Bus falls into River : ನದಿಗೆ ಉರುಳಿದ ಬಸ್‌ : 32 ಮಂದಿ ಸಾವು, ಹಲವರಿಗೆ ಗಾಯ

ಕಾಟ್ಮಂಡು : ಚಾಲಕನ ನಿಯಂತ್ರಣ ತಪ್ಪಿ ಪ್ರಯಾಣಿಕರಿದ್ದ ಬಸ್‌ ನದಿಗೆ ಉರುಳಿದ ಪರಿಣಾಮ 32 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿ ರುವ ಘಟನೆ ನೇಪಾಳದ ಮುಗು ಜಿಲ್ಲೆಯ ಛಾಯನಾಥರಾಯ ಪುರಸಭೆಯ ಪಿನಾಅರಿ ನದಿಯಲ್ಲಿ ನಡೆದಿದೆ. ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ಪಡೆಯ ಅಧಿಕಾರಿಗಳು ಧಾವಿಸಿದ್ದು ಬದುಕುಳಿದವರ ರಕ್ಷಣಾ ಕಾರ್ಯವನ್ನು ಕೈಗೊಂಡಿದ್ದಾರೆ. ಸ್ಥಳೀಯರ ನೆರವಿನೊಂದಿಗೆ ಕಾರ್ಯಾಚರಣೆ ಮುಂದುವರಿದಿದೆ.

ನೇಪಾಳದ ಮುಗು ಜಿಲ್ಲೆಯ ಗಮಗಧಿಗೆ ತೆರಳುತ್ತಿದ್ದ ಬಸ್‌ ಸ್ಕಿಡ್‌ ಆಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಸುಮಾರು 300 ಮೀಟರ್‌ ದೂರದಲ್ಲಿರುವ ನದಿಗೆ ಉರುಳಿಬಿದ್ದಿದೆ. ಘಟನೆಯಿಂದಾಗಿ 29ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇದುವರೆಗೆ ಸಾವನ್ನಪ್ಪಿರುವವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

ಇದನ್ನೂ ಓದಿ : Explained: ಕಲ್ಲಿದ್ದಲು ಕೊರತೆ ಎದುರಾಗಿದ್ದು ಏಕೆ? ವಿದ್ಯುತ್​ ಉತ್ಪಾದನೆ ಮೇಲೆ ಏನೆಲ್ಲಾ ಪರಿಣಾಮ? ಆರ್ಥಿಕ ಪರಿಸ್ಥಿತಿ ಏನಾದೀತು?

ವಿಜಯದಶಮಿ ಹಬ್ಬವನ್ನು ಆಚರಿಸುವ ಸಲುವಾಗಿ ಜನರು ಬಸ್ಸಿನ ಮೂಲಕ ತಮ್ಮ ಊರುಗಳಿಗೆ ತೆರಳುತ್ತಿದ್ದರು ಎನ್ನಲಾಗುತ್ತಿದೆ. ಬಸ್ಸಿನಲ್ಲಿ ಒಟ್ಟು ಎಷ್ಟು ಮಂದಿ ಪ್ರಯಾಣಿಕರು ಇದ್ದರು ಅನ್ನೋ ಬಗ್ಗೆ ಪೊಲೀಸರು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುವ ಆತಂಕ ಎದುರಾಗಿದೆ.

ಇದನ್ನೂ ಓದಿ : ಹಾವಿನಿಂದ ಕಚ್ಚಿಸಿ ಪತ್ನಿಯ ಕೊಲೆ : ಆರೋಪಿ ದೋಷಿ ಎಂದ ಕೋರ್ಟ್‌, ನಾಳೆ ಶಿಕ್ಷೆ ಪ್ರಕಟ

ಅಪಘಾತದ ಸ್ಥಳಕ್ಕೆ ಇದೀಗ ರಕ್ಷಣಾ ಕಾರ್ಯಾಚರಣೆ ನಡೆಸುವ ಸಲುವಾಗಿ ನೇಪಾಳ ಸೇನೆಯ ಚಾಪರ್‌ನ್ನು ಕಳುಹಿಸಿಕೊಡಲಾಗಿದೆ. ಇನ್ನು ಹಲವರ ತಲೆಗೆ ಗಂಭೀರ ಗಾಯವಾಗಿದ್ದು, 10 ಜನರನ್ನು ಕೊಹಲ್‌ಪುರ್ ವೈದ್ಯಕೀಯ ಕಾಲೇಜಿಗೆ ಮತ್ತು ಐವರನ್ನು ನೇಪಾಳಗುಂಜ್‌ನ ನರ್ಸಿಂಗ್ ಹೋಂಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ ಎಂದು ನೇಪಾಳಗುಂಜ್ ಏರ್‌ಪೋರ್ಟ್ ಸೆಕ್ಯುರಿಟಿ ಗಾರ್ಡ್‌ನ ಉಸ್ತುವಾರಿ ಸಂತೋಷ್ ಷಾ ಹೇಳಿದ್ದಾರೆ.

( Bus falls into River; 32 killed, 22 on spot and several injured in Nepal )

Comments are closed.