ಕಿರಿಕ್ ಪಾರ್ಟಿ ಬೆಡಗಿಗೆ ಸಿಕ್ತು ಸ್ಪೆಶಲ್ ವಿಶ್…! ರಶ್ಮಿಕಾಗೆ ರಕ್ಷಿತ್ ಕೊಟ್ಟ ಗಿಫ್ಟ್ ನಲ್ಲೇನಿದೆ ಗೊತ್ತಾ?!

ಕಿರಿಕ್ ಪಾರ್ಟಿಯಿಂದ ಜರ್ನಿ ಆರಂಭಿಸಿ ಬಾಲಿವುಡ್ ಅಂಗಳಕ್ಕೆ ತಲುಪಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಗೆ ಇವತ್ತು ಹುಟ್ಟುಹಬ್ಬದ ಸಂಭ್ರಮ.  ಈ ಸಂಭ್ರಮಕ್ಕೆ ಒಂದು ಕಾಲದಲ್ಲಿ ರಶ್ಮಿಕಾ ಪ್ರೇಮಿಯಾಗಿದ್ದ ರಕ್ಷಿತ್ ಶೆಟ್ಟಿ ವಿಶೇಷವಾಗಿ ಶುಭಕೋರಿದ್ದು, ಇವರಿಬ್ಬರು ಮತ್ತೊಮ್ಮೆ ಒಂದಾಗುತ್ತಿದ್ದಾರಾ ಎಂಬ ಅನುಮಾನ ಅಭಿಮಾನಿಗಳಿಗೆ ಕಾಡತೊಡಗಿದೆ.

ಕೊಡಗಿನ ಕುವರಿ ದಕ್ಷಿಣ ಭಾರತದ ಜೊತೆಗೆ ಬಾಲಿವುಡ್ ನಲ್ಲೂ ಮಿಂಚುತ್ತಿರುವ ಬೆಡಗಿ ರಶ್ಮಿಕಾಗೆ ಇಂದು 25 ವರ್ಷದ ಹುಟ್ಟುಹಬ್ಬ.  ಈ ಖುಷಿಯಲ್ಲಿರೋ ರಶ್ಮಿಕಾ ಗೆ ಸ್ಯಾಂಡಲ್ ವುಡ್ ನ ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ ಶುಭಹಾರೈಸಿದ್ದು, ಭಾವನಾತ್ಮಕವಾದ ಸಾಲುಗಳೊಂದಿಗೆ ಸ್ಪೆಶಲ್ ವಿಡಿಯೋ ಹಂಚಿಕೊಂಡಿದ್ದಾರೆ.

ಕಿರಿಕ್ ಪಾರ್ಟಿಯ ಬಳಿಕ ಬಹುದೂರ ಸಾಗಿರುವೆ. ನಿಜವಾದ ಯೋಧನಂತೆ ಕನಸನ್ನು ಬೆನ್ನಟ್ಟುತ್ತಿರುವೆ. ಪ್ರೌಢ್ ಆಫ್ ಯೂ ಗರ್ಲ್. ಜನ್ಮದಿನದ ಶುಭಾಶಯಗಳು. ಮತ್ತಷ್ಟು ಯಶಸ್ಸು ನಿನಗೆ ದೊರೆಯಲಿ ಎಂದು ಶುಭಹಾರೈಸಿದ್ದಾರೆ.

ಇಷ್ಟೇ ಅಲ್ಲ, ಇದರೊಂದಿಗೆ ಕಿರಿಕ್ ಪಾರ್ಟಿ ಚಿತ್ರಕ್ಕಾಗಿ ನಡೆದ ಆಡಿಷನ್ ನಲ್ಲಿ ಸಾನ್ವಿ ಜೋಸೆಫ್ ಪಾತ್ರಕ್ಕಾಗಿ ನಡೆದ ಆಡಿಷನ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ರಶ್ಮಿಕಾ ಡೈಲಾಗ್ ಹೇಳುತ್ತಿದ್ದು, ಅದನ್ನು ಸ್ವತಃ ರಕ್ಷಿತ್ ಶೆಟ್ಟಿ ಕರೆಕ್ಷನ್ ಮಾಡುತ್ತಿರುವುದು ಹಾಗೂ ಮುಖಭಾವ, ಧ್ವನಿಯ ಏರಿಳಿತ ಎಲ್ಲವನ್ನು ರಶ್ಮಿಕಾಗೆ ಹೇಳಿಕೊಡುವ ದೃಶ್ಯವಿದೆ.

2016 ರಲ್ಲಿ ಕಿರಿಕ್ ಪಾರ್ಟಿಯ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ರಶ್ಮಿಕಾ ಮಂದಣ್ಣ, ಬಳಿಕ ತೆಲುಗು,ತಮಿಳು ಹಾಗೂ ಬಾಲಿವುಡ್ ನಲ್ಲಿ ನಟಿಸುತ್ತಿದ್ದಾರೆ. ಗೀತಾಗೋವಿಂದಂ, ದೇವದಾಸ್ಮ, ಸರಿಲೇರು ನಿಕ್ಕೇವೇರು,ಡಿಯರ್ ಕಾಮ್ರೆಡ್ ಚಿತ್ರಗಳು ರಶ್ಮಿಕಾಗೆ ಹೆಸರು ತಂದುಕೊಟ್ಟಿದ್ದು, ಕನ್ನಡದಲ್ಲಿ ರಶ್ಮಿಕಾ ಕೊನೆಯದಾಗಿ ಪೊಗರು ಸಿನಿಮಾದಲ್ಲಿ ನಟಿಸಿದ್ದಾರೆ.

ರಕ್ಷಿತ್ ಶೆಟ್ಟಿ ವಿಶ್ ಮಾಡಿದ ರೀತಿ, ಹಂಚಿಕೊಂಡ ವಿಡಿಯೋ ರಕ್ಷಿತ್ ಶೆಟ್ಟಿ ಮನಸ್ಸಿನಲ್ಲಿ ಇನ್ನೂ ರಶ್ಮಿಕಾ ಮೇಲೆ ಪ್ರೀತಿ ಹಾಗೆ ಇದೆ ಎಂಬುದನ್ನು ಸಾಬಿತುಪಡಿಸುವಂತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ.

Comments are closed.