Govt Jobs Cheating : ಸರಕಾರಿನೌಕರಿಗಾಗಿ ಜಾವೇದ್‌ ಅಖ್ತರ್‌ ನಕಲಿ ಸಹಿ ವಂಚನೆ : ಆರೋಪಿ ಸಂದೀಪ್‌ ಅರೆಸ್ಟ್‌

ಬೆಂಗಳೂರು : ಆರೋಗ್ಯ ಇಲಾಖೆಯಲ್ಲಿ ಸಿಸ್ಟಮ್ಸ್‌ ಅನಾಲಿಸ್ಟ್‌ ನೌಕರಿ ಕೊಡಿಸುವುದಾಗಿ ಆರೋಗ್ಯ ಇಲಾಖೆಯ ನಿಕಟಪೂರ್ವ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಕ್ತರ್‌ ಸಹಿಯನ್ನು ನಕಲು ಮಾಡಿ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಸಿಬ್ಬಂದಿಗಳ ವಿರುದ್ದ ಇದೀಗ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ತಬ್ರೇಜ್‌ ಷರೀಷ್‌ ಎಂಬವರ ಪತ್ನಿ ಸಲ್ಮಾ ಕೌಸರ್‌ ಎಂಬರು ಬೌರಿಂಗ್‌ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಸುತ್ತಿದ್ದರು. ಈ ವೇಳೆಯಲ್ಲಿ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ವೀಣಾ ಮತ್ತು ಸಂದೀಪ್‌ ಎಂಬವರು ಸಲ್ಮಾ ಕೌಸರ್‌ ಅವರಿಗೆ ಸಿಸ್ಟಮ್‌ ಅನಾಲಿಸ್ಟ್‌ ನೌಕರಿ ಕೊಡಿಸುವುದಾಗಿ ಆಮಿಷವೊಡ್ಡಿದ್ದಾರೆ.

ನಂತರದಲ್ಲಿ ಸಲ್ಮಾ ಅವರಿಗೆ ಸಂದೀಪ್‌ ಹಾಗೂ ವೀಣಾ ಅವರು ಸುಮಾರು 6 ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿದ್ದ ಜಾವೇದ್‌ ಅಖ್ತರ್‌ ಅವರ ಸಹಿಯನ್ನು ನಕಲು ಮಾಡಿ ಉದ್ಯೋಗದ ನಕಲಿ ಆದೇಶ ಪತ್ರವನ್ನು ನೀಡಿದ್ದರು. ಈ ಕುರಿತು ಪರಿಶೀಲನೆಯನ್ನು ನಡೆಸಿದ ವೇಳೆಯಲ್ಲಿ ಜಾವೇದ್‌ ಅಖ್ತರ್‌ ಅವರ ಸಹಿಯನ್ನು ನಕಲು ಮಾಡಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲೀಗ ವೀಣಾ ಹಾಗೂ ಸಂದೀಪ್‌ ವಿರುದ್ದ ಕ್ರಮಕೈಗೊಳ್ಳುವಂತೆ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಚಿರಂಜೀವಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿ ಸಂದೀಪ್‌ ವಿಧಾನಸೌದದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಸುಮಾರು 20 ಜನರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ನಡೆಸಿರೋದು ಬಯಲಾಗಿದೆ. ಇದೀಗ ವಿಧಾನಸೌದ ಠಾಣೆಯ ಪೊಲೀಸರು ಆರೋಪಿಯ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡಿದ್ದು, ಸಂದೀಪ್‌ನನ್ನು ಬಂಧಿಸಿ, ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಜವಾದ್‌ ಚಂಡಮಾರುತದ ಆರ್ಭಟ : ಅ.17 ರ ವರೆಗೆ ಭಾರಿ ಮಳೆ

ಇದನ್ನೂ ಓದಿ : ಯಲ್ಲಾಪುರದಲ್ಲಿ ಕೆಮಿಕಲ್‌ ಟ್ಯಾಂಕರ್‌ ಸ್ಪೋಟ : 500 ಮೀಟರ್‌ ವರೆಗೆ ವ್ಯಾಪಿಸಿರುವ ಬೆಂಕಿ

(Sandeep Arrest Javed Akhtar forged signature fraud government jobs )

Comments are closed.