚಿ ರೂಪಿಸಿದ್ದು, ಸುತ್ತೋಲೆ ಹೊರಡಿಸಿದೆ.

  • ಗೋವಾದಿಂದ ರಾಜ್ಯಕ್ಕೆ‌ ಆಗಮಿಸುವವರಿಗೆ RTPCR ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಲಾಗಿದೆ. ರಾಜ್ಯಕ್ಕೆ ಬರುವ 72 ಗಂಟೆಯೊಳಗೆ ಟೆಸ್ಟ್ ಮಾಡಿಸಿ ವರದಿ ತರಲು ಸೂಚಿಸಲಾಗಿದೆ.
  • ವಿಮಾನ, ರೈಲು, ರಸ್ತೆ, ಯಾವುದೇ ವಾಹನದಲ್ಲಿ ಬಂದ್ರೂ‌ 72 ಗಂಟೆಗಳ‌ ಒಳಗಿನ RTPCR ಟೆಸ್ಟ್ ಕಡ್ಡಾಯ
  • 72 ಗಂಟೆಗಳ RTPCR ನೆಗೆಟಿವ್ ‌ಸರ್ಟಿಫಿಕೆಟ್ ಇದ್ರೆ ಮಾತ್ರ ವಿಮಾನಯಾನ ಬೋರ್ಡಿಂಗ್ ಪಾಸ್ ನೀಡಬೇಕು
  • ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ RTPCR ನೆಗೆಟಿವ್ ರಿಪೋರ್ಟ್ ರೈಲ್ವೆ ಪ್ರಾಧಿಕಾರ ಖಚಿತಪಡಿಸಿಕೊಳ್ಳಬೇಕು
  • ಬಸ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ RTPCR ನೆಗೆಟಿವ್ ರಿಪೋರ್ಟ್ ನಿರ್ವಾಹಕರು ಪರಿಶೀಲಿಸಬೇಕು
  • ಸ್ವಂತ ವಾಹನಗಳಲ್ಲಿ ರಾಜ್ಯಕ್ಕೆ ಎಂಟ್ರಿ ಕೊಡವವರ ಪರಿಶೀಲನೆವೆ ಗೋವಾ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಗಳ ತೆರಯಲು ಆದೇಶ
  • 72 ಗಂಟೆಗಳ ಒಳಗಿನ ನೆಗೆಟಿವ್ ಸರ್ಟಿಫಿಕೇಟ್ ಚೆಕ್ ಪೋಸ್ಟ್ ಗಳಲ್ಲಿ ಪರಿಶೀಲನೆ ಮಾಡಬೇಕು
  • ಗೋವಾ – ಕರ್ನಾಟಕಕ್ಕೆ‌ ದಿನನಿತ್ಯ ಸಂಚರಿಸುವ ವಿದ್ಯಾರ್ಥಿಗಳು, ವ್ಯಾಪಾರಿಗಳು ಪ್ರತಿ 15 ದಿನಗಳಿಗೊಮ್ಮೆ ಕೋವಿಡ್ ಟೆಸ್ಟ್ ನೆಗೆಟಿವ್ ರಿಪೋರ್ಟ್ ತೋರಿಸಬೇಕು
  • ಆರೋಗ್ಯ ಸಿಬ್ಬಂದಿ, 5 ವರ್ಷಕ್ಕಿಂತ‌ ಕೆಳಗಿನ ಮಕ್ಕಳು, ಎಮರ್ಜೆನ್ಸಿ ಪ್ರಯಾಣಕ್ಕೆ ವಿನಾಯಿತಿ ನೀಡಿ ಸರ್ಕಾರದ ಆದೇಶ ಹೊರಡಿಸಿದೆ.

ಇದಕ್ಕೂ ಮುನ್ನ ಹೊಸ ವರ್ಷಾಚರಣೆಗೆ ಗೋವಾ ರಾಜ್ಯಕ್ಕೆ ಬರುವವರಿಗೆ ಗೋವಾ ಸರ್ಕಾರವೂ ಎರಡು ಡೋಸ್ ಲಸಿಕೆ ಸರ್ಟಿಫಿಕೇಟ್, ಕೊರೋನಾ ನೆಗೆಟಿವ್ ವರದಿ ಕಡ್ಡಾಯ ಗೊಳಿಸಿತ್ತು. ಆದರೂ ಕೂಡ ದೇಶದೆಲ್ಲೆಡೆಯಿಂದ ಸೆಲೆಬ್ರೇಟಿಗಳು ಸೇರಿದಂತೆ ಸಾವಿರಾರು ಜನರು ಗೋವಾದಲ್ಲಿ ಹೊಸ ವರ್ಷಾಚರಣೆಗೆ ಆಗಮಿಸಿದ್ದರು.ಇದರಿಂದಾಗಿ ಅಲ್ಲಿನ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ.

ಇದನ್ನೂ ಓದಿ : ಸರಕಾರಿ ಕಚೇರಿಗಳಲ್ಲಿ ಶೇ.50ರಷ್ಟು ಹಾಜರಾತಿ : ವಿಕಲಚೇತನರು, ಗರ್ಭಿಣಿಯರಿಗೆ Work From Home

ಇದನ್ನೂ ಓದಿ : ರಾಜ್ಯದಲ್ಲಿ ವೀಕೆಂಡ್​ ಕರ್ಫ್ಯೂ ಅವಧಿಯಲ್ಲಿ ಏನಿರುತ್ತೆ, ಏನಿರಲ್ಲ: ಇಲ್ಲಿದೆ ಮಾಹಿತಿ

(Corona Hike Goa restriction, Goa -Karnataka Border alert, Karnataka Relapsed Separate Guidelines)

Comments are closed.