ಬೆಂಗಳೂರು : ರಾಜ್ಯದಲ್ಲಿಂದು ಕೊರೊನಾ ಮಹಾಮಾರಿ ಸ್ಫೋಟಗೊಂಡಿದೆ. ಇಂದು ಒಂದೇ ದಿನ ಬರೋಬ್ಬರಿ 5,278 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಅದ್ರಲ್ಲೂ ಬೆಂಗಳೂರಲ್ಲಿ 3,728 ಮಂದಿಗೆ ಸೋಂಕು ದೃಢಪಟ್ಟಿದೆ.
ಬೆಂಗಳೂರು 3,728, ಬಾಗಲಕೋಟೆ 22, ಬಳ್ಳಾರಿ 40, ಬೆಳಗಾವಿ 17, ಬೆಂಗಳೂರು ಗ್ರಾಮಾಂತರ 34, ಚಿತ್ರದುರ್ಗ 27, ದಕ್ಷಿಣ ಕನ್ನಡ 56, ದಾವಣಗೆರೆ 9, ಧಾರವಾಡ 55, ಗದಗ 13, ಹಾಸನ 72, ಹಾವೇರಿ 4, ಕಲಬುರಗಿ 181, ಕೊಡಗು 15, ಕೋಲಾರ 82, ಕೊಪ್ಪಳ 20, ಮಂಡ್ಯ 48, ಮೈಸೂರು 165, ರಾಯಚೂರು 17, ರಾಮನಗರ 16, ಶಿವಮೊಗ್ಗ 24, ತುಮಕೂರು 139, ಉಡುಪಿ 59, ಉತ್ತರ ಕನ್ನಡ 51, ವಿಜಯಪುರ 27 ಮತ್ತು ಯಾದಗಿರಿಯಲ್ಲಿ 17 ಬೆಂಗಳೂರು ನಗರ 3,728, ಬೀದರ್ 264, ಚಾಮರಾಜನಗರ 30, ಚಿಕ್ಕಬಳ್ಳಾಪುರ 15, ಚಿಕ್ಕಮಗಳೂರು 32 ಮಂದಿಗೆ ಸೋಂಕು ದೃಢಪಟ್ಟಿದೆ.
ಕೊರೊನಾ ವೈರಸ್ ಸೋಂಕು ದಿನೇ ದಿನೇ ಏರಿಕೆಯಾಗುತ್ತಿದ್ದು, ದೇಶದಲ್ಲಿಯೇ ಕರ್ನಾಟಕ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದೆ.